Neer Dose Karnataka
Take a fresh look at your lifestyle.

Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮುಗಿದಿಲ್ಲ ಮೌರ್ಯ ಕಥೆ. ಮುಂದೇನಾಗಲಿದೆ ಗೊತ್ತೇ??

1,179

Lakshana: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿ ಈಗ ಇನ್ನಷ್ಟು ರೋಚಕ ಹಂತವನ್ನು ತಲುಪಿದೆ. ನಕ್ಷತ್ರ ಗಂಡ ಭೂಪತಿಯ ತಮ್ಮ ಮೌರ್ಯನಿಗೆ ನಕ್ಷತ್ರ ಮಾತೃ ಚಂದ್ರಶೇಖರ್ ಕಂಡರೆ ಆಗುವುದಿಲ್ಲ, ಇಬ್ಬರನ್ನು ಮುಗಿಸಲು ಹಲವು ಸಾರಿ ಪ್ರಯತ್ನ ಮಾಡಿದ್ದಾನೆ ಮೌರ್ಯ. ಆದರೆ ಪ್ರತಿ ಸಲವು ನಕ್ಷತ್ರ ಮತ್ತು ಸಿಎಸ್ ಮೌರ್ಯನ ಪ್ಲಾನ್ ಇಂದ ತಪ್ಪಿಸಿಕೊಂಡರು. ನಕ್ಷತ್ರಳನ್ನು ಮುಗಿಸಲು ಮೌರ್ಯ ಹೊಸ ಪ್ಲಾನ್ ಮಾಡಿದ್ದ, ಅದೇ ರೀತಿ ಶ್ವೇತಾ ನಕ್ಷತ್ರಳನ್ನು ಮೌರ್ಯನ ಬಳಿ ಕರೆದುಕೊಂಡು ಬಂದಿದ್ದಾಳೆ, ಆದರೆ ಮೌರ್ಯ ನಕ್ಷತ್ರಳನ್ನು ನೋಡುವ ಮೊದಲೇ, ಆಕೆಯನ್ನು ಕಿಡ್ನ್ಯಾಪ್ ಮಾಡಲಾಗಿತ್ತು.

ನಕ್ಷತ್ರಳನ್ನು ಕಿಡ್ನ್ಯಾಪ್ ಮಾಡಿದ್ದು, ಸ್ವತಃ ಆಕೆಯ ತಂದೆ ಸಿಎಸ್. ಅಪ್ಪಾ ಯಾಕೆ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಖುದ್ದು ನಕ್ಷತ್ರ ಶಾಕ್ ಆಗಿದ್ದಾಳೆ. ಆದರೆ ಮೌರ್ಯನ ವಿರುದ್ಧ ಸಿಎಸ್ ಮಾಡಿರುವ ಪ್ಲಾನ್ ಇದಾಗಿದೆ. ಮೌರ್ಯನಿಗೆ ಬುದ್ಧಿ ಕಲಿಸೋದಕ್ಕೆ ಸಿಎಸ್ ಈ ಪ್ಲಾನ್ ಮಾಡಿದ್ದು, ನಕ್ಷತ್ರಾ ಇದ್ದ ಕಾರ್ ಹಿಂದೆ ಫಾಲೋ ಮಾಡಿಕೊಂಡು ಮೌರ್ಯ ಕೂಡ ಬಂದಿದ್ದ. ಸಿಎಸ್ ಪ್ಲಾನ್ ಪ್ರಕಾರವೇ ಎಲ್ಲಾ ನಡೆದಿದ್ದು, ಅಲ್ಲಿಗೆ ಮೌರ್ಯ ಬಂದ ನಂತರ ಸಿಎಸ್ ಮೌರ್ಯನಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾನೆ, ನಿನ್ನನ್ನ ನಾನು ಕ್ಷಮಿಸಿರುವಷ್ಟು ಇನ್ಯಾರು ಕ್ಷಮಿಸಿಲ್ಲ. ನನ್ನ ಮಗಳ ವಿಚಾರಕ್ಕೆ ಬರುತ್ತೀಯಾ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ವಾರ್ನಿಂಗ್ ಕೊಟ್ಟಿರುವ ಸಿಎಸ್ ಗನ್ ಹಿಡಿದು ಮೌರ್ಯನಿಗೆ ಶೂಟ್ ಮಾಡಿದ್ದಾನೆ. ಇದನ್ನು ಓದಿ..Kannada Astrology: ಹೆಚ್ಚಿನ ಸಮಯ ಬೇಡ, ಇನ್ನು 24 ಗಂಟೆಯಲ್ಲಿಯೇ ನಿಮ್ಮ ಅದೃಷ್ಟ ಬಾಗಿಲು ತೆರೆಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

ಇದನ್ನು ನಕ್ಷತ್ರ ನೋಡಿದ್ದು, ಅಪ್ಪನ ವಿರುದ್ಧವೇ ಪೊಲೀಸರ ವಿರುದ್ಧ ಕಂಪ್ಲೇಂಟ್ ನೀಡಿದ್ದಾಳೆ, ಇದರಿಂದ ತವರು ಮನೆ ಮತ್ತು ಗಂಡನ ಮನೆ ಎರಡು ಕಡೆಯಲ್ಲು ನಕ್ಷತ್ರ ಮೇಲೆ ಎಲ್ಲರೂ ಕೋಪ ಮಾಡಿಕೊಂಡಿದ್ದಾರೆ. ಧಾರವಾಹಿ ನೋಡುತ್ತಿರುವವರಿಗೆ ನಿಜಕ್ಕೂ ಮೌರ್ಯನನ್ನು ಸಾಯಿಸಿದ್ದಾರಾ ಸಿಎಸ್ ಎನ್ನುವ ಪ್ರಶ್ನೆ ಮೂಡುತ್ತಿದೆ. ಆದರೆ ಸ್ಟೋರಿಯಲ್ಲಿ ಅಸಲಿ ಟ್ವಿಸ್ಟ್ ಬೇರೆಯೇ ಇದೆ. ಸಿಎಸ್ ನಿಜಕ್ಕೂ ಮೌರ್ಯನನ್ನು ಶೂಟ್ ಮಾಡಿಲ್ಲ, ಆದರೆ ಬುದ್ದಿ ಕಲಿಸುವ ಸಲುವಾಗಿ ಮೌರ್ಯನನ್ನು ಕೂಡಿ ಹಾಕಿದ್ದಾನೆ. ಬಂದೋಬಸ್ತ್ ಮಾಡಿ, ಜೈಲಿಗೆ ವಾಪಸ್ಸು ಕಳುಹಿಸುವುದಕ್ಕಿಂತ ಮೊದಲು ಆತನನ್ನು ಬಳಸಿ ಡೆವಿಲ್ ಹಿಡಿಯಲು ಚಂದ್ರಶೇಖರ್ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಧಾರಾವಾಹಿಯಿಂದ ಹೊರ ನಡೆದ ಪಾರು. ಕ್ಷಮಿಸಿ ಎಂದು ಕೇಳಿಕೊಂಡ ನಟಿ ಮೋಕ್ಷಿತಾ ಪೈ. ಕಾರಣ ಏನು ಗೊತ್ತೇ??

Leave A Reply

Your email address will not be published.