Neer Dose Karnataka
Take a fresh look at your lifestyle.

Kannada News: ಟಾಪ್ ನಟನಾಗಿದ್ದರೂ ತಮಿಳಿಗೆ ಹೋದ ಶಿವಣ್ಣನಿಗೆ ಶಾಕ್. ಧನುಷ್ ಕೊಟ್ಟಿದ್ದು ಯಾವ ಪಾತ್ರ ಗೊತ್ತೇ?? ಇವೆಲ್ಲ ಬೇಕಿತ್ತಾ ಶಿವಣ್ಣ??

Kannada News: ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಎಂದು ಹೆಸರು ಗಳಿಸಿ, 36 ವರ್ಷಗಳಿಂದ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ನಿಂತಿರುವವರು ಶಿವಣ್ಣ. ಮೇರುನಟನ ಮಗ ಆಗಿದ್ದರು ಕೂಡ ಶಿವಣ್ಣ ಅವರು ಇಷ್ಟು ಎತ್ತರಕ್ಕೆ ಬೆಳೆದದ್ದು ತಮ್ಮ ಪ್ರತಿಭೆ ಮತ್ತು ಒಳ್ಳೆಯತನದಿಂದ. ಶಿವಣ್ಣ ಅವರು ಕನ್ನಡದಲ್ಲಿ ಇಂದಿಗೂ ಬಹುಬೇಡಿಕೆಯ ನಟ, ಸಾಲು ಸಾಲು ಸಿನಿಮಾಗಳಲ್ಲಿ ಹೀರೋ ಆಗಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಶಿವಣ್ಣ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ..

ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. ಅದರ ಜೊತೆಗೆ ಈಗ ನಟ ಧನುಷ್ ಅವರೊಡನೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲೂ ನಟಿಸಲಿದ್ದಾರೆ ಶಿವಣ್ಣ. ಶಿವಣ್ಣ ಮತ್ತು ಧನುಷ್ ಅವರಿಗೆ ಬಹಳ ವರ್ಷಗಳಿಂದ ಒಳ್ಳೆಯ ಒಡನಾಟ ಇದೆ, ಧನುಷ್ ಅವರನ್ನು ಕಂಡರೆ ಶಿವಣ್ಣ ಅವರಿಗೆ ಬಹಳ ಇಷ್ಟ ಎನ್ನುವ ಕಾರಣಕ್ಕೆ ಶಿವಣ್ಣ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ. ಇನ್ನು ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ಅವರ ಪಾತ್ರ ಏನು ಎಂದು ನೋಡುವುದಾದರೆ. ಇದನ್ನು ಓದಿ..Kannada News: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಸಮಂತಾ ಗೆ ಶಾಕ್ ಕೊಟ್ಟ ಕನ್ನಡತಿ ಕೃತಿ ಶೆಟ್ಟಿ. ಏನು ಮಾಡಿದ್ದಾರೆ ಗೊತ್ತೆ?

ಧನುಷ್ ಅವರ ಅಣ್ಣನ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಕನ್ನಡದಲ್ಲಿ ನಾಯಕನಟನಾಗಿ ಶಿವಣ್ಣ ಅವರನ್ನು ಅಭಿಮಾನಿಗಳಿಗೆ, ಬೇರೆ ಭಾಷೆಯಲ್ಲಿ ಅಣ್ಣನ ಪಾತ್ರದಲ್ಲಿ ಅವರನ್ನು ನೋಡಲು ಇಷ್ಟವಿಲ್ಲ, ಹೆಚ್ಚು ಸ್ಕೋಪ್ ಇಲ್ಲದ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಹೀರೋ ಅಣ್ಣನ ಪಾತ್ರವನ್ನು ಶಿವಣ್ಣ ಅವರಿಗೆ ನೀಡಲಾಗಿದೆ. ಇದರಿಂದ ಶಿವಣ್ಣ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದು, ಅಣ್ಣನ ಪಾತ್ರಕ್ಕೆ ಶಿವಣ್ಣ ಯಾಕೆ ಒಪ್ಪಿಕೊಂಡರು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. Biggboss Kannada: ಸುಖ ಸುಮ್ಮನೆ ಹೆಣ್ಣುಮಕ್ಕಳನ್ನು ಕೆಣಕಿದ ರೂಪೇಶ್ ರಾಜಣ್ಣ: ಆಡಿದ ಒಂದು ಮಾತಿಗೆ ಪೇಚಿಕೆ ಸಿಲುಕಿ ಗಪ್ ಚುಪ್. ಏನಾಗಿದೆ ಗೊತ್ತೆ?

Comments are closed.