Neer Dose Karnataka
Take a fresh look at your lifestyle.

FIFA World Cup: ವಿಶ್ವಕಪ್ ಗೆದ್ದಿರಬಹುದು, ಆದರೆ ಮೆಸ್ಸಿ ಒರಿಜಿನಲ್ ಟ್ರೋಫಿ ಅರ್ಜೆಂಟಿನಾ ಗೆ ತೆಗೆದುಕೊಂಡು ಹೋಗಲಿಲ್ಲ. ಯಾಕೆ ಗೊತ್ತೇ? ಚಿನ್ನ ಟ್ರೋಫಿ ಎಲ್ಲೋಯ್ತು?

FIFA World Cup: ಫಿಫಾ ವರ್ಲ್ಡ್ ಕಪ್ ನಲ್ಲಿ ಅರ್ಜೆಂಟಿನ (Argentina) ತಂಡ ಫ್ರಾನ್ಸ್ (France) ವಿರುದ್ಧ ಗೆಲುವು ಸಾಧಿಸಿದೆ. ಸಮಬಲ ಪಡೆದಿದ್ದ ಎರಡು ತಂಡಗಳ ಸ್ಕೋರ್ ಟೈ ಆದ ಕಾರಣ, ಟೈ ಬ್ರೇಕರ್ ಸುತ್ತಿನಲ್ಲಿ ಲಿಯೋನಲ್ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟಿನ ತಂಡ ಗೆದ್ದು, ವಿಶ್ವ ಚಾಂಪಿಯನ್ ಎನ್ನಿಸಿಕೊಂಡಿದೆ. ಲಿಯೋನಲ್ ಮೆಸ್ಸಿ ಅವರ ಬಹುವರ್ಷದ ಕನಸು ನನಸಾಗಿದೆ. ಬರೋಬ್ಬರಿ 36 ವರ್ಷಗಳ ನಂತರ ಅರ್ಜೆಂಟಿನ ತಂಡ, ಫಿಫಾ ವರ್ಲ್ಡ್ ಕಪ್ ಗೆದ್ದಿದೆ. ಸತತ ಪರಿಶ್ರಮದ ನಂತರ ವಿಶ್ವಕಪ್ ಗೆದ್ದಿದ್ದರು ಕೂಡ ಚಿನ್ನದ ಕಪ್ ಅನ್ನು ಅರ್ಜೆಂಟಿನ ಗೆ ತೆಗೆದುಕೊಂಡು ಹೋಗಲು ಆಗಲಿಲ್ಲ. ನಿಜಕ್ಕೂ ಏನಾಗಿದೆ ಗೊತ್ತಾ?

ಲಿಯೋನಲ್ ಮೆಸ್ಸಿ ಅವರ ತಂಡ ಈಗ ವರ್ಲ್ಡ್ ಚಾಂಪಿಯನ್ಸ್, ಮುಂದಿನ 4 ವರ್ಷಗಳು ಇವರ ತಂಡವೆ ಪ್ರಪಂಚದ ಬೆಸ್ಟ್ ಫುಟ್ ಬಾಲ್ ಎಂದು ಅನ್ನಿಸಿಕೊಳ್ಳುತ್ತದೆ. ಆದರೆ, ಫಿನಾಲೆ ಗೆದ್ದು, ಚಾಂಪಿಯನ್ಸ್ ಆಗಿದ್ದರು ಕೂಡ ಚಿನ್ನದ ಕಪ್ ಇವರ ಜೊತೆಗೆ ಅರ್ಜೆಂಟಿನ ಗೆ ಹೋಗಿಲ್ಲ, ಅದಕ್ಕೆ ಕಾರಣ, ಫಿಫಾದ ನಿಯಮ ಆಗಿದೆ. ವಿಶ್ವಕಪ್ ಗೆದ್ದ ತಂಡಕ್ಕೆ, ಒರಿಜಿನಲ್ ಕಪ್ ಅನ್ನು ನೀಡುವುದಿಲ್ಲ. ತಾಮ್ರದ ಕಪ್ ಅನ್ನು ನೀಡಲಾಗುತ್ತದೆ. ಮೊದಲಿಗೆ ಫಿಫಾ ನಿಯಮ ಬೇರೆ ರೀತಿ ಇತ್ತು, ಮೂರು ಸಾರಿ ವಿಶ್ವಕಪ್ ಗೆಲ್ಲುವ ತಂಡಕ್ಕೆ ಚಿನ್ನದ ಕಪ್ ನೀಡುತ್ತದೆ ಎನ್ನಲಾಗಿತ್ತು, ಅದೇ ರೀತಿ 1970ರಲ್ಲಿ ಬ್ರೆಜಿಲ್ (Brazil) ತಂಡ ಮೂರನೇ ಸಾರಿ ಕಪ್ ಗೆದ್ದಿತು, ಬ್ರೆಜಿಲ್ ಗೆ ಚಿನ್ನದ ಕಪ್ ಅನ್ನು ಕಳಿಸಲಾಯಿತು. ಇದನ್ನು ಓದಿ..Cricket News: ಕೊನೆಗೂ ಎಚ್ಚೆತ್ತ ರಾಹುಲ್ ದ್ರಾವಿಡ್: ರಚಿಸಿದರೂ ಮಾಸ್ಟರ್ ಪ್ಲಾನ್. ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯಲು ಮಾಡುತ್ತಿರುವುದೇನು ಗೊತ್ತೇ?

ಆದರೆ ಕೆಲ ಸಮಯದ ನಂತರ ಬ್ರೆಜಿಲ್ ನಲ್ಲಿ ಕಪ್ ಕಳುವಾಯಿತು. ಈ ಕಾರಣದಿಂದ, ನಿಯಮದ ಬದಲಾವಣೆ ಮಾಡಲಾಯಿತಿ. ಈಗ ಗೆಲ್ಲುವ ತಂಡಕ್ಕೆ ತಾಮ್ರದ ಕಪ್ ನೀಡಲಾಗುತ್ತದೆ. ಫಿಫಾ ವರ್ಲ್ಡ್ ಕಪ್ ಒರಿಜಿನಲ್ ಟ್ರೋಫಿಯನ್ನು ಸ್ವಿಟ್ಜರ್ಲೆಂಡ್ ನ ಜ್ಯುರಿಕ್ (Zurich) ನಲ್ಲಿರುವ ವರ್ಲ್ಡ್ ಕಪ್ ಮ್ಯೂಸಿಯಂ (World Cup Museum) ನಲ್ಲಿ ಇಡಲಾಗುತ್ತದೆ. ವರ್ಲ್ಡ್ ಕಪ್ ನಡೆಯುವಾಗ ಆಯಾ ದೇಶಕ್ಕೆ ಕಪ್ ಅನ್ನು ತೆಗೆದುಕೊಂಡು ಹೊಗಲಾಗುತ್ತದೆ. ಬಳಿಕ, ಮತ್ತೆ ಸ್ವಿಟ್ಜರ್ಲೆಂಡ್ ಗೆ ತೆಗೆದುಕೊಂಡು ಹೋಗುತ್ತಾರೆ. ಮುಂದಿನ ಫಿಫಾ ವರ್ಲ್ಡ್ ಕಪ್ ನಡೆಯುವುದು 2026ರಲ್ಲಿ, ಕೆನಡಾ ಮತ್ತು ಮೆಕ್ಸಿಕೋನಲ್ಲಿ ಅಮೆರಿಕಾ ದೇಶದ ನೇತೃತ್ವದ ಜೊತೆಗೆ ನಡೆಯುತ್ತದೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.