Neer Dose Karnataka
Take a fresh look at your lifestyle.

Cricket News: ರೋಹಿತ್ ಅನ್ನು ಮೀರಿಸುವ ಮಹಾ ನಾಯಕ ರಾಹುಲ್: ಮೊದಲನೇ ಪಂದ್ಯ ಗೆಲ್ಲಿಸಿಕೊಟ್ಟ ಕುಲದೀಪ್ ಅನ್ನು ಹೊರಹಾಕಿದಕ್ಕೆ ನೀಡಿದ ಕಾರಣ ಏನು ಗೊತ್ತೇ?

Cricket News: ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ನಡುವಿನ ಎರಡನೆಯ ಹಾಗೂ ಕೊನೆಯ ಟೆಸ್ಟ್ ಪಂದ್ಯ ಢಾಕಾದಲ್ಲಿ ಶುರುವಾಗಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ನಡೆದಿದೆ. ಈ ಪಂದ್ಯಕ್ಕಾಗಿ ಬಾಂಗ್ಲಾದೇಶ್ ತಂಡ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಇನ್ನು ಭಾರತ ತಂಡದಲ್ಲಿ ಯಾರು ಊಹಿಸದ ಬದಲಾವಣೆ ಮಾಡಲಾಗಿದೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಕುಲದೀಪ್ ಯಾದವ್ (Kuldeep Yadav) ಅವರನ್ನು ತಂಡದಿಂದ ಹೊರಗಿಟ್ಟು ಜಯದೇವ್ ಉನಕ್ದತ್ ಅವರನ್ನು ಪ್ಲೇಯಿಂಗ್ 11 ಗೆ ಸೇರಿಸಿಕೊಳ್ಳಲಾಗಿದೆ. ಇದಕ್ಕೀಗ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿದೆ.

ಬಿಸಿಸಿಐ (BCCI) ವಿರುದ್ಧ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 16 ಓವರ್ ಬೌಲಿಂಗ್ ಮಾಡಿ, 40 ರನ್ಸ್ ಕೊಟ್ಟು, 5 ವಿಕೆಟ್ಸ್ ಕಬಳಿಸಿದ್ದರು. 2ನೇ ಇನ್ನಿಂಗ್ಸ್ ನಲ್ಲಿ 20 ಓವರ್ ಬೌಲಿಂಗ್ ಮಾಡಿ, 3 ವಿಕೆಟ್ಸ್ ಪಡೆದಿದ್ದರು. ಬ್ಯಾಟಿಂಗ್ ನಲ್ಲಿ ಸಹ 114 ಎಸೆತಗಳಲ್ಲಿ 40 ರನ್ಸ್ ಗಳಿಸಿದ್ದರು. ರವಿಚಂದ್ರನ್ ಅಶ್ವಿನ್ (Ravichandran Ashwin) ಅವರೊಡನೆ ಉತ್ತಮ ಜೊತೆಯಾಟ ನೀಡಿ, 92 ರನ್ಸ್ ಕಲೆಹಾಕಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲು ಉತ್ತಮ ಪ್ರದರ್ಶನ ನೀಡಿದ್ದ ಕಾರಣ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಹಾಗಿದ್ದರೂ ಇಂಥಹ ಅದ್ಭುತ ಫಾರ್ಮ್ ನಲ್ಲಿರುವ ಆಟಗಾರನನ್ನು ಹೊರಗಿಟ್ಟಿರುವುದಕ್ಕೆ ಬಿಸಿಸಿಐ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದ, ಕ್ಯಾಪ್ಟನ್ ಕೆ.ಎಲ್.ರಾಹುಲ್ (KL Rahul) ಅವರು ಇದರ ಬಗ್ಗೆ ಹೇಳಿದ್ದು ಹೀಗೆ.. ಇದನ್ನು ಓದಿ..Cricket News: ಕೊನೆಗೂ ಎಚ್ಚೆತ್ತ ರಾಹುಲ್ ದ್ರಾವಿಡ್: ರಚಿಸಿದರೂ ಮಾಸ್ಟರ್ ಪ್ಲಾನ್. ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯಲು ಮಾಡುತ್ತಿರುವುದೇನು ಗೊತ್ತೇ?

“ಜಯದೇವ್ ಉನಕ್ದತ್ (Jayadev Unakdat) ಅವರನ್ನು ಕುಲದೀಪ್ ಯಾದವ್ ಅವರ ಬದಲಾಗಿ ಆಯ್ಕೆ ಮಾಡಿರುವುದು ಬಹಳ ಕಠಿಣವಾದ ನಿರ್ಧಾರ. ಈಗ ನಮ್ಮ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ (Axar Patel) ಅವರ ಸ್ಪಿನ್ ಬೌಲಿಂಗ್ ನ ವೈಶಿಷ್ಟ್ಯದ ಅಗತ್ಯವಿದೆ. ಇನ್ನು ಜಯದೇವ್ ಅವರು ಪಂದ್ಯದಲ್ಲಿ ಎಲ್ಲಾ ವಿಭಾಗಕ್ಕೂ ಸಹಾಯವಾಗುತ್ತಾರೆ. ಇದು ಅವರಿಗೆ ಒಂದು ಒಳ್ಳೆಯ ಅವಕಾಶ ಆಗಿದೆ..” ಎಂದು ಕೆ.ಎಲ್.ರಾಹುಲ್ ಅವರು ಕಾರಣ ನೀಡಿದ್ದಾರೆ. ಜಯದೇವ್ ಉನಕ್ದತ್ ಅವರು ಬರೋಬ್ಬರಿ 12 ವರ್ಷಗಳ ನಂತರ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ವಾಪಸ್ ಬಂದಿದ್ದಾರೆ. 2010ರಲ್ಲಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ ಇವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಈಗ ಒಳ್ಳೆಯ ಫಾರ್ಮ್ ನಲ್ಲಿರುವ ಕಾರಣ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.