Neer Dose Karnataka
Take a fresh look at your lifestyle.

Cricket News: ಈಗ ತಾನೇ ರಾಹುಲ್ ರವರ ಸ್ಥಾನವನ್ನು ತುಂಬುವ ಭರವಸೆ ನೀಡುತ್ತಿರುವ ಶುಭಾಂ ಗಿಲ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು ಗೊತ್ತೆ?

Cricket News: ಭಾರತ ತಂಡ ಪ್ರಸ್ತುತ ಭಾರತ ವರ್ಸಸ್ ನ್ಯೂಜಿಲೆಂಡ್ ಸೀರೀಸ್ ಅನ್ನು ಆಡುತ್ತಿದೆ. ಟಿ20 ಸೀರೀಸ್ ನಲ್ಲಿ ಪಾಲ್ಗೊಂಡು ಗೆದ್ದ ಭಾರತ ಈಗ ಓಡಿಐ ಆಡುತ್ತಿದೆ. ಈ ಪಂದ್ಯಗಳ ಮೂಲಕ ಭಾರತ ತಂಡಕ್ಕೆ ಹೊಸ ಓಪನರ್ ಬ್ಯಾಟ್ಸ್ಮನ್ ಸಿಕ್ಕಾಗಿದೆ. ಇಷ್ಟು ವರ್ಷಗಳು ಕೆ.ಎಲ್.ರಾಹುಲ್ ಅವರು ಓಪನರ್ ಆಗಿ ಕಣಕ್ಕೆ ಇಳಿಯುತ್ತಿದ್ದರು. ಪ್ರಸ್ತುತ ಅವರು ಕಳಪೆ ಫಾರ್ಮ್ ನಲ್ಲಿದ್ದಾರೆ, ಪ್ರಸ್ತುತ ಓಪನರ್ ಆಗಿ ಕಣಕ್ಕೆ ಇಳಿದು ಉತ್ತಮ ಪ್ರದರ್ಶನ ನೀಡಿರುವವರು ಶುಭಮನ್ ಗಿಲ್. 22 ವರ್ಷದ ಈ ಯುವ ಆಟಗಾರ ಎರಡನೇ ಓಡಿಐ ಪಂದ್ಯದಲ್ಲಿ 42 ಪಂದ್ಯಗಳಲ್ಲಿ 45 ರನ್ಸ್ ಗಳಿಸಿದರು.

ಒಳ್ಳೆಯ ಇನ್ನಿಂಗ್ಸ್ ನೀಡಿರುವ ಇವರ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಮತ್ತು ಕೋಚ್ ರವಿ ಶಾಸ್ತ್ರಿ ಅವರು ಮಾತನಾಡಿದ್ದಾರೆ, “ಈ ದಿನ ಅವರು ಆಡಿದ ಟೈಮಿಂಗ್ ಬಹಳ ಚೆನ್ನಾಗಿತ್ತು. ನೀವು ಡೆಪ್ತ್ ನಲ್ಲಿರುವಾಗ, ಇನ್ನು ಜೋರಾಗಿ ಬಾಲ್ ಹೊಡೆಯುವ ಪ್ರಯತ್ನ ಮಾಡುತ್ತೀರಿ..ಅವರು ಒಳ್ಳೆಯ ಕಂಟ್ರೋಲ್ ನಲ್ಲಿದ್ದರು, ಒಳ್ಳೆಯ ಫುಟ್ ವರ್ಕ್ ಮಾಡಿದ್ದರು. ಅವರು ಆಡೋದನ್ನ ನೋಡೋದಕ್ಕೆ ತುಂಬಾ ಸಂತೋಷ ಆಗುತ್ತೆ. ಬಹಳ ವರ್ಷಗಳ ಕಾಲ ತಂಡದಲ್ಲಿ ಇರುವಂಥಾ ಕ್ವಾಲಿಟಿ ಪ್ಲೇಯರ್ ಅವರು. ಅವರಲ್ಲಿ ವರ್ಕ್ ಎಥಿಕ್ಸ್ ಇದೆ.. ಇದನ್ನು ಓದಿ.. Kannada News: ಇಷ್ಟು ದಿವ ಕಾಂತಾರ ಜೊತೆ ನಿಂತಿದ್ದ ದೈವಾರಾಧಕರು ಉಲ್ಟಾ ಹೊಡೆದು ಶಾಕ್: ಕಾಂತಾರ ವಿರುದ್ಧ ಮುಗಿಬಿದ್ದದ್ದು ಯಾಕೆ ಗೊತ್ತೇ?

ಚೆನ್ನಾಗಿ ಪ್ರಾಕ್ಟೀಸ್ ಮಾಡ್ತಾರೆ, ಆಟದ ಮೇಲೆ ಪ್ರೀತಿ ಇದೆ, ಆಟದ ಹಸಿವಿದೆ. ಈಗ ಚೆನ್ನಾಗಿ ಗ್ರೂಮ್ ಆಗುತ್ತಿರುವುದರಿಂದ ಬಹಳ, ಹೆಚ್ಚು ಸಮಯ ಇರುತ್ತಾರೆ…” ಎಂದು ಹೇಳಿದ್ದಾರೆ ರವಿ ಶಾಸ್ತ್ರಿ. ಒಟ್ಟಿನಲ್ಲಿ ಭಾರತ ತಂಡಕ್ಕೆ ಮತ್ತೊಬ್ಬ ಭರವಸೆಯ ಪ್ಲೇಯರ್ ಸಿಕ್ಕಿರುವುದು ಸಂತೋಷದ ವಿಚಾರ ಆಗಿದೆ. ಮುಂದಿನ ಪಂದ್ಯ ನವೆಂಬರ್ 30 ರಂದು ನಡೆಯಲಿದ್ದು, ಪಂದ್ಯಕ್ಕಾಗಿ ಕಾಯುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada Astrology: ಅಬ್ಬಾ ಕೊನೆಗೂ ಈ ರಾಶಿಗಳಿಗೆ ಕಷ್ಟ ಮುಕ್ತಾಯ: ಇನ್ನು ಶುಕ್ರ ದೆಸೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ?

Comments are closed.