Neer Dose Karnataka
Take a fresh look at your lifestyle.

Cricket News: ಈ ಬಾರಿಯೂ ಕೂಡ ಸಂಜು ಸ್ಯಾಮ್ಸನ್ ರವರನ್ನು ಕೈ ಬಿಡಲು ಶಿಖರ್ ಧವನ್ ಕೊಟ್ಟ ಕಾರಣ ಏನು ಗೊತ್ತೇ??

Cricket News: ಭಾರತ ತಂಡ (Team India) ಈಗ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಓಡಿಐ ಪಂದ್ಯಗಳನ್ನು ಆಡುತ್ತಿದೆ, ಮೊದಲ ಪಂದ್ಯವನ್ನು ಹೀನಾಯವಾಗಿ ಸೋತ ನಂತರ ಭಾರತ ತಂಡಕ್ಕೆ ಗೆಲುವಿನ ಅಗತ್ಯತೆ ತುಂಬಾ ಇತ್ತು. ಮೊದಲ ಪಂದ್ಯದಲ್ಲಿ 307ರ ಬೃಹತ್ ಮೊತ್ತವನ್ನು ಭಾರತ ತಂಡ ಕಲೆಹಾಕಿದ್ದರು ಸಹ, ಭಾರತ ತಂಡದಲ್ಲಿ 6ನೇ ಬೌಲರ್ ನ ಕೊರತೆಯಿಂದ ಸೋಲುವ ಹಾಗಾಯಿತು ಎನ್ನುವ ಅಭಿಪ್ರಾಯ ಶುರುವಾಯಿತು. ಹಾಗಾಗಿ ಎರಡನೇ ಪಂದ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಯಿತು. ಪ್ಲೇಯಿಂಗ್ 11ನಲ್ಲಿದ್ದ ಇಬ್ಬರು ಆಟಗಾರರನ್ನು ತೆಗೆದು ಹಾಕಲಾಯಿತು.

ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ಮತ್ತು ಶಾರ್ದೂಲ್ ಠಾಕೂರ್ (Shardool Thakur) ಪ್ಲೇಯಿಂಗ್ 11 ನಲ್ಲಿದ್ದರು, ಆದರೆ ಎರಡನೇ ಪಂದ್ಯದಲ್ಲಿ ಇವರಿಬ್ಬರನ್ನು ಕೈಬಿಟ್ಟು ದೀಪಕ್ ಚಹರ್ (Deepak Chahar) ಮತ್ತು ದೀಪಕ್ ಹೂಡಾ (Deepak Hooda) ಅವರನ್ನು ಸೇರಿಸಿಕೊಳ್ಳಲಾಯಿತು. ಇದರ ಬಗ್ಗೆ ಹಲವರಿಗೆ ಅಸಮಾಧಾನ ಇತ್ತು, ಏಕೆಂದರೆ ಸಂಜು ಸ್ಯಾಮ್ಸನ್ ಪ್ರತಿಭಾನ್ವಿತ ಆಟಗಾರ, ಅವರಿಗೆ ಟೀಮ್ ಇಂಡಿಯಾದಲ್ಲಿ ಉತ್ತಮವಾದ ಅವಕಾಶಗಳು ಸಿಗುತ್ತಿಲ್ಲ ಎನ್ನುವ ಮಾತುಗಳನ್ನು ಹಿರಿಯ ಕ್ರಿಕೆಟಿಗರು ಸಹ ಹೇಳುತ್ತಿದ್ದಾರೆ. ಆದರೆ ಈಗ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿರುವ ಶಿಖರ್ ಧವನ್ ಅವರು ಇದಕ್ಕೆ ಉತ್ತರ ನೀಡಿದ್ದಾರೆ. ಇದನ್ನು ಓದಿ.. Cricket News: ಈಗ ತಾನೇ ರಾಹುಲ್ ರವರ ಸ್ಥಾನವನ್ನು ತುಂಬುವ ಭರವಸೆ ನೀಡುತ್ತಿರುವ ಶುಭಾಂ ಗಿಲ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು ಗೊತ್ತೆ?

“ಇಲ್ಲಿ ವೆಟ್ನೆಸ್ ಹೆಚ್ಚಿರುವ ಕಾರಣ, ಮೊದಲು ಬೌಲಿಂಗ್ ಮಾಡಬೇಕು ಎನ್ನುವ ಪ್ಲಾನ್ ಇತ್ತು. ಹಿಂದಿನ ಪಂದ್ಯದಲ್ಲಿ ಮೊದಲ 10 ರಿಂದ 15 ಓವರ್ ಗಳ ವರೆಗೆ ವೇಗಿಗಳಿಗೆ ಬೌಲಿಂಗ್ ಮಾಡಲು ಸಹಾಯ ಆಗುತ್ತಿತ್ತು. ಈ ಕಾರಣದಿಂದ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ನೀಡಿದ್ದೇವೆ. ಎರಡನೇ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿದೆವು, ಶಾರ್ದೂಲ್ ಠಾಕೋರ್ ಅವರ ಸ್ಥಾನಕ್ಕೆ ದೀಪಕ್ ಚಹರ್ ಆಡಲಿದ್ದಾರೆ, ಸಂಜು ಸ್ಯಾಮ್ಸನ್ ಅವರ ಸ್ಥಾನದಲ್ಲಿ ದೀಪಕ್ ಹೂಡಾ ಆಡುತ್ತಾರೆ. ಈ ಬದಲಾವಣೆ ಇಂದ ತಂಡವು ಶೇ.10ರಷ್ಟು ಬದಲಾವಣೆ ಉಂಟಾದರು ಸಹ ಸಾಕು. ಸ್ಲಾಗ್ ಓವರ್ ಗಳಲ್ಲಿ ರಣತಂತ್ರಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ..” ಎಂದಿದ್ದಾರೆ ಶಿಖರ್ ಧವನ್. ಇದನ್ನು ಓದಿ.. Samantha: ದುಃಖದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡು ಬಿಟ್ಟ ಸಮಂತಾ. ಕಣ್ಣೀರು ಹಾಕಿದ ಫ್ಯಾನ್ಸ್. ಏನಾಗಿದೆ ಗೊತ್ತೇ??

Comments are closed.