Neer Dose Karnataka
Take a fresh look at your lifestyle.

Cricket News: ಸರಣಿ ಸೋತ ತಕ್ಷಣವೇ ಎಚ್ಚೆತ್ತು ಕೊಂಡ ರೋಹಿತ್ ಶರ್ಮ: ತಾನು ಮಾಡಿದ್ದನ್ನು ಮರೆತು ಆಯ್ಕೆ ಸಮಿತಿ ಬಗ್ಗೆ ಹೇಳಿದ್ದೇನು ಗೊತ್ತೇ??

Cricket News: ಭಾರತ ಕ್ರಿಕೆಟ್ ತಂಡವು ಬಾಂಗ್ಲಾದೇಶ್ (India vs Bangladesh) ಸರಣಿ ಸೋತ ನಂತರ ಇನ್ನಷ್ಟು ಟೀಕೆಗೆ ಒಳಗಾಗಿದೆ. ಟೀಮ್ ಇಂಡಿಯಾಗೆ ಗೆ ಹೆಚ್ಚಾಗಿ ಕಾಡುತ್ತಿರುವುದು ಫಿಟ್ನೆಸ್ ಸಮಸ್ಯೆ, ಒಬ್ಬರಾದ ನಂತರ ಮತ್ತೊಬ್ಬ ಆಟಗಾರರು ಇಂಜೂರಿಗೆ ಒಳಗಾಗುತ್ತಲೇ ಇದ್ದಾರೆ. ಇದೀಗ ಸೋಲಿಗೆ ಕಾರಣವೇ ಫಿಟ್ನೆಸ್ ಮತ್ತು ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (National Cricket Academy) ಎಂದು ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma) ಅವರು ಎನ್.ಸಿ.ಎ ವಿರುದ್ಧ ಕಿಡಿಕಾರಿದ್ದಾರೆ. ಅರ್ಧ ಫಿಟ್ ಆಗಿರುವ ಆಟಗಾರರನ್ನು ತಂಡದಲ್ಲಿ ಇಟ್ಟುಕೊಂಡು ಪಂದ್ಯ ಗೆಲ್ಲಲು ಆಗುವುದಿಲ್ಲ ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.

“ಎನ್.ಸಿ.ಎ (NCA)ನಲ್ಲಿ ಇರುವವರು ಆಟಗಾರರ ಮೇಲೆ ಇರುವ ಕೆಲಸದ ಒತ್ತಡದ ಬಗ್ಗೆ ಗಮನ ಕೊಡಬೇಕು, ಅರ್ಧ ಫಿಟ್ ಆಗಿರುವ ಆಟಗಾರರನ್ನು ತಂಡದಲ್ಲಿ ಆಡಿಸುವುದು ಒಳ್ಳೆಯದಲ್ಲ. ನಮ್ಮ ದೇಶದ ಪರವಾಗಿ ಆಡುವುದು ಪ್ರತಿಯೊಬ್ಬ ಆಟಗಾರನಿಗು ಬಹಳ ಹೆಮ್ಮೆ ಮತ್ತು ಗೌರವದ ವಿಷಯ, ಅದರಿಂದಾಗಿ ಆಟಗಾರರು ಪೂರ್ತಿಯಾಗಿ ಫಿಟ್ ಆಗಿರದೆ ಇದ್ದರೆ, ಅದು ಒಳ್ಳೆಯ ಪರಿಸ್ಥಿತಿ ಅಲ್ಲ. ಆಗುತ್ತಿರುವ ಈ ಸಮಸ್ಯೆ ಬಗ್ಗೆ ಸಂಪೂರ್ಣವಾಗಿ ಅರ್ಥಮಾಡಿಕೊಂಡು, ಅದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಬೇಕು. ನ್ಯಾಷನಲ್ ಟೀಮ್ ನಲ್ಲಿ ಒಬ್ಬ ಆಟಗಾರ ಆಡಬೇಕು ಎಂದರೆ 100% ಗಿಂತ ಹೆಚ್ಚು ಫಿಟ್ ಆಗಿರಬೇಕು..” ಎಂದಿದ್ದಾರೆ ರೋಹಿತ್ ಶರ್ಮಾ. ಇದನ್ನು ಓದಿ..Cricket News: ಕೊನೆ ಕ್ರಮಾಂಕದಲ್ಲಿ ಅಬ್ಬರಿಸಿದ ರೋಹಿತ್ ಗೆ ಖಡಕ್ ಪ್ರಶ್ನೆ ಕೇಳಿದ ಸುನಿಲ್ ಗವಾಸ್ಕರ್: ದಿಢೀರ್ ನಾಯಕನಿಗೆ ಉತ್ತರಿಸಲು ಸಾಧ್ಯವೇ?

ಫಿಟ್ನೆಸ್ ಸಮಸ್ಯೆ ಇರುವ ಆಟಗಾರರ ಜೊತೆಗೆ ಒಳ್ಳೆಯ ತಂಡ, ಕಟ್ಟಿ ಗೆಲ್ಲಲು ಸಾಧ್ಯ ಆಗುವುದಿಲ್ಲ ಎಂದು ಹೇಳಿದ್ದಾರೆ ಕ್ಯಾಪ್ಟನ್. ಇನ್ನು ಟೀಮ್ ಇಂಡಿಯಾ ಬಗ್ಗೆ ಹೇಳುವುದಾರೆ, ಜಸ್ಪ್ರೀತ್ ಬುಮ್ರ (Jasprit Bumrah), ಮೊಹಮ್ಮದ್ ಶಮಿ (Mohammad Shami), ರವೀಂದ್ರ ಜಡೇಜಾ (Ravindra Jadeja) ಹಾಗೂ ಇನ್ನಿತರ ಆಟಗಾರರು ಇಂಜೂರಿಗೆ ಒಳಗಾಗಿ ಇನ್ನು ಸಂಪೂರ್ಣ ಫಿಟ್ ಆಗಿಲ್ಲ. ಇತ್ತೀಚೆಗೆ ಸ್ವತಃ ರೋಹಿತ್ ಶರ್ಮಾ ಅವರು ಇಂಜುರಿಗೆ ಒಳಗಾಗಿದ್ದಾರೆ. ತಂಡದ ಇನ್ನಿಬ್ಬರು ಆಟಗಾರರು ಕುಲದೀಪ್ ಸೇನ್ (Kuldeep Sen) ಮತ್ತು ದೀಪಕ್ ಚಹರ್ (Deepak Chahar) ಸಹ ಇಂಜುರಿಗೆ ಒಳಗಾಗಿದ್ದಾರೆ. ಆಲ್ ರೌಂಡರ್ ಆಗಿರುವ ದೀಪಕ್ ಚಹರ್ ಅವರು ಇಂಜುರಿಗೆ ಒಳಗಾಗಿರುವುದು ಭಾರತ ತಂಡಕ್ಕೆ ಹಿನ್ನಡೆ ಎಂದೇ ಹೇಳಬೇಕು.. ಇದೆಲ್ಲವನ್ನು ನೋಡಿದರೆ ಎನ್.ಸಿ.ಎ ಮಾಡುತ್ತಿರುವುದಾದರು ಏನು ಎನ್ನುವ ಪ್ರಶ್ನೆ ಈಗ ಶುರುವಾಗಿದೆ. ಇದನ್ನು ಓದಿ.. Cricket News: ಕೊಹ್ಲಿ ಯನ್ನು ಟಾರ್ಗೆಟ್ ಮಾಡಿ ನಾಯಕತ್ವ ಕಿತ್ತುಕೊಂಡಿದ್ದ ರೋಹಿತ್, ನಾಯಕನಾದ ಮೇಲೆ ಮಾಡಿರುವ ಸಾಧನೆ ಏನು ಗೊತ್ತೇ?

Comments are closed.