Neer Dose Karnataka
Take a fresh look at your lifestyle.

Ramachari: ಧಾರಾವಾಹಿಯಲ್ಲಿ ಬಹು ನಿರೀಕ್ಷಿತ ಅತ್ತಿಗೆ ಅಪರ್ಣ ಪಾತ್ರ ಮುಗಿಯಿತೇ? ಅಸಲಿಗೆ ನಿಜವಾಗಲೂ ನಡೆದದ್ದು ಏನು ಗೊತ್ತೇ?

42,374

Ramachari: ಕಲರ್ಸ್ ಕನ್ನಡ (Colors Kannada) ವಾಹಿನಿಯ ಪ್ರಸಿದ್ಧ ಧಾರವಾಹಿಗಳಲ್ಲಿ ಒಂದಾದ ರಾಮಾಚಾರಿ ಧಾರಾವಾಹಿಯಲ್ಲಿ ಈಗ ಬಿಗ್ ಟ್ವಿಸ್ಟ್ ಒಂದನ್ನು ಕೊಟ್ಟಿದ್ದಾರೆ. ರಾಮಾಚಾರಿಯನ್ನು ತಾಯಿ ಹಾಗೆ ನೋಡಿಕೊಳ್ಳುತ್ತಿದ್ದ ಅತ್ತಿಗೆ ಅಪರ್ಣ ಶಾಸ್ತ್ರಿ ಧಾರವಾಹಿಯಲ್ಲಿ ಮೃತರಾಗಿದ್ದಾರೆ. ಅತ್ತಿಗೆಯ ಆಪರೇಷನ್ ಮಾಡಿಸಲು ರಾಮಾಚರಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಅಪರ್ಣ ಶಾಸ್ತ್ರಿ ಆಗಾಗ ಆಸ್ಪತ್ರೆಗೆ ಹೋಗಿಬರುತ್ತಿದ್ದರು, ಮೊದಲಿಗೆ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ, ನಂತರ ಆಕೆಗೆ ಕ್ಯಾನ್ಸರ್ ಇರುವುದರಿಂದ ಪದೇ ಪದೇ ಆಸ್ಪತ್ರೆಗೆ ಹೋಗಿ ಬರುತ್ತಾರೆ ಎಂದು ಗೊತ್ತಾಯಿತು.

ಅಪರ್ಣ ಅವರಿಗೆ ಆಪರೇಷನ್ ಮಾಡಿಸಲು ಲಕ್ಷಗಟ್ಟಲೆ ಹಣ ಬೇಕಿದ್ದಾಗ, ರಾಮಾಚಾರಿ ಆ ಹಣವನ್ನು ಹೊಂದಿಸಲು ಎಷ್ಟೇ ಪ್ರಯತ್ನಪಟ್ಟರು, ಏನೆಲ್ಲಾ ಕಷ್ಟಗಳನ್ನು ಎದುರಿಸಿದರು ಅದು ಸಾಧ್ಯವಾಗಲಿಲ್ಲ. ಇತ್ತ ಚಾರು ಕೂಡ ಅದಕ್ಕೆ ತಡೆ ಹಾಕುತ್ತಾ ಬರುತ್ತಾಳೆ. ಇದರಿಂದ ಸರಿಯಾದ ಸಮಯಕ್ಕೆ ಆಪರೇಷನ್ ಮಾಡಿಸಲು ಸಾಧ್ಯವಾಗದ ಕಾರಣ, ಅಪರ್ಣ ಶಾಸ್ತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅತ್ತಿಗೆಯನ್ನು ಆ ರೀತಿ ನೋಡಿ ಇಡೀ ಮನೆಯವರು ಮತ್ತು ರಾಮಾಚಾರಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಓದಿ.. Cricket News: ಭಾರತ ಕ್ರಿಕೆಟ್ ತಂಡದಿಂದ ಈ ಕೂಡಲೇ ನಿವೃತ್ತಿ ಪಡೆದುಕೊಳ್ಳಬೇಕಾದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಈ ಕಡೆ ಚಾರು, ರಾಮಾಚಾರಿ ಪ್ರೊಪೋಸ್ ಮಾಡುವ ಕ್ಷಣಕ್ಕೆ ಅತ್ತಿಗೆಗೆ ಸೀರಿಯಸ್ ಆಗಿದೆ ಎಂದು ಕಾಲ್ ಬಂದಿದ್ದಕ್ಕೆ ರಾಮಾಚಾರಿ ಆ ಸ್ಥಳದಿಂದ ಹೊರಟುಹೋಗುತ್ತಾನೆ. ಆದರೆ ಚಾರು ಅದೇ ಜಾಗದಲ್ಲಿ ಕಾಯುತ್ತಿದ್ದಾಳೆ. ಚಾರುಗೆ ರಾಮಾಚಾರಿ ಮೇಲೆ ಪ್ರೀತಿ ಶುರುವಾಗಿದೆ, ಆದರೆ ಅದೇ ಸಮಯಕ್ಕೆ ಅತ್ತಿಗೆಯ ನಿಧನವಾಗಿದೆ. ಅಷ್ಟೇ ಅಲ್ಲದೆ, ರಾಮಾಚಾರಿ ಅತ್ತಿಗೆ ನಿಧನರಾಗಲು, ಒಂದು ಕಡೆಯಿಂದ ಚಾರು ಕಾರಣವಾಗಿದ್ದಾಳೆ. ಧಾರವಾಹಿಗೆ ಇದೊಂದು ಬಿಗ್ ಟ್ವಿಸ್ಟ್ ಆಗಿದ್ದು, ಅಪರ್ಣ ಶಾಸ್ತ್ರಿ ಪಾತ್ರ ಅಂತ್ಯವಾಗಿದೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಪಾಕ್ ಅವನನ್ನೇ ಪ್ರೀತಿ ಮಾಡಿ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಡೈವೋರ್ಸ್ ವಿಚಾರದಲ್ಲಿ ಮಹತ್ವದ ತಿರುವು: ಇದೀಗ ಏನು ಮಾಡಿದ್ದಾನೆ ಗೊತ್ತೇ??

Leave A Reply

Your email address will not be published.