Neer Dose Karnataka
Take a fresh look at your lifestyle.

Kannada News: ಇಹಲೋಕ ತ್ಯಜಿಸಿರುವ ತೆಲುಗಿನ ಹಿರಿಯ ನಟ ಸತ್ಯನಾರಾಯಣ ಒಟ್ಟು ಗಳಿಸಿರುವ ಆಸ್ತಿ ಎಷ್ಟು ಗೊತ್ತೇ? ಅಂದಿನ ಕಾಲದಲ್ಲಿಯೇ ಇಷ್ಟೊಂದಾ??

Kannada News: ಟಾಲಿವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಒಂದರ ನಂತರ ಒಂದು ದುರಂತಗಳು, ನೋವಿನ ಸಂಗತಿಯಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ರೆಬೆಲ್ ಸ್ಟಾರ್ ಕೃಷ್ಣಮ್ ರಾಜು (Krishnam Raju) ಅವರು ನಿಧನರಾದರು, ಅದಾದ ಸ್ವಲ್ಪ ದಿನಕ್ಕೆ ಸೂಪರ್ ಸ್ಟಾರ್ ಕೃಷ್ಣ (Super Star Krishna) ಅವರು ಇಹಲೋಕ ತ್ಯಜಿಸಿದರು. ಹೀಗೆ ಒಂದಾದ ಮೇಲೆ ಒಂದು ಬೇಸರದ ಘಟನೆ, ಹಿರಿಯ ಸ್ಟಾರ್ ನಟರ ಮರಣ ನಡೆಯುತ್ತಿದೆ. ಈ ಸಾಲಿಗೆ ಮತ್ತೊಂದು ನೋವಿನ ವಿಚಾರ ಸೇರಿಕೊಂಡಿದೆ, ತೆಲುಗು ಚಿತ್ರರಂಗದ ಮತ್ತೊಬ್ಬ ಲೆಜೆಂಡ್, ಹಿರಿಯನಟ ನಿಧನರಾಗಿದ್ದಾರೆ. ಕೈಕಾಳ ಸತ್ಯನಾರಾಯಣ (Kaikala Sathyanarayana) ಅವರು ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಯ ವಿಚಾರ ಟಾಲಿವುಡ್ ಗೆ ಇನ್ನಷ್ಟು ನೋವು ನೀಡಿದೆ.

ಹಿರಿಯ ದಿಗ್ಗಜರ ಅಗಲಿಕೆಯ ನೋವನ್ನು ಮರೆಯುವ ಮೊದಲೇ ಮತ್ತೊಬ್ಬ ಲೆಜೆಂಡರು ನಟ ಇಹಲೋಕ ತ್ಯಜಿಸಿರುವುದು ನಿಜಕ್ಕೂ ಟಾಲಿವುಡ್ ಗೆ ಬಹಳ ಬೇಸರ ಮತ್ತು ನೋವು ತಂದಿದೆ. ಸತ್ಯನಾರಾಯಣ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಡಿಸೆಂಬರ್ 23ರ ಬೆಳಗ್ಗೆ ಸತ್ಯನಾರಾಯಣ ಅವರು ಕೊನೆಯುಸಿರೆಳೆದರು ಎನ್ನುವ ವಿಷಯವನ್ನು ಅವರ ಕುಟುಂಬ ವರ್ಗ ತಿಳಿಸಿದೆ. ಸತ್ಯನಾರಾಯಣ ಅವರು ಇಹಲೋಕ ತ್ಯಜಿಸಿದ ಮೇಲೆ, ಅವರು ಇಷ್ಟು ವರ್ಷ ಗಳಿಸಿರುವ ಆಸ್ತಿ ಬಗ್ಗೆ ಚರ್ಚೆಯಾಗುತ್ತಿದೆ, ಹಾಗಿದ್ದಲ್ಲಿ ಸತ್ಯನಾರಾಯಣ ಅವರು ಗಳಿಸಿರುವ ಆಸ್ತಿ ಎಷ್ಟು ಎಂದು ತಿಳಿಸುತ್ತೇವೆ ನೋಡಿ. ಕೈಕಾಳ ಸತ್ಯನಾರಾಯಣ ಅವರು ತೆಲುಗು ಚಿತ್ರರಂಗದ ಹೆಮ್ಮೆಯ ನಟ, ಹಲವು ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ. ಇದನ್ನು ಓದಿ..Kannada News: ದರ್ಶನ್ ಗೆ ಇನ್ನು ಮುಂದೆ ಇದೆಯೇ ಮಾರಿ ಹಬ್ಬ?? ಕ್ಯಾಮೆರಾ ಮುಂದೆ ಬಂದು ಶಿವಕುಮಾರ್ ಹೇಳಿದ್ದೇನು ಗೊತ್ತೇ? ಶಾಕ್ ಆದ ದರ್ಶನ್.

776 ಸಿನಿಮಾಗಳಲ್ಲಿ ಇವರು ನಟಿಸಿದ್ದು, ಇವರ ಯಮನ ಪಾತ್ರಗಳು ಹೆಚ್ಚು ಫೇಮಸ್ ಆಗಿವೆ. ಸತ್ಯನಾರಾಯಣ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಹಾಗಾಗಿ ಚಿತ್ರರಂಗದಿಂದ ದೂರ ಉಳಿದಿದ್ದರು. ಸತ್ಯನಾರಾಯಣ ಅವರು ಗಳಿಸಿದ ಆಸ್ತಿ ವಿವರಗಳ ಬಗ್ಗೆ ನೋಡುವುದಾದರೆ, ಚೆನ್ನೈನಲ್ಲಿ ಹೈದರಾಬಾದ್‌ ನಲ್ಲಿ ಸತ್ಯನಾರಾಯಣ ಅವರಿಗೆ ಸ್ವಂತ ಮನೆ ಇದೆ. ಹಾಗೆಯೇ ಸತ್ಯನಾರಾಯಣ ಅವರ ಹತ್ತಿರ ಎರಡು ದುಬಾರಿ ಕಾರ್ ಗಳಿವೆ. ಒಂದು ಕಾರ್ ನ ಬೆಲೆ 67 ಲಕ್ಷ ರೂಪಾಯಿಗಳು, ಇನ್ನೊಂದು ಕಾರ್ ನ ಬೆಲೆ 29 ಲಕ್ಷ ರೂಪಾಯಿಗಳು. ಅಷ್ಟೇ ಅಲ್ಲದೆ, ಹೈದರಾಬಾದ್ ನ ಗಚ್ಚಿಬೌಲಿಯಲ್ಲಿ ಫ್ಲ್ಯಾಟ್ ಕೂಡ ಹೊಂದಿದ್ದಾರೆ. ಈ ಫ್ಲ್ಯಾಟ್ ನ ಬೆಲೆ 1.47 ಕೋಟಿ ರೂಪಾಯಿ ಆಗಿದೆ. ಇವರ ಒಟ್ಟು ಆಸ್ತಿ 30 ಕೋಟಿಯಷ್ಟಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.