Neer Dose Karnataka
Take a fresh look at your lifestyle.

Kannada News: ದರ್ಶನ್ ಜೊತೆ ನಟನೆ ಮಾಡುವಾಗ ಮೊದಲ ಬಾರಿ ಮಾಲಾಶ್ರೀ ಮಗಳು ಹೇಗೆ ಆಕ್ಟ್ ಮಾಡಿದ್ದಾರೆ ಗೊತ್ತೇ? ದರ್ಶನ್ ಹೇಳಿದ್ದೇನು ಗೊತ್ತೇ?

Kannada News: ಕನಸಿನ ರಾಣಿ ಮಾಲಾಶ್ರೀ (Malashree) ಮತ್ತು ನಿರ್ಮಾಪಕ ಕೋಟಿ ರಾಮು (Ramu) ಅವರ ಮಗಳು ರಾಧನ (Radhana Ram) ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಲಾಶ್ರೀ ಅವರು ನಾಯಕಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿಯಾಗಿ ಮಿಂಚಿದವರು. ಇದೀಗ ಅವರ ಮಗಳು ಇದೇ ಇಂಡಸ್ಟ್ರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ದರ್ಶನ್ (Darshan) ಅವರಿಗೆ ನಾಯಕಿಯಾಗಿ, ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಹಾಗೆಯೇ ರಾಕ್ ಲೈನ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಲಾಂಚ್ ಆಗುತ್ತಿದ್ದಾರೆ ರಾಧನ. ಇವರ ಬಗ್ಗೆ ಈಗ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ನಟಿ ಮಾಲಾಶ್ರೀ ಅವರು ಬಾಲನಟಿಯಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು ಸಹ, ನಾಯಕಿಯಾಗಿ ಮೊದಲ ಬಾರಿಗೆ ನಟಿಸಿದ್ದು, ಕನ್ನಡದ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ, ಆಗ ಮಾಲಾಶ್ರೀ ಅವರಿಗೆ 15 ವರ್ಷವಾಗಿತ್ತು. ಈಗ ಅವರ ಮಗಳಿಗೆ ಎಷ್ಟು ವರ್ಷ ಇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ರಾಧನ ಅವರು 13 ವರ್ಷ ಇದ್ದಾಗಲೇ ನಟಿಯಾಗಬೇಕು ಎಂದು ಹೇಳಿದ್ದರಂತೆ. ಕಳೆದ ಎರಡು ವರ್ಷಗಳಿಂದ ನಟನೆಯ ತರಬೇತಿ ಸಹ ಪಡೆದಿದ್ದಾರೆ. ಅನನ್ಯ ಎಂದು ಇವರ ಹೆಸರು, ಆದರೆ ರಾಮು ಅವರೇ ರಾಧನ ಎಂದು ಹೆಸರಿಟ್ಟು, ಚಿತ್ರರಂಗಕ್ಕೆ ಪರಿಚಯ ಆಗುವಾಗ, ಹೆಸರು ಬದಲಾಯಿಸಬೇಕು ಎಂದುಕೊಂಡಿದ್ದರಂತೆ. ಅದೇ ರೀತಿ ಈಗ ರಾಧನ ಎಂದು ಬದಲಾಯಿಸಿ, ಪರಿಚಯ ಮಾಡಲಾಗುತ್ತಿದೆ. ಇದನ್ನು ಓದಿ.. Money saving: ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ದೀಯ??ಥಟ್ ಅಂತ ಅರ್ಧ ಬೆಲೆ ಕಡಿಮೆ ಮಾಡಲು ಈ ಟ್ರಿಕ್ ಬಳಸಿ. ಹಣ ಉಳಿಸಿ.

ರಾಧನ ಅವರಿಗೆ ಈಗ 21 ವರ್ಷಗಳು. ರಾಧನ ಅವರ ಬಗ್ಗೆ ಈಗಾಗಲೇ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿದೆ. ರಾಧನ ದೊಡ್ಡ ಸಿನಿಮಾ ಮೂಲಕ, ದರ್ಶನ್ ಅವರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ, ರಾಕ್ ಲೈನ್ ಪ್ರೊಡಕ್ಷನ್ಸ್ ಅಂತಹ ದೊಡ್ಡ ಸಂಸ್ಥೆಯ ಮೂಲಕ ಲಾಂಚ್ ಆಗುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಮಾಲಾಶ್ರೀ ಅವರ ಮಗಳ ನಟನೆ ಹೇಗಿದೆ, ಚಿತ್ರೀಕರಣದಲ್ಲಿ ಹೇಗೆ ನಟಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಈಗ ಕೇಳಿಬರುತ್ತಿದ್ದು, ಇದಕ್ಕೆ ಸ್ವತಃ ದರ್ಶನ್ ಅವರೇ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರಿಗೆ ಸಂದರ್ಶನದಲ್ಲಿ ಇದರ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ರಾಧನ ರಾಮ್ ಬಹಳ ಚೆನ್ನಾಗಿ ನಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಡಿಬಾಸ್. ಪ್ರಿಪೇರ್ ಆಗಿ ಬಂದಿರುವುದರಿಂದ, ರಾಧನ ಅವರು ಅಚ್ಚುಕಟ್ಟಾಗಿ ನಟನೆ ಮಾಡುತ್ತಿದ್ದಾರಂತೆ. ಇದನ್ನು ಓದಿ..Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮುಗಿದಿಲ್ಲ ಮೌರ್ಯ ಕಥೆ. ಮುಂದೇನಾಗಲಿದೆ ಗೊತ್ತೇ??

Comments are closed.