Biggboss Kannada: ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ; ಸನ್ಯಾ ಬಳಿ ಹೋಗಿ ಏನು ಮಾಡ್ತಾರಂತೆ ಗೊತ್ತೇ? ರೂಪೇಶ್ ಶೆಟ್ಟಿ ಹೇಳಿಕೆ ಕಂಡು ಬೆಚ್ಚಿ ಬೆರಗಾದ ಜನ.
Biggboss Kannada: ಬಿಗ್ ಬಾಸ್ ಓಟಿಟಿ ಸೀಸನ್ ಇಂದ ಟಿವಿ ಸೀಸನ್ ವರೆಗು ಎಲ್ಲರನ್ನು ಸೆಳೆದ ಜೋಡಿ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ. ಬಿಗ್ ಬಾಸ್ ಮನೆಯ ಲವ್ ಬರ್ಡ್ಸ್ ಆಗಿ ಈ ಜೋಡಿ ಹೆಸರುವಾಸಿಯಾಗಿದ್ದರು. ಟಿವಿ ಸೀಸನ್ ನಲ್ಲೂ ಈ ಫ್ರೆಂಡ್ಶಿಪ್ ಮುಂದುವರೆದಿತ್ತು. ಆದರೆ, ಟಿಬಿ ಸೀಸನ್ ಶುರುವಾದ ಕೆಲವೇ ವಾರಗಳಿಗೆ ಸಾನ್ಯಾ ಎಲಿಮಿನೇಟ್ ಆದಾಗ, ರೂಪೇಶ್ ಶೆಟ್ಟಿ ಕಣ್ಣೀರು ಹಾಕಿ ಬೀಳ್ಕೊಟ್ಟಿದ್ದರು. ಹೊರಗಡೆ ಹೋದಮೇಲೆ ಬದಲಾಗಬೇಡ ಎಂದು ಮನವಿ ಮಾಡಿಕೊಂಡಿದ್ದರು.
ಬಹಳ ಬೇಗ ಹೊರಗಡೆ ಸಿಗ್ತಿನಿ ಎಂದು ಕೂಡ ಹೇಳಿದ್ದರು. ಈಗ ಸಾನ್ಯಾ ಅವರನ್ನು ನೇರವಾಗಿ ಭೇಟಿ ಮಾಡುವ ಸಮಯ ಹತ್ತಿರ ಬಂದಿದೆ. ಈಗ ರೂಪೇಶ್ ಶೆಟ್ಟಿ ಅವರನ್ನು ಪ್ರಶ್ನೆ ಕೇಳಲಾಗಿದೆ, ಸಾನ್ಯಾ ಅವರನ್ನು ಹೊರಗಡೆ ಭೇಟಿ ಆದಾಗ ಆಡುವ ಮಾತೇನು ಎಂದು ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ರೂಪೇಶ್ ಶೆಟ್ಟಿ ಅವರು, ಮೊದಲು ಹೇಗಿದ್ಯಾ ಎಂದು ಕೇಳಿ ಹಗ್ ಮಾಡ್ತೀನಿ, ಹೊರಗಡೆ ಇದ್ದಾಗ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡೆ ಎಂದು ಕೇಳ್ತೀನಿ. ನನ್ನ ಬಗ್ಗೆ ಇರುವ ಪ್ರೀತಿ, ಕಾಳಜಿ ಎಲ್ಲಾ ಇನ್ನು ಹಾಗೆ ಇದೆಯಾ, ಹೊಸ ಪ್ರಾಜೆಕ್ಟ್ ಗಳು ಬಂತಾ ಎಂದು ಕೇಳುತ್ತೇನೆ ಎಂದಿದ್ದಾರೆ ರೂಪೇಶ್ ಶೆಟ್ಟಿ. ಇದನ್ನು ಓದಿ..Kannada News: ಶುರುವಾಯಿತು ಬಹಿರಂಗ ವಾರ್: ಮತ್ತೊಂದು ಎಡವಟ್ಟು ಮಾಡಿಕೊಂಡ ಡಿ ಬಾಸ್: ಅಪ್ಪು ಫ್ಯಾನ್ಸ್ ಈ ಬಾರಿ ಕೊಟ್ಟ ಎಚ್ಚರಿಕೆ ಏನು ಗೊತ್ತೇ?

ಜೊತೆಗೆ ಮಾತು ಮುಂದುವರೆಸಿ, ಸಾನ್ಯಾ ಅವರನ್ನ ಬಿಗ್ ಬಾಸ್ ಮನೆಯಲ್ಲಿ ನೋಡಿದ್ದೀನಿ, ಹೊರಗಡೆ ನೋಡಿಲ್ಲ. ಬಿಗ್ ಬಾಸ್ ಮನೆಯೊಳಗೆ ನನ್ನ ಮೇಲೆ ಇದ್ದ ಅಭಿಪ್ರಾಯ ಹಾಗೆ ಇದೆಯಾ ಎಂದು ಕೇಳ್ತೀನಿ.. ಇನ್ನು ತುಂಬಾ ಪ್ರಶ್ಮೆ ಇದೆ ಎಂದು ಹೇಳಿದ್ದಾರೆ ರೂಪೇಶ್ ಶೆಟ್ಟಿ. ಇನ್ನು ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ಯಾರು ಎಂದು ಗೊತ್ತಾಗಲಿದ್ದು, ಫಿನಾಲೆ ಸಂಚಿಕೆಗಾಗಿ ಎಲ್ಲಾ ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ. ವಿನ್ನರ್ ಆಗಿ ಯಾರು ಹೊರಹೊಮ್ಮುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Biggboss Kannada: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ ಆರ್ಯವರ್ಧನ್; ರೂಪೇಶ್ ಶೆಟ್ಟಿ ಬಗ್ಗೆ ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೆ?