Neer Dose Karnataka
Take a fresh look at your lifestyle.

Kannada News: ಧಾರಾವಾಹಿಯಿಂದ ಹೊರ ನಡೆದ ಪಾರು. ಕ್ಷಮಿಸಿ ಎಂದು ಕೇಳಿಕೊಂಡ ನಟಿ ಮೋಕ್ಷಿತಾ ಪೈ. ಕಾರಣ ಏನು ಗೊತ್ತೇ??

4,869

Kannada News: ಜೀಕನ್ನಡ (Zee Kannada) ವಾಹಿನಿಯ ಪಾರು (Paaru) ಧಾರವಾಹಿ ಜನರಿಗೆ ಬಹಳ ಇಷ್ಟವಾಗಿದೆ. ಈ ಧಾರಾವಾಹಿಯನ್ನು ಜನರು ಪ್ರತಿದಿನ ಮಿಸ್ ಮಾಡದೆ ನೋಡುವ ಧಾರಾವಾಹಿಗಳಲ್ಲಿ ಒಂದು. ಪಾರು ಧಾರಾವಾಹಿಯ ಅಖಿಲಾಂಡೇಶ್ವರಿ, ಹಾಗೂ ಮುಗ್ಧ ಹಳ್ಳಿ ಹುಡುಗಿ ಪಾರ್ವತಿಯ ಪಾತ್ರವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಪಾರು ಧಾರಾವಾಹಿಯಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಮುದ್ದು ಮುಖದ ನಾಯಕಿಯ ಹೆಸರು ಮೋಕ್ಷಿತ ಪೈ (Mokshitha Pai), ಇವರು ಮೂಲತಃ ಮಂಗಳೂರಿನ ಪ್ರತಿಭೆ. ಹುಟ್ಟಿ ಬೆಳೆದದ್ದು ಅಲ್ಲಿಯೇ, ನಂತರ ಬೆಂಗಳೂರಿಗೆ ಬಂದರು. ಪಾರ್ವತಿ ಪಾತ್ರದ ಹಾಗೆ ಮೋಕ್ಷತ ಸಹ ಬಹಳ ಸರಳ ಹಾಗೂ ಮುಗ್ಧ ಮನಸ್ಸಿನ ಹುಡುಗಿಯಂತೆ.

ಧಾರವಾಹಿ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಆಸೆ ಮೋಕ್ಷಿತ ಅವರಿಗೆ ಇತ್ತು, ಆದರೆ ಸಿನಿಮಾದಲ್ಲಿ ಹೆಚ್ಚಿನ ಅವಕಾಶ ಸಿಗದ ಕಾರಣ ಧಾರವಾಹಿಯಲ್ಲೇ ಮುಂದುವರೆದರು. ಕನ್ನಡದ ಜೊತೆಗೆ ತಮಿಳು ಧಾರವಾಹಿಯಲ್ಲಿ ನಟಿಸುವ ಅವಕಾಶ ಕೂಡ ಇವರಿಗೆ ಸಿಕ್ಕಿತು. ಕನ್ನಡದ ಪುಟ್ಟಕ್ಕನ ಮಕ್ಕಳು ಧಾರವಾಹಿ ಸೂಪರ್ ಹಿಟ್ ಆದ ನಂತರ ಅದನ್ನು ತಮಿಳಿಗೆ ರಿಮೇಕ್ ಮಾಡಳಾಗಿದ್ದು, ಅದರಲ್ಲಿ ನಾಯಕಿ ಶಕ್ತಿ ಪಾತ್ರವನ್ನು ಮೋಕ್ಷಿತ ನಿರ್ವಹಿಸುತ್ತಿದ್ದರು. ಈ ಪಾತ್ರದ ಮೂಲಕ ತಮಿಳು ಕಿರುತೆರೆಯಲ್ಲಿ ಚಿರಪರಿಚಿತರಾಗಿ, ಅಲ್ಲಿನ ಜನರಿಗು ಬಹಳ ಇಷ್ಟವಾಗಿದ್ದ ಮೋಕ್ಷಿತ ಅವರು ಈಗ ಶಕ್ತಿ ಪಾತ್ರದಿಂದ ಹೊರಬಂದಿದ್ದಾರೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಓದಿ..Money saving: ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ದೀಯ??ಥಟ್ ಅಂತ ಅರ್ಧ ಬೆಲೆ ಕಡಿಮೆ ಮಾಡಲು ಈ ಟ್ರಿಕ್ ಬಳಸಿ. ಹಣ ಉಳಿಸಿ.

ವೈಯಕ್ತಿಕ ಕಾರಣಗಳಿಂದ ಮೀನಾಕ್ಷಿ ಪೊಣ್ಣುಂಗ ಧಾರವಾಹಿ ಇಂದ ಹೊರಬಂದಿರುವುದಾಗಿ ಮೋಕ್ಷಿತ ತಿಳಿಸಿದ್ದಾರೆ. ತಮ್ಮ ಎಲ್ಲಾ ಅಭಿಮಾನಿಗಳಿಗೆ ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದ್ದು, ತಮಿಳಿನಲ್ಲಿ ಕೆಲಸ ಮಾಡಿ ಬಹಳ ಸಂತೋಷ ಆಯಿತು, ಈ ಧಾರವಾಹಿಗೆ ಕೆಲಸ ಮಾಡುವಾಗ ಬಹಳ ಕಲಿತಿದ್ದೇನೆ, ತಮಿಳನ್ನು ಕೂಡ ಕಲಿತಿದ್ದೇನೆ ಎಂದಿರುವ ಮೋಕ್ಷಿತ, ತಮ್ಮ ತಮಿಳು ಅಭಿಮಾನಿಗಳಿಗೆ ಕೂಡ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಧನ್ಯವಾದ ತಿಳಿಸಿದ್ದು, ಆದಷ್ಟು ಬೇಗ ಮತ್ತೆ ಬರುತ್ತೇನೆ ಎಂದು ಕೂಡ ಹೇಳಿದ್ದಾರೆ. ಮೋಕ್ಷಿತ ಅವರು ಪಾರು ಧಾರವಾಹಿ ಇಂದ ಹೊರಬಂದಿಲ್ಲ. ಇದನ್ನು ಓದಿ..Kannada Astrology: ಹೆಚ್ಚಿನ ಸಮಯ ಬೇಡ, ಇನ್ನು 24 ಗಂಟೆಯಲ್ಲಿಯೇ ನಿಮ್ಮ ಅದೃಷ್ಟ ಬಾಗಿಲು ತೆರೆಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Leave A Reply

Your email address will not be published.