Neer Dose Karnataka
Take a fresh look at your lifestyle.

Cricket News: ಹಿರಿಯ ಆಟಗಾರಿಗೆ ಮೈನದಲ್ಲಿ ಗೌರವ ಕೊಡದ ಪಾಂಡ್ಯ, ನಾಯಕನಾಗಿ ಮೊದಲ ಸರಿ ಗೆದ್ದ ಬಳಿಕ ಹೇಳಿದ್ದೇನು ಗೊತ್ತೇ?? ಈತ ನಾಯಕನಾಗಲು ಅರ್ಹವೇ?

Cricket News: ಭಾರತ ತಂಡವು ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ನ್ಯೂಜಿಲೆಂಡ್ ನಲ್ಲಿ ಟಿ20 ಪಂದ್ಯಗಳ ಸರಣಿಯನ್ನು (India vs New Zea Land) ಮುಗಿಸಿದ್ದು, ಓಡಿಐ ಈಗ ಶುರುವಾಗಿದೆ. ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಯಿತು. ಎರಡನೇ ಪಂದ್ಯದಲ್ಲಿ ಭಾರತ ತಂಡ (Team India) 65 ರನ್ ಗಳ ಭರ್ಜರಿ ಜಯ ಸಾಧಿಸಿತು. ಮೂರನೇ ಪಂದ್ಯ ನಡೆಯುವಾಗ ಮಳೆ ಬಂದಿತು, ಆಗ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ ನಡೆದಾಗ, ಆ ಪಂದ್ಯವು ಟೈ ಆಯಿತು. ಕೊನೆಗೆ 1-0 ಅಂತರದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.

ಭಾರತ ಗೆದ್ದಿದ್ದರು ಸಹ ಕೆಲವು ವಿಚಾರಗಳಲ್ಲಿ ತಂಡದ ಮೇಲೆ ಟೀಕೆಗಳು ವ್ಯಕ್ತವಾಗುತ್ತಿದೆ. ರಿಷಬ್ ಪಂತ್ಅವರು (Rishab Pant) ಆತಂತ ಕಳಪೆ ಫಾರ್ಮ್ ನಲ್ಲಿದ್ದರು ಸಹ ಅವರಿಗೆ ಪದೇ ಪದೇ ಅವಕಾಶ ಕೊಡುತ್ತಿರುವುದು ಮತ್ತು, ಸಂಜು ಸ್ಯಾಮ್ಸನ್ (Sanju Samson) ಮತ್ತು ಉಮ್ರಾನ್ ಮಲಿಕ್ (Umran Malik) ಅವರಂಥ ಆಟಗಾರರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗದಿರುವ ಬಗ್ಗೆ, ಟೀಕೆಗಳು ಕೇಳುಬರುತ್ತಿದೆ. ಹಿರಿಯ ಆಟಗಾರರು ಸಹ ಇದರ ಬಗ್ಗೆ ಮಾತನಾಡುತ್ತಿದ್ದು, ಹಾರ್ದಿಕ್ ಪಾಂಡ್ಯ ಪ್ರತಿಭೆ ಇರುವ ಆಟಗಾರರಿಗೆ ಅವಕಾಶ ಕೊಡಬೇಕಿತ್ತು ಎನ್ನುತ್ತಿದ್ದಾರೆ. ಆದರೆ ಇದಕ್ಕೆಲ್ಲ ಹಾರ್ದಿಕ್ ಪಾಂಡ್ಯ (Hardik Pandya) ಅವರು ಹೇಳಿರುವುದೇ ಬೇರೆ ಆಗಿದೆ. ಇದನ್ನು ಓದಿ.. Kannada News: ತನ್ನ ನಟನೆ ಮೂಲಕ ಈ ವಯಸ್ಸಿನಲ್ಲಿಯೂ ದೇಶದ ಜನರ ಮನೆಗೆದ್ದಿರುವ ಪವಿತ್ರ ಲೋಕೇಶ್ ವಯಸ್ಸು ತಿಳಿದರೆ ನೀವು ನಂಬೋದಿಲ್ಲ ಎಷ್ಟು ಗೊತ್ತೇ??

ಪಂದ್ಯಗಳು ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಅವರು ಹೇಳಿದ್ದು ಹೀಗೆ, “ಇದು ನನ್ನ ತಂಡ, ಕೋಚ್ ಗೆ ಮತ್ತು ನನಗೆ ಹೇಗೆ ಸರಿ ಅನ್ನಿಸುತ್ತದೆಯೋ ಆ ರೀತಿ ನನ್ನ ತಂಡ ಇರುತ್ತದೆ. ಹೊರಗಿನವರ ಮಾತು ಇಲ್ಲಿನವರ ಮೇಲೆ ಪರಿಣಾಮ ಬೀರುವುದಿಲ್ಲ. ಕೋಚ್ ಮೇಲೆ ನಾನು ವಿಶ್ವಾಸ ಇಟ್ಟಿದ್ದೇನೆ. ತಂಡಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ನಾವು ಜೊತೆಯಾಗಿ ತೆಗೆದುಕೊಳ್ಳುತ್ತಿದ್ದೇವೆ, ಯಾರು ಹೊರಗೆ ಹೋಗಿದ್ದಾರೆ ಎನ್ನುವುದು ಮುಖ್ಯವಲ್ಲ. ನಮಗೆ ಅಗತ್ಯ ಇರುವ ಹಾಗೆ ತಂಡವನ್ನು ರೂಪಿಸಿ ಮೈದಾನಕ್ಕೆ ಬರುತ್ತಿದ್ದೇವೆ. ಎಲ್ಲರಿಗೂ ಅವಕಾಶ ಸಿಗುತ್ತದೆ, ಅಲ್ಲಿಯವರೆಗೂ ಕಾಯಬೇಕು. ಇದು ದೊಡ್ಡ ಸರಣಿ ಆಗಿದ್ದರೆ, ಎಲ್ಲರಿಗೂ ಅವಕಾಶ ಸಿಗುತ್ತಿತ್ತು. ಆದರೆ ಇದು ಚಿಕ್ಕ ಸರಣಿ ಹಾಗಾಗಿ ಎಲ್ಲರಿಗೂ ಅವಕಾಶ ಕೊಡೋದಕ್ಕೆ ಆಗಿಲ್ಲ. ತಂಡದಲ್ಲಿ ಹೆಚ್ಚು ಬದಲಾವಣೆ ಮಾಡುವುದು ನನಗೆ ವಿಶ್ವಾಸವಿಲ್ಲ..” ಎಂದು ಹೇಳಿದ್ದಾರೆ ಹಾರ್ದಿಕ್ ಪಾಂಡ್ಯ. ಇದನ್ನು ಓದಿ..Kannada News: ಬಂಗಾರಂತಿರುವ ಹೆಂಡತಿಯನ್ನು ಮನೆಯಲ್ಲಿ ಇಟ್ಟುಕೊಂಡು ಗಂಡ ಮಾಡುತ್ತಿದ್ದ ಕೆಲಸ ಏನು ಗೊತ್ತೇ?? ತಾಳಲಾರದೆ ಹೆಂಡತಿ ಮಾಡಿದ್ದೇನು ಗೊತ್ತೇ?

Comments are closed.