Neer Dose Karnataka
Take a fresh look at your lifestyle.

Kannada News: ದರ್ಶನ್ ಗೆ ಇನ್ನು ಮುಂದೆ ಇದೆಯೇ ಮಾರಿ ಹಬ್ಬ?? ಕ್ಯಾಮೆರಾ ಮುಂದೆ ಬಂದು ಶಿವಕುಮಾರ್ ಹೇಳಿದ್ದೇನು ಗೊತ್ತೇ? ಶಾಕ್ ಆದ ದರ್ಶನ್.

Kannada News: ನಟ ದರ್ಶನ್ (Darshan) ಅವರ ಮೇಲೆ ಹೊಸಪೇಟೆಯಲ್ಲಿ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಪ್ರಕರಣ ಈಗಲೇ ಕಡಿಮೆ ಆಗುವ ಹಾಗೆ ಕಾಣುತ್ತಿಲ್ಲ. ಆ ರೀತಿ ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಎಂದು ನಟ ದರ್ಶನ್ ಅವರ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ, ರಾಜವಂಶದ ಪರವಾಗಿ ಹಲವರು ನಿಂತಿದ್ದಾರೆ. ಯುವ ರಾಜ್ ಕುಮಾರ್ ಅವರು ಮತ್ತು ನಟ ದುನಿಯಾ ವಿಜಯ್ ಅವರು ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಹಾಗೆ ಅಪ್ಪು ಅವರ ಅಭಿಮಾನಿಗಳು ದರ್ಶನ್ ಅವರ ಅಭಿಮಾನಿಗಳ ನಡೆಯನ್ನು ಖಂಡಿಸುತ್ತಿದ್ದಾರೆ.. ಇದೇ ವಿಚಾರಕ್ಕೆ, ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯ ಸಿಎಂ ಶಿವಕುಮಾರ್ ನಾಯ್ಕ್ (C M Shivakumar Naik) ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ನಟ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..

ಶಿವಕುಮಾರ್ ಅವರು ವಿಡಿಯೋದಲ್ಲಿ ಹೇಳಿರುವುದು ಹೀಗೆ.. “ಡಾ.ರಾಜ್‌ ಕುಮಾರ್ (Dr. Rajkumar) ಅವರ ಮನೆಯವರ ತೇಜೋವಧೆ ಮಾಡೋದಕ್ಕೆ ಬಂದ್ರೆ ಚೆನ್ನಾಗಿ ಬುದ್ಧಿ ಕಲಿಸಬೇಕಾಗುತ್ತೆ. ಎಲ್ಲರು ನಿಮ್ಮ ನಿಮ್ಮ ಅಭಿಪ್ರಾಯಗಳನ್ನ ಕರೆಕ್ಟ್ ಆಗಿ ತಿಳಿಸಿ. ಇಲ್ಲದೆ ಹೋದರೆ ನಿಮ್ಮ ಮನೆ ಎದುರು ಬಂದು ಹೋರಾಟ ಮಾಡಬೇಕಾಗುತ್ತೆ. ಡಾ.ರಾಜ್‌ ಕುಮಾರ್ ಅವರ ಅಭಿಮಾನಿಯಾಗಿ, ಕನ್ನಡಾಂಬೆ ಮತ್ತು ಭಾರತಾಂಬೆಯ ಅಭಿಮಾನಿಯಾಗಿ ನಾನು ನಟ ದರ್ಶನ್ ಅವರಿಗೆ ಖಡಕ್ ಆಗಿ ಒಂದು ಸಂದೇಶ ನೀಡುತ್ತಿದ್ದೇನೆ. ದರ್ಶನ್ ಅವರೇ ಮೊನ್ನೆ ಹೊಸಪೇಟೆಯಲ್ಲಿ ನಿಮ್ಮ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಗ್ಗೆ, ಅಭಿಮಾನಿಗಳ ನಡುವೆ ಜಗಳ ತಂದಿಟ್ಟು ಚಳಿ ಕಾಯಿಸಿಕೊಳ್ಳುತ್ತಿರುವ ಹಾಗೆ ಕಾಣುತ್ತಿದೆ.?

ಅದು ಬೇಡ.. ನಿಮ್ಮ ಎಲ್ಲಾ ಅಭಿಮಾನಿಗಳ ಹತ್ತಿರ ಈಗಲೇ ಹೇಳಿ.. ಡಾ.ರಾಜ್‌ ಕುಮಾರ್ ಅವರ ಕುಟುಂಬದ ವಿರುದ್ಧ ಅವರುಗಳು ಮಾತನಾಡುತ್ತಿರುವುದನ್ನು ಈಗಲೇ ನಿಲ್ಲಿಸಬೇಕು. ಮುಂದುವರೆಸಿದರೆ ನಿಮ್ಮ ಮನೆ ಮುಂದೆ ಬಂದು ಪ್ರತಿಭಟನೆ ಮಾಡ್ತಿವಿ. ದರ್ಶನ್ ಅವರೇ ನಿಮ್ಮ ಮನೆಗೆ ಕಲ್ಲು ಹೊಡೆದಾಗ, ರಾಜರಾಜೇಶ್ವರಿ ಸರ್ಕಲ್‌ ಗೆ ಬಂದು ನಾವು ಹೋರಾಟ ಮಾಡಿದ್ದೇವೆ. ಅದನ್ನ ಹೆಮ್ಮೆಯಿಂದ ಹೇಳುತ್ತೇವೆ. ರಾಬರ್ಟ್ ಸಿನಿಮಾಗೆ ತೊಂದರೆ ಆದಾಗ ನಿಮ್ಮ ಜೊತೆ ಹೋರಾಟಕ್ಕೆ ನಿಂತೆವು. ಅವರ ಅಭಿಮಾನಿ, ಇವರ ಅಭಿಮಾನಿ ಅಂತ ನಾವು ಹೋರಾಟ ಮಾಡಿಲ್ಲ, ನಾವು ಎಲ್ಲವನ್ನು ಮಾಡಿದ್ದು ಕನ್ನಡಿಗರಿಗೆ ತೊಂದರೆ ಆಗಬಾರದು ಅಂತ. ಇದನ್ನು ಓದಿ.. Kannada News: ಬಿಸಿ ಬಿಸಿ ದೃಶ್ಯಗಳಲ್ಲಿ ನಟನೆ ಮಾಡುವುದಿಲ್ಲ ಎಂದಿದ್ದ ಕೀರ್ತಿ, ಅದೊಂದು ಸಿನೆಮಾಗೆ ಕಾಂಪ್ರೊಮೈಸ್ ಆಗಿದ್ದು ಯಾಕೆ ಗೊತ್ತೇ??

ಅವನು ಯಾರೋ ಪುನೀತ್ ಕರೆಹಳ್ಳಿ ಅನ್ನೋ ಹುಡುಗ ಇಲ್ಲ ಸಲ್ಲದನ್ನು ಮಾತನಾಡಿ, ಡಾ.ರಾಜ್‌ ಕುಮಾರ್ ಅವರ ಕುಟುಂಬದ ತೇಜೋವಧೆ ಮಾಡೋದಕ್ಕೆ ಬಂದರೆ ಸರಿಯಾದ ಬುದ್ಧಿ ಕಳಿಸುತ್ತೇವೆ. ಹೊಸಪೇಟೆಗೆ ಹೋಗಿ ಹೋರಾಟ ಮಾಡ್ತಿವಿ ಅಂತ ಘೋಷಣೆ ಮಾಡಿದ್ದೀವಿ. ಯಾಕಂದ್ರೆ ಇಷ್ಟು ವರ್ಷಗಳಲ್ಲಿ ಡಾ. ರಾಜ್ ಕುಮಾರ್ ಅವರ ಕುಟುಂಬ ಬೇರೆ ನಟರ ಬಗ್ಗೆ ಮಾತನಾಡಿರೋನ್ನ ನೋಡಿದ್ದೀರಾ? ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಇದ್ದಷ್ಟು ಸಮಯ ಯಾರ ಬಗ್ಗೆ ಆದರೂ ಮಾತನಾಡಿದ್ದಾರಾ. ನಿಮ್ಮ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದಕ್ಕೆ ನೋವಿದೆ. ಅವರ ಬಂಧನ ಆಗಬೇಕು. ಆದರ ಕಲಾವಿದರ ಮಧ್ಯೆ ಜಗಳ ತಂದಿಟ್ಟು ಚಳಿಕಾಯಿಸಿಕೊಳ್ಳೋದು ಸರಿಯಾದ ರೀತಿ ಅಲ್ಲ.. ಹೊರ ರಾಜ್ಯದ ಜನರು ನಮ್ಮನ್ನು ನೋಡಿ ನಗುವ ಹಾಗೆ ಆಗಬಾರದು. ಕರ್ನಾಟಕದಲ್ಲಿ ನಾವೆಲ್ಲ ಒಂದೇ ಅನ್ನೋದು ಸಾಬೀತಾಗಬೇಕು…” ಎಂದು ಹೇಳಿ ದರ್ಶನ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನು ಓದಿ..Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.