Neer Dose Karnataka
Take a fresh look at your lifestyle.

Rashmika Mandanna: ನಾನೇ ಎಲ್ಲ ಎಂದು ಬೀಗುತ್ತಿದ್ದ ರಶ್ಮಿಕಾ ಕಾಲ ಮುಗಿಯಿತೇ?? ಸುಮ್ಮನೆ ವಿವಾದ ಮಾಡಿಕೊಂಡ ಕಾರಣ ಏನಾಗಿದೆ ಗೊತ್ತೇ??

Rashmika Mandanna: ಕೊಡಗಿನ ಹುಡುಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ನಂತರ ಕನ್ನಡದಲ್ಲಿ ಗಣೇಶ್ (Ganesh) ಅವರೊಡನೆ ಚಮಕ್ ಸಿನಿಮಾದಲ್ಲಿ ನಟಿಸಿ ಕನ್ನಡದಲ್ಲಿ ಫೇಮಸ್ ಆದರು, ಇವರ ಜನಪ್ರಿಯತೆ ಹೆಚ್ಚಾಗಿದ್ದು, ತೆಲುಗಿಗೆ ಎಂಟ್ರಿ ಕೊಟ್ಟ ನಂತರ. ತೆಲುಗಿನ ಚಲೊ (Chalo) ಮತ್ತು ಗೀತಾ ಗೋವಿಂದಮ್ (Geetha Govindam) ಸಿನಿಮಾ ಯಶಸ್ಸಿನಿಂದ ರಶ್ಮಿಕಾ ಅವರಿಗೆ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮಹೇಶ್ ಬಾಬು (Mahesh Babu), ಅಲ್ಲು ಅರ್ಜುನ್ (Allu Arjun) ಅವರೊಡನೆ ನಟಿಸಿ, ಸೈ ಎನ್ನಿಸಿಕೊಂಡರು ರಶ್ಮಿಕಾ.

ಪುಷ್ಪ (Pushpa) ಸಿನಿಮಾ ಯಶಸ್ಸು ಎಷ್ಟು ದೊಡ್ಡ ಮಟ್ಟಕ್ಕೆ ರಶ್ಮಿಕಾ ಅವರಿಗೆ ಹೆಸರು ತಂದುಕೊಟ್ಟಿತು ಎಂದು ಗೊತ್ತೇ ಇದೆ. ಈ ಸಿನಿಮಾ ಇಂದ ಬಾಲಿವುಡ್ ಬಾಗಿಲು ಸಹ ತೆರೆಯಿತು. ಒಟ್ಟಿನಲ್ಲಿ ರಶ್ಮಿಕಾ ಅವರು ನ್ಯಾಷನಲ್ ಕ್ರಶ್ ಆಗಿ ಮೆರೆಯಲು ಶುರು ಮಾಡಿದರು. ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾ ಅವಕಾಶಗಳು ರಶ್ಮಿಕಾ ಅವರಿಗೆ ಸಿಕ್ಕಿದೆ. ರಣಬೀರ್ ಕಪೂರ್ (Ranbir Kapoor) ಅವರೊಡನೆ ಅನಿಮಲ್ ಸಿನಿಮಾ, ತಮಿಳು ನಟ ವಿಜಯ್ (Vijay) ಅವರೊಡನೆ ವಾರಿಸು, ಜೊತೆಗೆ ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಕನ್ನಡ ಬಿಟ್ಟು ಹೋದ ರಶ್ಮಿಕಾ ಅವರು ಬೇರೆ ಭಾಷೆಗಳಲ್ಲಿ ಮಿಂಚುತ್ತಾ, ನಾನೇ ಎಲ್ಲಾ ಎನ್ನುವ ಹಾಗಿದ್ದರು. ಇದನ್ನು ಓದಿ.. Hansika Motwani: ಒಂದು ಕಾಲದ ಖ್ಯಾತ ನಟಿ ಮದುವೆಯಾಗುತ್ತಿರುವುದು ಯಾರನ್ನು ಗೊತ್ತೇ?? ಸಂಸಾರ ಹೊಡೆದದ್ದು ಯಾರದ್ದು ಗೊತ್ತೇ??

ಆದರೆ ಈ ವರ್ಷ ರಶ್ಮಿಕಾ ಅವರು ಎಡವಿದ್ದಾರೆ. ಈ ವರ್ಷ ರಶ್ಮಿಕಾ ಅವರು ಅಭಿನಯಿಸಿರುವ ಮೂರು ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ ಎರಡು ಮೇನ್ ಹೀರೋಯಿನ್ ಆಗಿ ನಟಿಸಿದ್ದರು, ಇನ್ನೊಂದರಲ್ಲಿ ಸಪೋರ್ಟಿವ್ ರೋಲ್ ನಲ್ಲಿ ನಟಿಸಿದ್ದರು. ನಾಯಕಿಯಾಗಿ ನಟಿಸಿದ್ದ, ಆಡವಾಳ್ಳು ಮೀಕು ಜೋಹರ್ಲ್ ಸಿನಿಮಾ ಕೇವಲ 13.50 ಕೋಟಿ ಹಣಗಳಿಕೆ ಮಾಡಿತು, ಈ ಸಿನಿಮಾದ ಬಜೆಟ್ 15 ಕೋಟಿ ಆಗಿದೆ. ಇನ್ನೊಂದು ಸಿನಿಮಾ ಅಮಿತಾಭ್ ಬಚ್ಚನ್ (Amitabh Bachchan) ಅವರೊಡನೆ ನಟಿಸಿದ ಗುಡ್ ಬೈ ಸಿನಿಮಾ, ಈ ಸಿನಿಮಾ ಕಲೆಕ್ಟ್ ಮಾಡಿದ್ದು 9.66 ಕೋಟಿ, ಈ ಸಿನಿಮಾದ ಬಜೆಟ್ 20 ಕೋಟಿ. ಈ ಎರಡು ಸಿನಿಮಾಗಳು ಬಜೆಟ್ ಅನ್ನು ಕೂಡ ರಿಕವರ್ ಮಾಡಿಲ್ಲ. ರಶ್ಮಿಕಾ ಮಂದಣ್ಣ ಸಪೋರ್ಟಿವ್ ರೋಲ್ ನಲ್ಲಿ ನಟಿಸಿದ, ಸೀತಾರಾಮಂ ಸಿನಿಮಾ 100 ಕೋಟಿ ಗಳಿಕೆ ಮಾಡಿತು. ಒಟ್ಟಿನಲ್ಲಿ ರಶ್ಮಿಕಾ ಅವರಿಗೆ ಈ ವರ್ಷ ಒಳ್ಳೆಯ ಪಾಠ ಕಲಿಸಿದೆ. ಇದನ್ನು ಓದಿ..Kannada Astrology: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೇ, ಕರಿಮೆಣಸು ಬಳಸಿ ಈ ಚಿಕ್ಕ ಕೆಲಸ ಮಾಡಿ ಸಾಕು. ಹಣ ಹುಡುಕಿಕೊಂಡು ಬರುತ್ತದೆ.

Comments are closed.