Neer Dose Karnataka
Take a fresh look at your lifestyle.

Kannada News: ಶೆಟ್ರು ಗ್ಯಾಂಗ್ ನಲ್ಲಿ ಬಿರುಕು: ಕುಚಿಕು ಗೆಳೆಯ ರಕ್ಷಿತ್ ಬಿಗ್ ಶಾಕ್ ಕೊಟ್ಟ ರಿಷಬ್ ಶೆಟ್ಟಿ; ಎಲ್ಲವು ಚೆನ್ನಾಗಿರುವಾಗ ನಡೆದದ್ದು ಏನು ಗೊತ್ತೇ?? ಫ್ಯಾನ್ಸ್ ಕಣ್ಣೀರು.

Kannada News: ಕನ್ನಡ ಚಿತ್ರರಂಗದಲ್ಲಿ ಶೆಟ್ರು ಗ್ಯಾಂಗ್ ಗೆ ಭಾರಿ ಬೇಡಿಕೆ ಇದೆ, ಇವರು ಮಾಡುವ ಸಿನಿಮಾಗಳು ಸೂಪರ್ ಹಿಟ್ ಆಗುವ ಜೊತೆಗೆ ಮನಸ್ಸಿಗೆ ಮುಟ್ಟುವಂಥ ಸಿನಿಮಾ ಆಗಿರುತ್ತದೆ. ಅದಕ್ಕೆ ಉದಾಹರಣೆ ಈ ವರ್ಷ ತೆರೆಕಂಡ ಚಾರ್ಲಿ (777 Charlie) ಮತ್ತು ಕಾಂತಾರ (Kantara). ಈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿವೆ. ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ನಟ ನಿರ್ದೇಶಕ ಎನ್ನುವುದರ ಜೊತೆಗೆ ಅವರೊಬ್ಬ ನಿರ್ಮಾಪಕ ಎನ್ನುವ ವಿಷಯ ನಮಗೆ ಗೊತ್ತಿದೆ. ತಮ್ಮದೇ ಆದ ಪರಂವಃ ಸಂಸ್ಥೆಯಿಂದ ಇತ್ತೀಚೆಗೆ ಬ್ಯಾಚುಲರ್ ಪಾರ್ಟಿ (Bachelor Party) ಎನ್ನುವ ಹೆಸರಿನ ಸಿನಿಮಾವನ್ನು ಶುರು ಮಾಡಿದ್ದರು, ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ (Rishab Shetty), ದಿಗಂತ್ (Diganth) ಮತ್ತು ಅಚ್ಯುತ್ ಕುಮಾರ್ (Achyuth Kumar) ಅವರು ನಟಿಸಬೇಕಿತ್ತು.

ಸಿನಿಮಾ ಮುಹೂರ್ತ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ರಿಷಬ್ ಶೆಟ್ಟಿ ಅವರು ಬ್ಯಾಚುಲರ್ ಪಾರ್ಟಿ ಸಿನಿಮಾ ಇಂದ ಹೊರನಡೆಯುವ ಮೂಲಕ ಗೆಳೆಯ ರಕ್ಷಿತ್ ಶೆಟ್ಟಿ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ. ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆಗಿದೆ. ಕಾಂತಾರ ಸಿನಿಮಾ ನೋಡಿ ಫಿದಾ ಆಗದವರಿಲ್ಸ್, ಈ ಸಿನಿಮಾ ಇಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಹಾಗಾಗಿ ರಿಷಬ್ ಶೆಟ್ಟಿ ಅವರು ಬ್ಯಾಚುಲರ್ ಪಾರ್ಟಿ ಸಿನಿಮಾ ಇಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಚಪ್ಪಲಿ ಎಸೆದವರ ಅಂತ್ಯ ಖಚಿತ, ಶುರುವಾಯಿತು ದಾಸನ ಆಟ: ನಡುಗಿದ ಕರ್ನಾಟಕ. ಮಹಾನ್ ವ್ಯಕ್ತಿಗೆ ಕಪ್ಪು ಚುಕ್ಕೆ ತಂದವರು ಏನಾಗಿದ್ದಾರೆ ಗೊತ್ತೇ??

ಇನ್ನು ರಿಷಬ್ ಶೆಟ್ಟಿ ಅವರ ಬದಲಾಗಿ ಲೂಸ್ ಮಾದ ಯೋಗಿ ಅವರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಯೋಗಿ ಅವರು ಇತ್ತೀಚೆಗೆ ಹೆಡ್ ಬುಶ್ ಸಿನಿಮಾದಲ್ಲಿ ನಟಿಸಿ, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದ್ದರು. ಇದೀಗ ಬ್ಯಾಚುಲರ್ ಪಾರ್ಟಿ ಸಿನಿಮಾಗು ಆಯ್ಕೆಯಾಗಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅವರು ಈ ರೀತಿ ಮಾಡಿದ ಕಾರಣ ಶೆಟ್ರು ಗ್ಯಾಂಗ್ ನಲ್ಲಿ ವೈಮನಸ್ಸು ಮುನಿಸು ಶುರುವಾಗಿ, ಬಿರುಕು ಮೂಡಿದೆ ಎನ್ನುವ ಹೊಸ ವಿಚಾರ ಕೂಡ ಸುದ್ದಿಯಾಗುತ್ತಿದೆ. ಇದನ್ನು ಓದಿ..Kannada News: ಬಾಯ್ತಪ್ಪಿ ನಾಲಿಗೆ ಹರಿ ಬಿಟ್ಟ ದರ್ಶನ್: ಒಬ್ಬ ನಟನೆ ಹೀಗೆ ಹೇಳಿದರೆ ಹೇಗೆ ಎಂದ ನೆಟ್ಟಿಗರು. ದರ್ಶನ್ ಮಾಡಿದ ಎಡವಟ್ಟೇನು ಗೊತ್ತೇ??

Comments are closed.