Neer Dose Karnataka
Take a fresh look at your lifestyle.

Kannada Astrology: ವರ್ಷ ಪೂರ್ತಿ ಚೆನ್ನಾಗಿರಬೇಕು ಎಂದರೆ, ಹೊಸ ವರ್ಷದ ದಿನ ಲಕ್ಷ್ಮಿ ತಾಯಿಗೆ ಈ ಹೂವು ಅರ್ಪಿಸಿ ಸಾಕು. ಲೈಫ್ ಜಿಂಗಲಾಲ

Kannada Astrology: ಹೊಸ ವರ್ಷ ಬರಲು ಇನ್ನೇನು ಕೆಲವು ದಿನಗಳು ಮಾತ್ರ ಉಳಿದಿದೆ. ಹೊಸ ವರ್ಷ ಬರುತ್ತದೆ ಎಂದರೆ ಎಲ್ಲರಲ್ಲೂ ಹೊಸತನ ಸಡಗರ, ಹೊಸ ಉತ್ಸಾಹ ಇದ್ದೇ ಇರುತ್ತದೆ. ಈ ಹೊಸ ವರ್ಷದಲ್ಲಿ ದೇವರಿಗೆ ಪ್ರಾರ್ಥನೆ ಮಾಡಿ, ಒಳ್ಳೆಯ ಕೆಲಸಗಳನ್ನು ಶುರು ಮಾಡಬೇಕು ಎನ್ನುವುದು ಬಹುತೇಕ ಎಲ್ಲರ ಆಸೆ ಆಗಿರುತ್ತದೆ. ಇಡೀ ವರ್ಷ ನೀವು ಚೆನ್ನಾಗಿರಬೇಕು, ಸಂತೋಷವಾಗಿ ಇರಬೇಕು, ನಿಮಗೆ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಬಯಸಿದರೆ, ಲಕ್ಷ್ಮೀದೇವಿಗೆ ಕೆಲವು ಹೂವುಗಳನ್ನು ಅರ್ಪಿಸಿ ಪೂಜೆ ಮಾಡಿ, ಇದರಿಂದ ನಿಮಗೆ ಅತ್ಯುತ್ತಮ ಫಲಸಿಗುತ್ತದೆ. ಹಾಗಿದ್ದರೆ ಆ ಹೂವುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕಮಲದ ಹೂವು :- ಲಕ್ಷ್ಮೀದೇವಿ ಕುಳಿತಿರುವುದು ಕಮಲದ ಹೂವಿನ ಮೇಲೆ, ಈ ಹೂವನ್ನು ಕಂಡರೆ ಲಕ್ಷ್ಮೀದೇವಿಗೆ ಬಹಳ ಇಷ್ಟ. ದೀಪಾವಳಿ ಹಬ್ಬದಂದು ವಿಶೇಷವಾಗಿ ಕಮಲದ ಹೂವಿನಿಂದ ಲಕ್ಷ್ಮೀದೇವಿಗೆ ಪೂಜೆ ಮಾಡುತ್ತಾರೆ. ಹಾಗಾಗಿ ಹೊಸ ವರ್ಷದ ದಿನ ವಿಶೇಷವಾಗಿ ಕಮಲದ ಹೂವನ್ನು ಲಕ್ಷ್ಮೀದೇವಿಗೆ ಅರ್ಪಿಸಿ ಪೂಜೆ ಮಾಡಿದರೆ, ಅದರಿಂದ ಇಡೀ ವರ್ಷ ಚೆನ್ನಾಗಿರುತ್ತದೆ. ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಜೀವನದ ಎಲ್ಲಾ ದುಃಖಗಳು ದೂರವಾಗುತ್ತದೆ.
ಚೆಂಡು ಹೂವು :- ನಮ್ಮ ಧರ್ಮದಲ್ಲಿ, ಪುರಾಣದಲ್ಲಿ ಮತ್ತು ಪೂಜೆ ಪುನಸ್ಕಾರಗಳಲ್ಲಿ ಈ ಹೂವಿಗೆ ಬಹಳ ಮಹತ್ವ ಇದೆ.. ಪೂಜೆ ಪುನಸ್ಕಾರಗಳಿಗೆ ಈ ಹೂವನ್ನೇ ಹೆಚ್ಚು ಬಳಸುತ್ತಾರೆ. ಲಕ್ಷ್ಮೀದೇವಿಗೂ ಪ್ರಿಯವಾದ ಹೂವು ಇದು. ಹಾಗಾಗಿ ಈ ಹೂವುಗಳನ್ನು ಹೊಸವರ್ಷದ ದಿನ ಲಕ್ಷ್ಮೀದೇವಿಗೆ ಅರ್ಪಿಸುವುದರಿಂದ, ನಿಮ್ಮ ಜ್ಞಾನ ಹೆಚ್ಚಾಗುತ್ತಾರೆ. ಲಕ್ಷ್ಮೀದೇವಿಗೆ ಸಂತೋಷ ಆಗುತ್ತದೆ. ಇದನ್ನು ಓದಿ..ಬೇಕಿದ್ರೆ ಬರೆದು ಇಟ್ಕೊಳಿ: ಶನಿ ದೇವ ಇನ್ನು ಎರಡು ವರ್ಷಗಳ ಕೃಪೆ ನೀಡಿ ಅದೃಷ್ಟ ನೀವುದು ಯಾವ್ಯಾವ ರಾಶಿಗಳಿಗೆ ಗೊತ್ತೇ? ಇವುಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ.

ಕೆಂಪು ಗುಲಾಬಿ :- ಲಕ್ಷ್ಮೀದೇವಿ ಬಹಳ ಇಷ್ಟಪಡುವ ಮತ್ತೊಂದು ಹೂವು. ಶುಕ್ರವಾರದ ದಿನ ಕೆಂಪು ಗುಲಾಬಿಯನ್ನು ಲಕ್ಷ್ಮೀದೇವಿಗೆ ಅರ್ಪಣೆ ಮಾಡುತ್ತಾ ಬಂದರೆ, ಜಾತಕದಲ್ಲಿ ಶುಕ್ರಗ್ರಹದ ಸ್ಥಾನ ಬಲವಾಗುತ್ತದೆ. ಹಾಗಾಗಿ ವರ್ಷದ ಮೊದಲ ದಿನ ಲಕ್ಷ್ಮೀದೇವಿಗೆ ಕೆಂಪು ಗುಲಾಬಿ ಅರ್ಪಣೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಒಬ್ಬ ವ್ಯಕ್ತಿ ಭೌತಿಕ ಸಂತೋಷಗಳನ್ನು ಪಡೆಯುತ್ತಾನೆ..
ಬಿಳಿ ಕಣಗಿಲೆ ಹೂವು :- ಲಕ್ಷ್ಮೀದೇವಿಗೆ ನೆಚ್ಚಿನ ಬಣ್ಣ ಬಿಳಿ, ಹಾಗಾಗಿ ಬಿಳಿ ಹೂವುಗಳನ್ನು ಅರ್ಪಿಸಿ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಗೆ ಬಹಳ ಸಂತೋಷ ಆಗುತ್ತದೆ. ಈ ಹೂವನ್ನು ಲಕ್ಷ್ಮೀದೇವಿಗೆ ಅರ್ಪಣೆ ಮಾಡುವ ಮೂಲಕ ಈ ಹೊಸ ವರ್ಷವನ್ನು ಶುರು ಮಾಡಿ. ಇದರಿಂದ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ ಹಾಗೆಯೇ ಈ ಗಿಡವನ್ನು ಮನೆಯಲ್ಲಿ ನೆಡಿ, ಇದರಿಂದ ಹಣಕ್ಕೆ ಯಾವತ್ತು ಕೊರತೆ ಬರುವುದಿಲ್ಲ.

ಕೆಂಪು ದಾಸವಾಳ :- ಎಲ್ಲಾ ದೇವರುಗಳು ಕೂಡ ಹೂವನ್ನು ಇಷ್ಟಪಡುತ್ತಾರೆ. ಲಕ್ಷ್ಮೀದೇವಿ ಇಷ್ಟಪಡುವ ಹೂವುಗಳಲ್ಲಿ ಕೆಂಪು ದಾಸವಾಳ ಕೂಡ ಒಂದು. ಈ ಹೂವಿನಿಂದ ಹೊಸ ವರ್ಷದ ದಿನ ಲಕ್ಷ್ಮೀದೇವಿಗೆ ಪೂಜೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ ಸಮೃದ್ಧಿ, ಎಲ್ಲವೂ ಚೆನ್ನಾಗಿರುತ್ತದೆ.. ಹಾಗಾಗಿ ಹೊಸ ವರ್ಷದ ದಿನ ಈ ಹೂವನ್ನು ದೇವಿಗೆ ಅರ್ಪಣೆ ಮಾಡಿ. ಇದನ್ನು ಓದಿ.. Kannada Astrology: ಇಂದಿನಿಂದ ನಿಮ್ಮ ಅದೃಷ್ಟ ಆರಂಭ: ತಡೆಯೋರು ಯಾರು ಇಲ್ಲ. 15 ದಿನಗಳವರೆಗೆ ನೀವೇ ರಾಜ. ಐದು ರಾಶಿಗಳಿಗೆ ಅದೃಷ್ಟ. ಯಾರು ಗೊತ್ತೇ?

Comments are closed.