Neer Dose Karnataka
Take a fresh look at your lifestyle.

Cricket News: ಕೊನೆ ಕ್ರಮಾಂಕದಲ್ಲಿ ಅಬ್ಬರಿಸಿದ ರೋಹಿತ್ ಗೆ ಖಡಕ್ ಪ್ರಶ್ನೆ ಕೇಳಿದ ಸುನಿಲ್ ಗವಾಸ್ಕರ್: ದಿಢೀರ್ ನಾಯಕನಿಗೆ ಉತ್ತರಿಸಲು ಸಾಧ್ಯವೇ?

Cricket News: ಭಾರತ ತಂಡವು ಇಂಡಿಯಾ ವರ್ಸಸ್ ಬಾಂಗ್ಲಾದೇಶ್ ಏಕದಿನ ಸಎಅನಿ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ 5 ರನ್ ಗಳ ಸೋಲು ಕಂಡಿದೆ ಭಾರತ. ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ್ 276 ರನ್ ಗಳ ಗುರಿಯನ್ನು ಭಾರತಕ್ಕೆ ನೀಡಿದರು. ಆದರೆ ಭಾರತ ತಂಡದ ಬ್ಯಾಟಿಂಗ್ ಆರಂಭದಲ್ಲಿ ಕಳಪೆ ಆಗಿತ್ತು, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಯಾರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಜೊತೆಯಾಟ ಭಾರತ ತಂಡಕ್ಕೆ ತಕ್ಕ ಮಟ್ಟಿಗೆ ಸಹಾಯ ಮಾಡಿತು..

ಇವರಿಬ್ಬರು ಅರ್ಧಶತಕ ಗಳಿಸಿದರು. ಭಾರತ ತಂಡ ಕೊನೆಯ ಹಂತದಲ್ಲಿ ಇದ್ದಾದ ರೋಹಿತ್ ಶರ್ಮಾ ಅವರು 9ನೇ ಕ್ರಮಾಂಕಕ್ಕೆ ಬ್ಯಾಟಿಂಗ್ ಗೆ ಬಂದರು. ರೋಹಿತ್ ಅವರಿಗೆ ಕೈಗೆ ಇಂಜುರಿ ಆಗಿದ್ದರು ಕೂಡ, ಕ್ರೀಸ್ ಗೆ ಬಂದು, ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು ರೋಹಿತ್ ಶರ್ಮಾ. ಭಾರತ ತಂಡವನ್ನು ಗೆಲುವಿನ ಸನಿಹಕ್ಕೆ ತೆಗೆದುಕೊಂಡು ಹೋದರು, ಆದರೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. 28 ಎಸೆತಗಳಲ್ಲಿ 51 ರನ್ಸ್ ಭಾರಿಸಿದರು ರೋಹಿತ್ ಶರ್ಮಾ. ಇದೀಗ ರೋಹಿತ್ ಅವರ ಕೊನೆಯಲ್ಲಿ ಬ್ಯಾಟಿಂಗ್ ಗೆ ಬರುವ ಈ ನಿರ್ಧಾರದ ಬಗ್ಗೆ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು ಖಡಕ್ ಪ್ರಶ್ನೆ ಕೇಳಿದ್ದಾರೆ.. ಇದನ್ನು ಓದಿ..Cricket News: ಕೊಹ್ಲಿ ಯನ್ನು ಟಾರ್ಗೆಟ್ ಮಾಡಿ ನಾಯಕತ್ವ ಕಿತ್ತುಕೊಂಡಿದ್ದ ರೋಹಿತ್, ನಾಯಕನಾದ ಮೇಲೆ ಮಾಡಿರುವ ಸಾಧನೆ ಏನು ಗೊತ್ತೇ?

“ಈ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಮೊದಲೇ ಯಾಕೆ ಬ್ಯಾಟಿಂಗ್ ಗೆ ಬರಲಿಲ್ಲ ಎಂದು ಪ್ರಶ್ನೆ ಮಾಡಬೇಕಾಗುತ್ತದೆ. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದವರು, 7ನೇ ಕ್ರಮಾಂಕಕ್ಕೂ ಬರಬಹುದಿತ್ತು. ರೋಹಿತ್ ಶರ್ಮಾ ಬ್ಯಾಟಿಂಗ್ ಗೆ ಬರುತ್ತಾರೆ ಎನ್ನುವುದಾಗಿದ್ದರೆ, ಅಕ್ಷರ್ ಪಟೇಲ್ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡುತ್ತಿರಲಿಲ್ಲ. ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹರ್ ಬಂದಿದ್ದು ನೋಡಿ, ರೋಹಿತ್ ಶರ್ಮಾ ಅವರು ಬರುವುದಿಲ್ಲವೇನೋ ಅಂದುಕೊಂಡು, ಬೇಡದ ಹೊಡೆತಗಳನ್ನು ಟ್ರೈ ಮಾಡಿ, ವಿಕೆಟ್ ಕಳೆದುಕೊಂಡರು..” ಎಂದಿದ್ದಾರೆ ಸುನೀಲ್ ಗವಾಸ್ಕರ್. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಮೊದಲೇ ಬಂದಿದ್ದರೆ, ಭಾರತ ತಂಡ ಗೆಲ್ಲುತ್ತಿತ್ತು ಎನ್ನುವ ಭಾವನೆಯಲ್ಲಿ ಹೇಳಿದ್ದಾರೆ.. ಇದನ್ನು ಓದಿ.. Cricket News: ಫಾರ್ಮ್ ನಲ್ಲಿ ಇದ್ದರೂ, ರೋಹಿತ್, ದ್ರಾವಿಡ್ ತಂಡದಿಂದ ಹೊರಹಾಕಿದ್ದಕ್ಕಾಗಿ, ಗಟ್ಟಿ ನಿರ್ಧಾರ ತೆಗೆದುಕೊಂಡ ಸೂರ್ಯ ಕುಮಾರ್. ಮಾಡುತ್ತಿರುವುದೇನು ಗೊತ್ತೇ??

Comments are closed.