Neer Dose Karnataka
Take a fresh look at your lifestyle.

Cricket News: ಫಾರ್ಮ್ ನಲ್ಲಿ ಇದ್ದರೂ, ರೋಹಿತ್, ದ್ರಾವಿಡ್ ತಂಡದಿಂದ ಹೊರಹಾಕಿದ್ದಕ್ಕಾಗಿ, ಗಟ್ಟಿ ನಿರ್ಧಾರ ತೆಗೆದುಕೊಂಡ ಸೂರ್ಯ ಕುಮಾರ್. ಮಾಡುತ್ತಿರುವುದೇನು ಗೊತ್ತೇ??

Cricket News: ವಿಶ್ವಮಟ್ಟದಲ್ಲಿ ಶ್ರೇಷ್ಠ ಟಿ20 ಬ್ಯಾಟ್ಸ್ಮನ್ ಎಂದು ಹೆಸರು ಪಡೆದಿರುವವರು ಸೂರ್ಯಕುಮಾರ್ ಯಾದವ್ (Suryakumar Yadav), ಟಿ20 ವರ್ಲ್ಡ್ ಕಪ್ (T20 World Cup) ಮತ್ತು ನ್ಯೂಜಿಲೆಂಡ್ ಸೀರೀಸ್ (India vs New Zealand) ನಲ್ಲಿ ಇವರ ಅದ್ಭುತ ಪ್ರದರ್ಶನದಲ್ಲಿ ವಿಶ್ವಶ್ರೇಷ್ಠ ಆಟಗಾರರು ಕೂಡ ಹೊಗಳಿದ್ದರು. ಟಿ20 ಪಂದ್ಯಗಳಲ್ಲೂ 360 ಪ್ರದರ್ಶನ ನೀಡುತ್ತಾ, ಅತ್ಯುತ್ತಮವಾಗಿ ಸ್ಕೋರ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಅವರು, ಓಡಿಐ ಗಳಲ್ಲಿ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಇದೀಗ ಇವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿ ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ಬಾಂಗ್ಲಾದೇಶ್ ಸೀರೀಸ್ (India vs Bangladesh) ಇಂದ ಹೊರಾಗಿಟ್ಟಿದೆ.

ಅದ್ಭುತ ಫಾರ್ಮ್ ನಲ್ಲಿರುವ ಆಟಗಾರರಿಗೆ ಮ್ಯಾನೇಜ್ಮೆಂಟ್ ಹೆಚ್ಚು ಅವಕಾಶಗಳನ್ನು ಕೊಡಬೇಕು, ಅದನ್ನು ಬಿಟ್ಟು ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ನೀಡಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ಸೂರ್ಯಕುಮಾರ್ ಯಾದವ್ ಅವರು, ತಮ್ಮನ್ನು ತಂಡದಿಂದ ಹೊರಗಿಟ್ಟು, ಓಡಿಐ ಗೆ ಇವರು ಅರ್ಹರಲ್ಲ ಎಂದು ಕೆಲವರು ಹೇಳಿರುವುದರಿಂದ ಮಹತ್ವದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಅದೇನೆಂದರೇ, ಈ ತಿಂಗಳು 13 ರಿಂದ ಶುರುವಾಗುವ ರಣಜಿ ಟ್ರೋಫಿಯಲ್ಲಿ (Ranji Trophy) ಆಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ, ಮುಂಬೈ (Team Mumbai) ತಂಡದ ಪರವಾಗಿ ಆಡುತ್ತಾರೆ ಸೂರ್ಯಕುಮಾರ್ ಯಾದವ್. ಡಿಸೆಂಬರ್ 27ರಂದು ಮುಂಬೈ ವರ್ಸಸ್ ಸೌರಾಷ್ಟ್ರ (Mumbai vs Saurashtra) ಪಂದ್ಯ ನಡೆಯಲಿದ್ದು ಅದರಲ್ಲಿ ಆಡುತ್ತಾರೆ ಸೂರ್ಯಕುಮಾರ್ ಯಾದವ್. ಇದನ್ನು ಓದಿ..Cricket News: ಬಿಗ್ ನ್ಯೂಸ್: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ. ತಂಡದಿಂದ ಹೊರ ಹೋಗುತ್ತಿರುವ ಟಾಪ್ ಆಟಗಾರರು ಯಾರು ಗೊತ್ತೇ?

ತಂಡದಿಂದ ವಿಶ್ರಾಂತಿಗಾಗಿ ಹೊರಗಿರುವಾಗ, ಸೂರ್ಯಾಕುಮಾರ್ ಯಾದವ್ ಅವರು ರಣಜಿ ಟ್ರೋಫಿ ಆಡಲು ಒಪ್ಪಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಸಹ ಶುರುವಾಗಿದೆ. ಓಡಿಐ ಮತ್ತು ದೀರ್ಘಪಂದ್ಯಗಳಿಗೆ ಹೊಂದಿಕೊಳ್ಳಲು ಸೂರ್ಯ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಸಿಸಿಐ ವಿರುದ್ಧ ಅಭಿಮಾನಿಗಳು ನಿರಾಶೆಗೊಂಡಿದ್ದು, ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದಾರೆ, ಸೂರ್ಯಕುಮಾರ್ ಯಾದವ್ ಅವರು ನ್ಯಾಶನಲ್ ಟೀಮ್ ಗೆ ಬಂದಿರುವುದು ತಡವಾಗಿ, ಈಗ ಅವರಿಗೆ ಹೆಚ್ಚು ಅವಕಾಶ ಕೊಡದೆ ಈ ರೀತಿ ಮಾಡುವುದು ತಪ್ಪು ಎಂದು ಹೇಳುತ್ತಿದ್ದಾರೆ. ಇದನ್ನು ಓದಿ.. Cricket News: ಕ್ಯಾಚ್ ಗಳನ್ನು ಬಿಟ್ಟು ಪಂದ್ಯ ಸೋತ ಭಾರತ ತಂಡದ ಬಗ್ಗೆ ಹೊರಬಿದ್ದಿರುವ ದಿನೇಶ್ ಕಾರ್ತಿಕ್ ಹೇಳಿದ್ದೇನು ಗೊತ್ತೇ??

Comments are closed.