Neer Dose Karnataka
Take a fresh look at your lifestyle.

Cricket News: ಟಿ 20 ಕೋಚ್ ಆಗಿ ದ್ರಾವಿಡ್ ಬೇಡ ಎಂದು ಬೇರೆ ಮಾಜಿ ಆಟಗಾರನನ್ನು ಆಯ್ಕೆ ಮಾಡಿದ ಹರ್ಭಜನ್, ಬೇಡವೇ ಬೇಡ ಎಂದ ನೆಟ್ಟಿಗರು.

Cricket News: ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ (T20 World Cup) ನಲ್ಲಿ ಸೋತ ನಂತರ ತಂಡದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವ ಪ್ರಯತ್ನ ನಡೆಯುತ್ತಿದ್ದು, ಈಗಾಗಲೇ ಆಯ್ಕೆ ಸಮಿತಿಯನ್ನು ಬಿಸಿಸಿಐ (BCCI) ವಜಾ ಗೊಳಿಸಿದೆ. ಹೊಸ ಆಯ್ಕೆ ಸಮಿತಿಯನ್ನು ರೂಪಿಸಲಿದೆ. ಆಟಗಾರರ ವಿಚಾರದಲ್ಲಿ ಕೂಡ ಹೊಸ ಪ್ರಯತ್ನಗಳು, ಪ್ರಯೋಗಗಳು, ಹೆಚ್ಚಾಗಿ ಯುವ ಆಟಗಾರರನ್ನು ಆಯ್ಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಮಯದಲ್ಲಿ ಮತ್ತೊಂದು ಬದಲಾವಣೆಗೆ ಆಗ್ರಹ ಹೆಚ್ಚಾಗಿದೆ.

ಭಾರತ ತಂಡದ ಕೋಚ್ ಅನ್ನು ಬದಲಿಸಬೇಕು ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ, ಪ್ರಸ್ತುತ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ಅವರಿದ್ದಾರೆ, ಆದರೆ ದ್ರಾವಿಡ್ ಅವರ ಬದಲಾಗಿ, ಆಶಿಷ್ ನೆಹ್ರಾ (Ashish Nehra) ಅವರನ್ನು ಕೋಚ್ ಆಗಿ ಪರಿಗಣಿಸಬೇಕು ಎಂದು ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ಹೇಳಿದ್ದಾರೆ. “ರಾಹುಲ್ ದ್ರಾವಿಡ್ ಅವರ ಮೇಲೆ ನನಗೆ ಗೌರವವಿದೆ. ಅದರಿಂದಲೇ ಹೇಳುತ್ತಿದ್ದೇನೆ. ಟಿ20 ಮಾದರಿಯ ಪಂದ್ಯದ ಬಗ್ಗೆ ಆಶಿಷ್ ನೆಹ್ರಾ ಅವರಿಗೆ ಹೆಚ್ಚು ಜ್ಞಾನವಿದೆ. 2017ರಲ್ಲಿ ಅವರು ನಿವೃತ್ತಿ ಹೊಂದಿದ್ದಾರೆ. ನಾವೆಲ್ಲರು ಜೊತೆಯಾಗಿ ಹಲವು ಪಂದ್ಯಗಳನ್ನು ಆಡಿದ್ದೇವೆ. ಇದನ್ನು ಓದಿ..Kannada News: ಮುದ್ದು ಮುದ್ದಾಗಿ ‘ಸಿಂಗಾರ ಸಿರಿಯೇ’ ಹಾಡು ಹೇಳಿದ ಪುಟ್ಟ ಮಗು ವೀಡಿಯೋ ವೈರಲ್ ಕಂತಾರ. ವಿಡಿಯೋ ನೋಡಿದ್ರಾ?

ರಾಹುಕ್ ದ್ರಾವಿಡ್ ಅವರಿಗೆ ಅಪಾರವಾದ ಜ್ಞಾನವಿದೆ. ಆದರೆ ಟಿ20 ಪಂದ್ಯಗಳು ಕಠಿಣವಾಗಿರುತ್ತದೆ. ಇತ್ತೀಚಿನ ವರ್ಷದಲ್ಲಿ ನಿವೃತ್ತಿ ಹೊಂದಿರುವವರು ಇದಕ್ಕೆ ಸೂಕ್ತವಾಗಿರುತ್ತಾರೆ. ದ್ರಾವಿಡ್ ಅವರನ್ನು ಕೋಚ್ ಸ್ಥಾನದಿಂದ ತೆಗೆಯಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಗೆ ದ್ರಾವಿಡ್ ಅವರು ಮತ್ತು ನೆಹ್ರಾ ಅವರು ಜೊತೆಯಾಗಿ ಸೇರಿ ವಿಶ್ವಕಪ್ ತಂಡವನ್ನು ಕಟ್ಟಬಹುದು ಎನ್ನುವುದು ನನ್ನ ಅಭಿಪ್ರಾಯ ಆಗಿದೆ..ಎಂದು ಹೇಳಿದ್ದಾರೆ ಹರ್ಭಜನ್ ಸಿಂಗ್. ಇದನ್ನು ಓದಿ..Biggboss Kannada: ಈ ಬಾರಿಯ ವಿನ್ನರ್, ರಾಕೇಶ್, ರೂಪೇಶ್ ಹಾಗೂ ರಾಜಣ್ಣ ಇವರು ಯಾರು ಅಲ್ಲ. ಆ ಟಾಪ್ ಲೇಡಿ ನೇ ವಿನ್ನರ್. ಯಾರು ಗೊತ್ತೇ??

Comments are closed.