Neer Dose Karnataka
Take a fresh look at your lifestyle.

Kannada News: ವಂಶಿಕ ರವರನ್ನು ಕೂಡ ಹಿಂದಿಕ್ಕಿ ಮುನ್ನುಗ್ಗಿದ ಪುಟಾಣಿ ದಿವ್ಯ ಹೆಗ್ಡೆ. ಏನು ಗೊತ್ತೇ??

134

Kannada News: ಕಳೆದ ಕೆಲವು ತಿಂಗಳುಗಳಿಂದ ಕಿರುತೆರೆಯಲ್ಲಿ ಪುಟ್ಟ ಬೆಡಗಿ ವಂಶಿಕಾ ಅವರದ್ದೇ ಹವಾ ಎಂದು ಹೇಳಿದರೆ ತಪ್ಪಾಗಲ್ಲ. ನನ್ನಮ್ಮ ಸೂಪರ್ ಸೀಸನ್ 1 ರಲ್ಲಿ ಸ್ಪರ್ಧಿಯಾಗಿ ಅಮ್ಮನ ಜೊತೆಗೆ ಬಂದು, ಟೆರಿಫಿಕ್ ಪರ್ಫಾರ್ಮೆನ್ಸ್ ಇಂದ ಎಲ್ಲರ ಗಮನ ಸೆಳೆದಿದ್ದ ವಂಶಿಕಾ, ಆ ಶೋನ ವಿನ್ನರ್ ಆಗಿ ಹೊರಹೊಮ್ಮಿದಳು. ಕಲರ್ಸ್ ಕನ್ನಡ ವಾಹಿನಿಯ ಟಿಆರ್ಪಿ ವಂಶಿಕಾ ಇಂದ ಹೆಚ್ಚಾಯಿತು ಎಂದರೆ ತಪ್ಪಲ್ಲ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1 ನಂತರ ವಂಶಿಕಾ, ಗಿಚ್ಚಿ ಗಿಲಿಗಿಲಿ ಶೋನಲ್ಲೋ ಪ್ರತಿ ವಾರ ವಿಭಿನ್ನವಾದ ಪಾತ್ರಗಳ ಮೂಲಕ, ವೀಕ್ಷಕರಿಗೆ ಇನ್ನಷ್ಟು ಹತ್ತಿರವಾದಳು.

ಆ ಶೋ ಮುಗಿದ ಬಳಿಕ, ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಅವರ ಲವ್ಲಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿರುವ ವಂಶಿಕಾ, ಈಗ ನನ್ನಮ್ಮ ಸೂಪರ್ ಸ್ಟಾರ್2 ನಲ್ಲಿ ನಿರೂಪಣೆ ಕೂಡ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾಳೆ. ವಂಶಿಕಾ ಹವಾ ಎಷ್ಟರ ಮಟ್ಟಿಗೆ ಇದೆ, ಜನರಿಗೆ ಈ ಮುದ್ದು ಪೋರಿಯನ್ನು ಕಂಡರೆ ಎಷ್ಟು ಇಷ್ಟ ಎಂದು ಎಲ್ಲರಿಗೂ ಗೊತ್ತಿದೆ, ಆದರೆ ಈಗ ವಂಶಿಕಾಗಿಂತ ಹೆಚ್ಚಾಗಿ ಮತ್ತೊಬ್ಬ ಮಗುವಿಗೆ ಕರ್ನಾಟಕದ ಜನತೆ ಫಿದಾ ಆಗಿದ್ದಾರೆ. ಆ ಮಗು ಮತ್ಯಾರು ಅಲ್ಲ, ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ದಿಯಾ ಹೆಗ್ಡೆ. ಇದನ್ನು ಓದಿ..Kannada News: ದಿಡೀರ್ ಎಂದು ಸರಿಹೋದ ದರ್ಶನ್ ಕೂದಲು: ವಿಗ್ ಹಾಕಿ ಬಂದ್ರ ಅಥವಾ ಕಸಿ ಮಾಡಿಸಿಕೊಂಡು ಬಿಟ್ರಾ??

ದಿಯಾ ಹೆಗ್ಡೆ ಅದ್ಭುತವಾಗಿ ಹಾಡು ಹಾಡುವುದರ ಜೊತೆಗೆ, ತಾನೇ ಸ್ವಂತವಾಗಿ ಸಾಹಿತ್ಯ ಬರೆದು, ಹಾಡುವ ಟ್ಯಾಲೆಂಟ್ ಅನ್ನು ಸಹ ಹೊಂದಿದ್ದಾಳೆ. ಪ್ರತಿ ವಾರ ಹೊಸ ಕಾನ್ಸೆಪ್ಟ್ ಮೂಲಕ ಜಡ್ಜ್ ಗಳ ಎದುರು ಬಂದು, ಪರ್ಫಾರ್ಮ್ ಮಾಡಿ, ಒಳ್ಳೆಯ ಕಮೆಂಟ್ಸ್ ಪಡೆಯುತ್ತಿದ್ದಾಳೆ. ಈಗ ವಂಶಿಕಾ ಗಿಂತ ದಿಯಾ ಹೆಗ್ಡೆ ಮೇಲಿನ ಕ್ರೇಜ್ ಹೆಚ್ಚು ಇದೆ ಎಂದರೆ ತಪ್ಪಲ್ಲ. ವಂಶಿಕಾ ಅವರಿಗಿಂತ ದಿಯಾ ಹೆಗ್ಡೆ ಬಗ್ಗೆ ಜನರು ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ಗೂಗಲ್ ನಲ್ಲೂ ದಿಯಾ ಹೆಗ್ಡೆ ಬಗ್ಗೆ ಹೆಚ್ಚು ಹುಡುಕುತ್ತಿದ್ದಾರೆ. ಹಾಗಾಗಿ ವಂಶಿಕಾರನ್ನೇ ಹಿಂದಿಕ್ಕಿ ಸಾಗುತ್ತಿದ್ದಾರೆ ದಿಯಾ ಹೆಗ್ಡೆ. ಇದನ್ನು ಓದಿ..Biggboss Kannada: ಅಸಲಿಗೆ ಎಲ್ಲರ ಮನಗೆದ್ದಿದ್ದ ಅಮಾಯಕ ಹುಡುಗಿ ಅಮೂಲ್ಯ ರವರಿಗಿಂತ ಮೊದಲು ಹೊರಬರಬೇಕಾದದ್ದು ಯಾರು ಗೊತ್ತೇ??

Leave A Reply

Your email address will not be published.