Neer Dose Karnataka
Take a fresh look at your lifestyle.

Cricket News: 2022 ರಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಕ್ರಿಕೆಟಿಗರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟ್ ನಲ್ಲಿ.

Cricket News: ಕ್ಯಾಲೆಂಡರ್ ನ ಪ್ರಕಾರ 2022 ಮುಗಿಯಲು ಉಳಿದಿರುವುದು ಇನ್ನು ಎರಡು ವಾರಗಳು ಮಾತ್ರ. ಟೀಮ್ ಇಂಡಿಯಾ (Team India) ಕ್ರಿಕೆಟ್ ತಂಡಕ್ಕೆ ಈ ವರ್ಷ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲ. ಆದರೆ ಈ ವರ್ಷ ಕೆಲವು ಆಟಗಾರರಿಗೆ ಅತ್ಯುತ್ತಮವಾಗಿತ್ತು ಎಂದು ಹೇಳಬಹುದು. ಈ ವರ್ಷ ಟೀಮ್ ಇಂಡಿಯಾದಲ್ಲಿ ಎಲ್ಲಾ ಸ್ವರೂಪದ ಆಟಗಳಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ ಆಟಗಾರರು ಯಾರ್ಯಾರು ಗೊತ್ತಾ? ಹೆಚ್ಚು ರನ್ಸ್ ಗಳಿಸಿದ ಟಾಪ್ 5 ಆಟಗಾರರು ಯಾರ್ಯಾರು ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಶ್ರೇಯಸ್ ಅಯ್ಯರ್ (Shreyas Iyer) :- ಇವರು ಈಗ ಟೀಮ್ ಇಂಡಿಯಾ ನಂಬಬಹುದಾದ ಬ್ಯಾಟ್ಸ್ಮನ್ ಎಂದು ಹೇಳಬಹುದು. ಶ್ರೇಯಸ್ ಅವರು ಈಗ ಏಕದಿನ ಸರಣಿಯಲ್ಲಿ ಅದ್ಭುತವಾದ ಫಾರ್ಮ್ ನಲ್ಲಿ ರನ್ಸ್ ಗಳಿಸುತ್ತಿದ್ದಾರೆ. ಟೆಸ್ಟ್ ಸರಣಿಗು ಆಯ್ಕೆಯಾಗಿದ್ದಾರೆ. ಈ ವರ್ಷ ಅತಿಹೆಚ್ಚು ರನ್ಸ್ ಗಳಿಸಿರುವ ಆಟಗಾರ ಇವರು, ಶ್ರೇಯಸ್ ಅಯ್ಯರ್ ಅವರು 1489 ರನ್ಸ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ, 6 ಅರ್ಧಶತಕ ಸೇರಿದಂತೆ 724 ರನ್ಸ್ ಗಳಿಸಿದ್ದಾರೆ, 11 ಟಿ20 ಪಂದ್ಯಗಳಲ್ಲಿ 463 ರನ್ಸ್ ಗಳಿಸಿದ್ದಾರೆ. ಅವುಗಳಲ್ಲಿ ಇವರ ಸ್ಟ್ರೈಕ್ ರೇಟ್ 141. 6 ಟೆಸ್ಟ್ ಪಂದ್ಯಗಳಲ್ಲಿ 3 ಅರ್ಧಶತಕ ಗಳಿಸಿದ್ದಾರೆ.. ಇದನ್ನು ಓದಿ.. Cricket News: ಇಷ್ಟು ದಿನ ನೋಡಿದ್ದೇ ಬೇರೆ, ಇನ್ನು ನೋಡೋದೇ ಬೇರೆ. ದಿಡೀರ್ ಎಂದು ಭಾರತ ತಂಡ ಸೇರಿಕೊಂಡ ಅಪಾಯಕಾರಿ ಆಟಗಾರ. ಇನ್ನು ಶೇಕ್ ಆಗುವುದು ಪಕ್ಕ.

ಸೂರ್ಯಕುಮಾರ್ ಯಾದವ್ (Suryakumar Yadav) :- ಅತಿಹೆಚ್ಚು ರನ್ಸ್ ಗಳಿಸಿರುವವರಲ್ಲಿ ಎರಡನೇ ಸ್ಥಾನದಲ್ಲಿರುವುದು ಸೂರ್ಯಕುಮಾರ್ ಯಾದವ್ ಅವರು, ಮೂರು ರೀತಿಯ ಕ್ರಿಕೆಟ್ ನಲ್ಲಿ, ಒಟ್ಟು 43 ಪಂದ್ಯಗಳಲ್ಲಿ 1424 ರನ್ಸ್ ಗಳಿಸಿದ್ದಾರೆ. ವಿಶೇಷವಾಗಿ ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು ಅದ್ಭುತವಾಗಿ ಮಿಂಚಿದ್ದು, 360 ಡಿಗ್ರಿ ಪ್ರದರ್ಶನ ನೀಡಿದ್ದಾರೆ. ಅತ್ಯದ್ಭುತ ಫಾರ್ಮ್ ನಲ್ಲಿದ್ದು, ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ (Virat Kohli) :- ಈ ಲಿಸ್ಟ್ ನಲ್ಲಿರುವವರಲ್ಲಿ ಮೂರನೇ ಸ್ಥಾನದಲ್ಲಿ ಇರುವುದು ವಿರಾಟ್ ಕೊಹ್ಲಿ ಅವರು, ಮೂರು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಅವರು ಈ ವರ್ಷ ಏಷ್ಯಾಕಪ್ ಇಂದ ಮತ್ತೆ ಫಾರ್ಮ್ ಗೆ ಮರಳಿ ಬಂದಿದ್ದಾರೆ. 2022ರಲ್ಲಿ ಮೂರು ರೀತಿಯ ಕ್ರಿಕೆಟ್ ನಲ್ಲಿ 39 ಇನ್ನಿಂಗ್ಸ್ ಗಳಲ್ಲಿ 1304 ರನ್ಸ್ ಗಳಿಸಿದ್ದಾರೆ. ಈ ವರ್ಷ ವಿರಾಟ್ ಕೊಹ್ಲಿ ಅವರ ಬೆಸ್ಟ್ ಸ್ಕೋರ್ 122 ಆಗಿದೆ. ಇದನ್ನು ಓದಿ..Cricket News: ಕೊನೆಯಲ್ಲಿ ಬಂದರು ಮಾಸ್ ಎಂಟ್ರಿ ಕೊಟ್ಟ ಶ್ರೇಯಸ್: ವರ್ಷವೆಲ್ಲ ಮಿಂಚಿದ್ದ ಸೂರ್ಯ ರನ್ನು ಹಿಂದಿಕ್ಕಿದ್ದು ಹೇಗೆ ಗೊತ್ತೆ?

ರಿಷಬ್ ಪಂತ್ (Rishabh Pant) :- ಅತಿಹೆಚ್ಚು ಸ್ಕೋರ್ ಮಾಡಿ ಟಾಪ್ 5 ಆಟಗಾರರ ಲಿಸ್ಟ್ ನಲ್ಲಿ ರಿಷಬ್ ಪಂತ್ ಅವರು 4ನೇ ಸ್ತಾನದಲ್ಲಿದ್ದಾರೆ. 2022ರಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಅವರು 1278 ರನ್ಸ್ ಗಳಿಸಿದ್ದಾರೆ. ಅದಾದ ಬಳಿಕ ರಿಷಬ್ ಪಂತ್ ಅವರು ಫಾರ್ಮ್ ಕಳೆದುಕೊಂಡರು ಎಂದು ಹೇಳಬೇಕು. ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲವಾದರು, ಒಳ್ಳೆಯ ಸ್ಕೋರ್ ಮಾಡಿದ್ದಾರೆ.

ರೋಹಿತ್ ಶರ್ಮಾ (Rohit Sharma) :- ಅತಿಹೆಚ್ಚು ಸ್ಕೋರ್ ಮಾಡಿದ 5 ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರು 5ನೇ ಸ್ತಾನದಲ್ಲಿದ್ದಾರೆ. 2022 ರಲ್ಲಿ ಇವರು 40 ಇನ್ನಿಂಗ್ಸ್ ಆಡಿದ್ದು, ಅದರಲ್ಲಿ 995 ರನ್ಸ್ ಗಳಿಸಿದ್ದಾರೆ. ಇವರ ಬೆಸ್ಟ್ ಸ್ಕೋರ್ 76 ಆಗಿದೆ. ಬಾಂಗ್ಲಾದೇಶ್ (India vs Bangladesh) ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಬೆರಳಿಗೆ ಗಾಯವಾದ ಕಾರಣ, ಮೂರನೇ ಪಂದ್ಯಕ್ಕಿಂತ ಮೊದಲು ಹೊರಗುಳಿದರು. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.