Neer Dose Karnataka
Take a fresh look at your lifestyle.

ವಿಶ್ವಕಪ್ ನಿಂದ ಕಳೆಪೆ ಆಟವಾಡಿ ಸೋತು ಹೊರಬಿದ್ದ ನಾಯಕ ರೋಹಿತ್ ಹೇಳಿದ್ದೇನು ಗೊತ್ತೇ?? ಈ ರೀತಿ ಹೇಳುವುದು ನಾಯಕನ ಲಕ್ಷಣವೇ??

ಇಂದು ನಡೆದ ಐಸಿಸಿ ಟಿ20 ವಿಶ್ವಕಪ್ ನ ಸೆಮಿಫೈನಲ್ಸ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 10 ವಿಕೆಟ್ ಗಳ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 168 ರನ್ ಗಳ ಗುರಿಯನ್ನು ಇಂಗ್ಲೆಂಡ್ ಗೆ ನೀಡಿತು, ಆದರೆ ಇಂಗ್ಲೆಂಡ್ ನ ಆಟಗಾರರು ಹೇಲ್ಸ್ ಮತ್ತು ಬಟ್ಲರ್ ಇಬ್ಬರ ಬಿರುಸಿನ ಆಟದಿಂದ ಭಾರತ ತಂಡವು ಸೋಲನ್ನು ಕಂಡಿತು. 16 ಓವರ್ ಗಳಲ್ಲಿ ಒಂದೇ ಒಂದು ವಿಕೆಟ್ ನಷ್ಟವಿಲ್ಲದೆ, ಇಂಗ್ಲೆಂಡ್ ತಂಡ ಗೆದ್ದಿತು, ಭಾರತ ತಂಡ ಹೀನಾಯವಾಗಿ ಸೋತಿತು. ಭಾರತ ತಂಡ ಸೋತ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಹೇಳಿದ್ದು ಹೀಗೆ..

“ನಾವು ಎಲ್ಲರಿಗೂ ಪ್ರೆಶರ್ ಹ್ಯಾಂಡಲ್ ಮಾಡೋದು ಹೇಗೆ ಅಂತ ಹೇಳಿಕೊಡೋದಕ್ಕೆ ಆಗಲ್ಲ. ಹಲವು ಆಟಗಾರರು ಐಪಿಎಲ್ ನಲ್ಲಿ ಆಡುತ್ತಾರೆ, ಅದರಿಂದ ಅವರಿಗೆ ಪ್ರೆಶರ್ ಹ್ಯಾಂಡಲ್ ಮಾಡೋದು ಹೊತ್ತಿರುತ್ತದೆ. ಆದರೆ ನಾಕೌಟ್ಸ್ ವಿಷಯಕ್ಕೆ ಬಂದರೆ, ಕಾಮ್ ಆಗಿರುವುದು ಬಹಳ ಮುಖ್ಯ..” ಎಂದಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮ. ಮುಂದುವರೆದು ಮಾತನಾಡಿದ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಚೆನ್ನಾಗಿಯೇ ಇತ್ತು, ಆದರೆ ಬೌಲಿಂಗ್ ನಲ್ಲಿ ತಂಡ ಹಿಂದುಳಿಯಿತು ಎಂದು ಹೇಳಿದ್ದಾರೆ.

“ಕೊನೆಯ ಸಮಯಕ್ಕೆ ನಮ್ಮ ಬ್ಯಾಟಿಂಗ್ ಚೆನ್ನಾಗಿತ್ತು. ಆದರೆ ಬೌಲಿಂಗ್ ಅಂದುಕೊಂಡ ಹಾಗೆ ಇರಲಿಲ್ಲ. ನಾವು ಬೌಲಿಂಗ್ ಶುರು ಮಾಡಿದ ವಿಧಾನ ಅಷ್ಟು ಸರಿಯಾಗಿ ಇರಲಿಲ್ಲ. ಭುವಿ ಅವರು ಸ್ವಲ್ಪ ಸ್ಟ್ರಿಕ್ಟ್ ಆಗಿ ಇರಬೇಕಿತ್ತು, ಅಡಿಲೇಡ್ ನಲ್ಲಿ ರನ್ಸ್ ಎಲ್ಲಿ ಹೋಗುತ್ತದೆ ಎಂದು ನಮಗೆ ಗೊತ್ತಿತ್ತು. ಅದರ ಬಗ್ಗೆ ನಾವು ಮಾತಾಡಿದ್ವಿ..ಆದರೆ ಅದು ನಡೆಯಲಿಲ್ಲ..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ. ಒಟ್ಟಿನಲ್ಲಿ ಭಾರತ ತಂಡ ಈ ವರ್ಷ ಟಿ20 ವಿಶ್ವಕಪ್ ಗೆಲ್ಲುವ ಕನಸು ಮತ್ತೊಮ್ಮ ಸೋತಿದೆ.

Comments are closed.