Neer Dose Karnataka
Take a fresh look at your lifestyle.

Kannada News: ಹತ್ತಾರು ನಟಿಯರನ್ನು ಪ್ರೀತಿಸಿ ಕೈಕೊಟ್ಟ ನಟ ರಾಣಾ: ಕೊನೆಗೆ ಪ್ರೀತಿ ಮಾಡಿದ್ದು ಯಾರನ್ನು ಗೊತ್ತೇ? ಹೇಗೆ ಸಂಬಂಧ ಗೊತ್ತೇ? ಇದು ಪ್ರತಿ ಹುಡುಗರ ಕನಸ್ಸು.

Kannada News: ಬಾಹುಬಲಿ (Bahubali)) ಸಿನಿಮಾದಲ್ಲಿ ಅದ್ಭುತವಾಗಿ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದ ನಟ ರಾಣಾ ದಗ್ಗುಬಾಟಿ (Rana Daggubati)ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ರಾಣಾ ಅವರು ಸಿನಿಮಾ ವಿಚಾರಗಳ ಜೊತೆಗೆ, ವೈಯಕ್ತಿಕ ಜೀವನದ ವಿಚಾರಗಳಿಂದಲೂ ಆಗಾಗ ಸುದ್ದಿಯಾಗುತ್ತಿದ್ದರು. 2020ರ ಆಗಸ್ಟ್ ನಲ್ಲಿ, ಮಿಹಿಕ ಬಜಾಜ್ (Miheeka Bajaj) ಅವರೊಡನೆ ಮದುವೆಯಾದರು. ಲಾಕ್ ಡೌನ್ ಸಮಯದಲ್ಲಿ ನಡೆದ ಈ ಜೋಡಿಯ ಮದುವೆಗೆ ಹೆಚ್ಚು ಜನರು ಬಂದಿರಲಿಲ್ಲ.

ಕೇವಲ 30 ಜನರ ಸಮ್ಮುಖದಲ್ಲಿ, ಕುಟುಂಬದವರ ನಡುವೆ ರಾಣಾ ದಗ್ಗುಬಾಟಿ ಮತ್ತು ಮಿಹಿಕ ಬಜಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕಿಂತ ಮೊದಲು ಕೆಲವು ನಟಿಯರ ಜೊತೆಗೂ ರಾಣಾ ಅವರ ಹೆಸರು ಕೇಳುಬಂದಿತ್ತು, ಆದರೆ ಅವರು ಮದುವೆಯಾಗಿದ್ದು, ಮಿಹಿಕ ಅವರನ್ನು, ರಾಣಾ ದಗ್ಗುಬಾಟಿ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ಮತ್ತು ಮಿಹಿಕ ಬಜಾಜ್ ಅವರ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ. ರಾಣಾ ಅವರ ತಂಗಿ ಮತ್ತು ಮಿಹಿಕ ಒಂದೇ ಶಾಲೆಯಲ್ಲಿ ಓದುತ್ತಿದ್ದರಂತೆ, ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಹಾಗಾಗಿ ರಾಣಾ ಅವರಿಗೆ ಮಿಹಿಕ ಅವರ ಬಗ್ಗೆ ಬಹಳ ಚೆನ್ನಾಗಿ ಗೊತ್ತಿತ್ತು. ಇದನ್ನು ಓದಿ..Kannada News: ಕ್ರಾಂತಿ ಗೆ ಮೊದಲ ಹೆಜ್ಜೆಯಲ್ಲಿಯೇ ಸೋಲು: ದಾಖಲೆ ಮುರಿಯುತ್ತದೆ ಎಂದು ಕೊಡ ಹಾಡು ಠುಸ್: 24 ಗಂಟೆಗಳಲ್ಲಿ ಏನಾಗಿದೆ ಗೊತ್ತೇ?

ಇಬ್ಬರಿಗೂ ಹಲವು ವರ್ಷಗಳ ಪರಿಚಯ ಮತ್ತು ಸ್ನೇಹ ಇತ್ತು. ಹಾಗಾಗಿ ಪ್ರೀತಿಯಲ್ಲಿ ಬಿದ್ದಿದ್ದು ಯಾವಾಗ ಎಂದು ಗೊತ್ತಿಲ್ಲ ಎಂದಿದ್ದಾರೆ ರಾಣಾ, ಒಂದು ದಿನ ಪ್ರೊಪೋಸ್ ಮಾಡಿದೆ ಆಕೆ ಕೂಡ ಒಪ್ಪಿಕೊಂಡಳು ಎಂದು ಹೇಳಿದ್ದಾರೆ. ಇನ್ನು ರಾಣಾ ದಗ್ಗುಬಾಟಿ ಅವರ ಪತ್ನಿ ಮಿಹಿಕ ಅವರು ಹೈದರಾಬಾದ್ ನವರೆ ಆಗಿದ್ದು, ಇವರು ಪ್ರಖ್ಯಾತ ಇಂಟೀರಿಯರ್ ಡಿಸೈನರ್ ಆಗಿದ್ದಾರೆ, ಅಷ್ಟೇ ಅಲ್ಲದೆ, ಮುಂಬೈನಲ್ಲಿ ಇಂಟೀರಿಯರ್ ಡಿಸೈನಿಂಗ್ ನಲ್ಲಿ ಡಿಪ್ಲೊಮಾ ಮಾಡಿರುವ ಮಿಹಿಕ ಅವರು ಡ್ಯು ಡ್ರಾಪ್ ಡಿಸೈನ್ ಸ್ಟುಡಿಯೋ ಎನ್ನುವ ಕಂಪನಿ ನಡೆಸುತ್ತಿದ್ದಾರೆ. ಜೊತೆಗೆ ಇವೆಂಟ್ ಪ್ಲಾನರ್ ಸಹ ಆಗಿರುವ ಇವರು ತಮ್ಮ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ರಾಣಾ ಅವರೊಡನೆ ಮದುವೆಯಾದ ನಂತರ ಇಬ್ಬರು ಒಳ್ಳೆಯ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ಓದಿ.. Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.