Neer Dose Karnataka
Take a fresh look at your lifestyle.

Kannada Astrology: ಹೊಸ ವರ್ಷದಿಂದ ಲಕ್ಷ್ಮಿ ಕೃಪೆ ಬೇಕು ಎಂದರೆ, ಹೊಸ ವರ್ಷದ ದಿನ ಪರ್ಸ್ ನಲ್ಲಿ ಈ ವಸ್ತು ಇಡಿ ಸಾಕು. ಇಂದೇ ರೆಡಿ ಮಾಡ್ಕೋತೀರಾ.

Kannada Astrology: ಹಣ ಸಂಪಾದಿಸಲು ಜನರು ಹಗಲಿರುಳು ಕಷ್ಟಪಡುತ್ತಾರೆ, ಆದರೆ ಲಕ್ಷಾಂತರ ಪ್ರಯತ್ನ ಮಾಡಿದರೂ ಹಣ ಗಳಿಸುವಲ್ಲಿ ಯಶಸ್ವಿಯಾಗುವುದಿಲ್ಲ. ಮೇಲಾಗಿ, ಕೆಲವರು ಕಷ್ಟಪಟ್ಟು ದುಡಿಮೆಯಿಂದ ಹಣ ಸಂಪಾದಿಸುತ್ತಾರೆ, ಆದರೆ ಅವರ ಹಣ ಉಳಿಯುವುದಿಲ್ಲ. ಅಷ್ಟಕ್ಕೂ ಕಷ್ಟಪಟ್ಟು ದುಡಿದ ಹಣ ಏಕೆ ನಿಲ್ಲುವುದಿಲ್ಲ? ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಹಲವು ಕಾರಣಗಳಿವೆ. ಜೀವನದಲ್ಲಿ ನಿಮಗೆ ಲಕ್ಷ್ಮೀದೇವಿಯ ಕೃಪೆ ಬೇಕು, ಹಣಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಬಯಸುವುದಾದರೆ, ನಿಮ್ಮ ಪರ್ಸ್ ನಲ್ಲಿ ಕೆಲವು ವಸ್ತುಗಳನ್ನು ತಪ್ಪದೇ ಇಟ್ಟುಕೊಳ್ಳಿ. ಇದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ನಿಮ್ಮ ಪರ್ಸ್ ನ ಒಳಗೆ ಹರಿದು ಹೋಗಿರುವ ನೋಟ್ ಗಳು, ವೇಸ್ಟ್ ಪೇಪರ್, ಬ್ಲೇಡ್ ಮತ್ತು ಇನ್ನು ಕೆಲವು ಬೇಡದ ವಸ್ತುಗಳನ್ನು ಪರ್ಸ್ ಒಳಗೆ ಇಡುವುದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ. ಇದರಿಂದ ನಿಮಗೆ ಹಣದ ವಿಚಾರದಲ್ಲಿ ತೊಂದರೆ ಉಂಟಾಗಬಹುದು. ಹಾಗೆಯೇ ಒಬ್ಬ ಸತ್ತಿರುವ ವ್ಯಕ್ತಿಯ ಫೋಟೋವನ್ನು ನಿಮ್ಮ ಪರ್ಸ್ ನಲ್ಲಿ ಇಡಬಾರದು, ಅವರು ಎಷ್ಟೇ ಬೇಕಾದವರಾಗಿದ್ದರು ಕೂಡ, ಈ ರೀತಿ ಮಾಡಬಾರದು ಎಂದು ಹೇಳುತ್ತಾರೆ.
*ನಿಮ್ಮ ಪರ್ಸ್ ನಲ್ಲಿ ಲಕ್ಷ್ಮೀದೇವಿ ಕುಳಿತಿರುವ ಅವತಾರದಲ್ಲಿ ಇರುವ ಫೋಟೋವನ್ನು ಇಟ್ಟುಕೊಳ್ಳಬಹುದು. ಇದರಿಂದ ಲಕ್ಷ್ಮೀದೇವಿ ಸದಾ ನಿಮ್ಮ ಜೊತೆ ನೆಲೆಸಿರುತ್ತಾರೆ ಹಾಗೆಯೇ, ನಿಮಗೆ ಯಾವತ್ತೂ ಹಣದ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಸದಾ ಕಾಲ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲಿರುತ್ತದೆ. ಇದನ್ನು ಓದಿ..Kannada Astrology: ಇದೊಂದು ತಿಂಗಳು ಮಾತ್ರ ಕಷ್ಟ, ಆಮೇಲೆ ಈ ರಾಶಿಗಳ ಕಷ್ಟ ಎಲ್ಲಾ ಮುಗಿದು, ಅದೃಷ್ಟ ಬರಲಿದೆ, ಯಾವ್ಯಾವ ರಾಶಿಗಳಿಗೆ ಗೊತ್ತೇ?

*ಒಂದು ಕೆಂಪು ಬಣ್ಣದ ಪೇಪರ್ ಮೇಲೆ, ನಿಮ್ಮ ಆಸೆಯನ್ನು ಬರೆದು, ಅದನ್ನು ರೇಷ್ಮೆ ಬಟ್ಟೆಯಿಂದ ಸುತ್ತಿ, ಲಕ್ಷ್ಮೀದೇವಿಯ ಪ್ರಾರ್ಥನೆ ಮಾಡುತ್ತಾ ನಿಮ್ಮ ಪರ್ಸ್ ನ ಒಳಗೆ ಇಡಿ. ಹೀಗೆ ಮಾಡಿದರೆ ಇಡೀ ವರ್ಷ ಲಕ್ಷ್ಮೀದೇವಿ ಅನುಗ್ರಹ ನಿಮ್ಮ ಮೇಲಿರುತ್ತದೆ. ಒಂದು ವೇಳೆ ನಿಮ್ಮ ಕೈಯಲ್ಲಿ ದುಡ್ಡು ನಿಲ್ಲದೆ ಹೆಚ್ಚು ಖರ್ಚಾಗುತ್ತಲೇ ಇದ್ದರೆ, ಕೆಲವು ಅಕ್ಕಿ ಕಾಳುಗಳನ್ನು ನಿಮ್ಮ ಪರ್ಸ್ ನಲ್ಲಿ ಇರಿಸಿ..ಹೀಗೆ ಮಾಡುವುದರಿಂದ ಅನಗತ್ಯ ಖರ್ಚು ಕಡಿಮೆ ಆಗುತ್ತದೆ.
*ಹೊಸ ವರ್ಷದ ದಿನ ಚಿನ್ನ ಅಥವಾ ಬೆಳ್ಳಿ ನಾಣ್ಯವನ್ನು ಲಕ್ಷ್ಮೀದೇವಿಯ ಪಾದಕ್ಕೆ ಸ್ಪರ್ಶ ಮಾಡಿ, ನಂತರ ನಿಮ್ಮ ಪರ್ಸ್ ನ ಒಳಗೆ ಇಟ್ಟುಕೊಳ್ಳಿ, ಈ ರೀತಿ ಮಾಡುವುದರಿಂದ ನಿಮ್ಮ ಜೀವನ ಏಳಿಗೆಯ ಕಡೆಗೆ ಸಾಗುತ್ತದೆ. ಇದನ್ನು ಓದಿ.. Kannada Astrology: ಎಂತಹ ಸಮಸ್ಯೆ ಇರಲಿ, ಮನೆಯಲ್ಲಿ ಒಂದೇ ಒಂದು ಲವಂಗ ಬಳಸಿ, ಈ ಚಿಕ್ಕ ಕೆಲಸ ಮಾಡಿ ಸಾಕು. ಸಮಸ್ಯೆ ಡಮಾರ್. ನೀವೇ ಕಿಂಗ್ ಆಗ್ತೀರಾ.

Comments are closed.