Neer Dose Karnataka
Take a fresh look at your lifestyle.

Biggboss Kannada: ಎಲ್ಲರ ಲೆಕ್ಕಾಚಾರ ಬದಲಿಸಿದ ಬಿಗ್ ಬಾಸ್ ಸ್ಪರ್ದಿ: ಈ ಬಾರಿ ಬಿಗ್ ಬಾಸ್ ಗೆಲ್ಲೋದು ಇವರೇ ಅಂತ ನೋಡಿ. ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ನು ಅಲ್ಲ, ಮತ್ಯಾರು ಗೊತ್ತೇ?

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್9 (BBK9) ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಫಿನಾಲೆಗೆ ಉಳಿದಿರುವುದು ಇನ್ನೆರಡು ವಾರಗಳು ಮಾತ್ರ. ಈಗ ಬಿಗ್ ಬಾಸ್ ಮನೆಯೊಳಗೆ ಉಳಿದಿರುವುದು 8 ಸ್ಪರ್ಧಿಗಳು. ಮುಂದಿನ ವಾರ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಕಾಂಪಿಟೇಶನ್ ಟಫ್ ಆಗುತ್ತಿದೆ. ಜೊತೆಗೆ ಹೊರಗಿನ ಪ್ರಪಂಚದಲ್ಲಿ ವಿನ್ನರ್ ಯಾರಾಗಬಹುದು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.
ಮನೆಯಲ್ಲಿ ಸ್ಟ್ರಾಂಗ್ ಸ್ಫರ್ಧಿಗಳಾಗಿ ಗುರುತಿಸಿಕೊಂಡಿರುವವರು ರೂಪೇಶ್ ಶೆಟ್ಟಿ (Roopesh Shetty), ರೂಪೇಶ್ ರಾಜಣ್ಣ (Roopesh Rajanna), ರಾಕೇಶ್ ಅಡಿಗ (Rakesh Adiga)..

ಆದರೆ ಇವರಿಬ್ಬರು ಅಲ್ಲ, ಆ ಒಬ್ಬ ಸ್ಪರ್ಧಿ ಖಂಡಿತ ವಿನ್ನರ್ ಆಗುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ನೆಟ್ಟಿಗರು ಹೇಳಿ ಆಯ್ಕೆ ಮಾಡುತ್ತಿರುವ ಆ ಸ್ಪರ್ಧಿ ಮತ್ಯಾರು ಅಲ್ಲ, ದೀಪಿಕಾ ದಾಸ್ (Deepika Das) ಅವರು. ನಾಗಿಣಿ ಧಾರವಾಹಿ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ದೀಪಿಕಾ ದಾಸ್ ಅವರು, ಬಿಗ್ ಬಾಸ್ ಶೋ ಸೀಸನ್ 7ರಲ್ಲಿ ಬಂದು ಫಿನಾಲೆವರೆಗು ತಲುಪಿದ್ದರು. ಆದರೆ ಗೆಲ್ಲಲು ಆಗಿರಲಿಲ್ಲ, ಸೀಸನ್9 ರಲ್ಲಿ ಬಿಗ್ ಬಾಸ್ ಮನೆಯೊಳಗೆ ಬಂದು, ಉತ್ತಮವಾಗಿ ಕಾಣಿಸಿಕೊಂಡಿದ್ದರು. ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ದೀಪಿಕಾ ದಾಸ್ ಎಲಿಮಿನೇಟ್ ಆಗಿ, ಒಂದು ದಿವಸದ ಅಂತರದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮತ್ತೆ ಬಾಗ್ ಬಾಸ್ ಮನೆಗೆ ಬಂದರು. ಇದನ್ನು ಓದಿ..Kannada News: ಬಿಗ್ ನ್ಯೂಸ್: ದರ್ಶನ್ ಮೇಲೆ ಚಪ್ಪಲಿ ಎಸೆತ ವಿಷಯದ ಬಗ್ಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ಸುದೀಪ್. ಏನು ಹೇಳಿದ್ದಾರೆ ಗೊತ್ತೇ?

ವಾಪಸ್ ಬಂದ ನಂತರ ದೀಪಿಕಾ ದಾಸ್ ಅವರು ಬಹಳ ಬದಲಾಗಿದ್ದಾರೆ. ಎಲ್ಲರ ಜೊತೆಗೂ ಹೆಚ್ಚು ಬೆರೆಯುವುದಕ್ಕೆ ಶುರು ಮಾಡಿದ್ದಾರೆ. ಟಾಸ್ಕ್ ಗಳಲ್ಲಿ ಇನ್ನು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಆಡುವ ಬಹುತೇಕ ಎಲ್ಲಾ ಟಾಸ್ಕ್ ಗಳಲ್ಲೂ ಗೆಲ್ಲುತ್ತಿದ್ದಾರೆ. ದೀಪಿಕಾ ದಾಸ್ ಅವರು, ಸತತ ಎರಡು ವಾರಗಳು ಕಿಚ್ಚ ಸುದೀಪ್ ಅವರಿಂದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದರು. ಕಳೆದ ವಾರ ಅರುಣ್ ಸಾಗರ್ ಅವರ ಜೊತೆಗೆ ದೀಪಿಕಾ ಅವರು ಮಾಡಿದ ಸ್ಕಿಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಈ ಎಲ್ಲಾ ಕಾರಣಗಳಿಂದ ದೀಪಿಕಾ ದಾಸ್ ಅವರೆ ಈ ಸೀಸನ್ ನ ವಿನ್ನರ್ ಆಗಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಬರೆಯುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.