Neer Dose Karnataka
Take a fresh look at your lifestyle.

T20 Worldcup: ಭಾರತ Vs ಇಂಗ್ಲೆಂಡ್ ಸೆಮಿ ಫೈನಲ್ ಪಂದ್ಯಕ್ಕೂ ಮುನ್ನವೇ ದೊಡ್ಡ ಬದಲಾವಣೆ: ಬಲಾಢ್ಯ ಆಟಗಾರನ ಎಂಟ್ರಿ. ನಡುಕ ಆರಂಭ.

ಭಾರತ ತಂಡ ಈಗ ಭರ್ಜರಿಯಾಗಿ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ಸ್ ಹಂತಕ್ಕೆ ತಲುಪಿದೆ. ಭಾರತ ಈ ಬಾರಿ ವಿಶ್ವಕಪ್ ಗೆಲ್ಲಬೇಕು ಎನ್ನುವುದು ಎಲ್ಲರ ಗುರಿ, ಭಾರತ ತಂಡ ಕೂಡ ಇದೇ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತಿದೆ, ಟಿ20 ವಿಶ್ವಕಪ್ ಗೆಲ್ಲಲು ಇನ್ನು ಉಳಿದಿರುವುದು ಎರಡೇ ಹೆಜ್ಜೆ. ಆದರೆ ನಾಳೆ ನಡೆಯಲಿರುವ ಸೆಮಿಫೈನಲ್ ಪಂದ್ಯ ಶುರುವಾಗುವ ಮೊದಲು, ಭಾರತ ತಂಡಕ್ಕೆ ಒಂದು ಶಾಕ್ ಸಿಕ್ಕಿದೆ. ಅದೇನೆಂದರೆ, ಇಂಗ್ಲೆಂಡ್ ತಂಡಕ್ಕೆ ಒಬ್ಬ ಬಲವಾದ ಆಟಗಾರನ ಎಂಟ್ರಿಯಾಗಿದ್ದು, ಇದರಿಂದ ಭಾರತ ತಂಡದ ಆತಂಕ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಬಹುದು. ಆ ಆಟಗಾರ ಯಾರು? ನಿಜಕ್ಕೂ ಏನಾಗಿದೆ? ತಿಳಿಸುತ್ತೇವೆ ನೋಡಿ..

ಇಂಗ್ಲೆಂಡ್ ತಂಡದಲ್ಲಿ ಈಗ ಮಹತ್ವದ ಬದಲಾವಣೆ ಮಾಡಲಾಗಿದೆ, ಶ್ರೀಲಂಕಾ ವಿರುದ್ಧ ಪಂದ್ಯ ನಡೆಯುವಾಗ ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ ಅವರಿಗೆ ಗಾಯವಾದ ಕಾರಣ, ಫೀಲ್ಡಿಂಗ್ ಮಾಡುತ್ತಿದ್ದಾಗ ಗಾಯವಾದ ಅವರನ್ನು ಹೊರಗೆ ಕಳಿಸಲಾಯಿತು, ಡೇವಿಡ್ ಅವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ, ಮಲಾನ್ ಅವರಿಗೆ ತೊಡೆ ಸಂದುವಿನಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಇವರ ಬದಲಾಗಿ ಈಗ ಪ್ರಬಲವಾದ ಓಪನರ್ ಫಿಲ್ ಸಾಲ್ಟ್ ಅವರನ್ನು ಇಂಗ್ಲೆಂಡ್ ತಂಡ ಪ್ಲೇಯಿಂಗ್ 11 ಗೆ ಆಯ್ಕೆ ಮಾಡಿಕೊಂಡಿದೆ. ಫಿಲ್ ಅವರು ಕೂಡ ಅತ್ಯುತ್ತಮ ಆಟಗಾರ ಆಗಿದ್ದು, ಇವರು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಫಿಲ್ ಅವರು ಇಂಗ್ಲೆಂಡ್ ಪರವಾಗಿ ಈವರೆಗೂ 11 ಪಂದ್ಯಗಳನ್ನಾಡಿದ್ದು ಅವರ ಸ್ಟ್ರೈಕ್ ರೇಟ್ 164.3 ಆಗಿದೆ.

ಒಟ್ಟಾರೆಯಾಗಿ 256 ರನ್ಸ್ ಸ್ಕೋರ್ ಮಾಡಿದ್ದಾರೆ. ಇದರಲ್ಲಿ 2 ಅರ್ಧಶತಕ ಸಹ ಇತ್ತು. “ಮಲಾನ್ ಅವರು ಹಲವು ವರ್ಷಗಳಿಂದ ನಮ್ಮ ತಂಡದಲ್ಲಿ ಇದ್ದಾರೆ, ಅವರು ಈಗ ತಂಡದಿಂದ ಹೊರಗೆ ಇರುವ ಹಾಗೆ ಆಗಿರುವುದು ಬಹಳ ಬೇಸರ ಆಗಿದೆ. ನಮ್ಮ ತಂಡಕ್ಕೆ ಬ್ಯಾಟಿಂಗ್ ನಲ್ಲಿ ಮಲಾನ್ ಅವರು ಒಳ್ಳೆಯ ಕೊಡುಗೆ ನೀಡುತ್ತಿದ್ದರು. ಒಬ್ಬ ಒಳ್ಳೆಯ ಆಟಗಾರ ತಂಡದಲ್ಲಿ ಇಲ್ಲದೆ ಇರುವುದು ಬೇಸರದ ವಿಷಯ ಆಗಿದೆ. ಸಾಲ್ಟ್ ಅವರು ಕೂಡ ಅತ್ಯುತ್ತಮ ಬ್ಯಾಟ್ಸ್ಮನ್, ಅವರು ಮಲಾನ್ ಅವರ ಸ್ಥಾನವನ್ನು ತುಂಬುತ್ತಾರೆ..” ಎಂದು ಹೇಳಿದ್ದಾರೆ ಮೊಯಿನ್ ಅಲಿ ಅವರು.

Comments are closed.