Neer Dose Karnataka
Take a fresh look at your lifestyle.

Kannada News: ಎಲ್ಲರೂ ಬಿದ್ದಿರುವ ಹಣವನ್ನು ಆಯ್ದುಕೊಳ್ಳುತ್ತಿದ್ದರೆ, ಬಿದ್ದಿದ್ದ ರಿಷಬ್ ಪ್ರಾಣ ಉಳಿಸಿದ ಹುಡುಗ ಮಾಡುವ ಕೆಲಸ ಏನಂತೆ ಗೊತ್ತೇ??

20,410

Kannada News: ಶುಕ್ರವಾರ ಬೆಳಗ್ಗೆ ಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಯಿತು. ಪ್ರತ್ಯಕ್ಷವಾಗಿ ಅದನ್ನು ನೋಡಿದವರು ಹೇಳಿದ ಹಾಗೆ, ಅಪಘಾತದ ನಂತರ ರಿಷಬ್ ಶೆಟ್ಟಿ ಅವರು ಕಾರ್ ಇಂದ ಇಳಿಯಲು ಪ್ರಯತ್ನ ಮಾಡಿದರು ಕೂಡ, ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ, ಅಲ್ಲಿಂದ ಹೊರಡಲು ಸಾಧ್ಯವಾಗಲಿಲ್ಲ. ನಂತರ ಅವರೇ ಕಷ್ಟಪಟ್ಟು ಹೇಗೋ ಅಲ್ಲಿಂದ ಹೊರಟಿದ್ದಾರೆ. ರಿಷಬ್ ಪಂತ್ ಕಾರಿನಲ್ಲಿ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಇತ್ತು ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಹಣವೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಿಷಬ್ ಅವರು ಅಲ್ಲಿ ನರಳುತ್ತಲೇ ಇದ್ದರು.

ಆ ಸಮಯದಲ್ಲಿ ಕೆಲವರು ರಿಷಬ್‌ ಪಂತ್ ಅವರಿಗೆ ಸಹಾಯ ಮಾಡುವ ಬದಲು ತಮ್ಮ ಜೇಬಿಗೆ ನೋಟುಗಳನ್ನು ತುಂಬಿಕೊಂಡು ವೀಡಿಯೋ ಮಾಡಿಕೊಂಡು ನಿಂತಿದ್ದರು. ಆಸ್ಪತ್ರೆಗೆ ಹೋದ ನಂತರ, ಫಸ್ಟ್ ಏಡ್ ಚಿಕಿತ್ಸೆ ವೇಳೆ, ಸೂಟ್‌ ಕೇಸ್ ಹೊರತುಪಡಿಸಿ, ಕಾರಿನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟುಹೋಗಿವೆ ಎಂದು ಸ್ವತಃ ರಿಷಬ್ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ಸ್ಥಳದಿಂದ ಪಡೆದ ನಗದು, ಬಳೆ ಮತ್ತು ಸರವನ್ನು ರಿಷಭ್ ಅವರ ಮುಂದೆ ಆಸ್ಪತ್ರೆಯಲ್ಲಿ ಅವರ ತಾಯಿಗೆ ಕೊಡಲಾಗಿದೆ. ಇತ್ತ, ರಿಷಬ್‌ ಅವರಿಗೆ ಸಹಾಯ ಮಾಡಲು ಬಂದ ಯುಪಿ ಹುಡುಗ ರಜತ್, ಸುಮಾರು 500 ನೋಟುಗಳು ಕೆಳಗೆ ಬಿದ್ದುದ್ದವು, ಜನರು ಅವುಗಳನ್ನು ಎತ್ತಿಕೊಂಡು ಹೋಗುತ್ತಿದ್ದರು ಎಂದು ಹೇಳಿದ್ದಾರೆ. ಆಗ ಇಬ್ಬರು ಯುವಕರು ರಿಷಬ್ ಪಂತ್ ಅವರನ್ನು ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲೇ ಅಲ್ಲಿದ್ದರು. ಇದನ್ನು ಓದಿ..Utility: 2023 ರ ಆರಂಭದಲ್ಲಿಯೇ ಹಣಕಾಸಿನ ವಿಷಯದಲ್ಲಿ ಮಹತ್ವದ ಬದಲಾವಣೆ : ನಿಮಗೆ ತಿಳಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.

ಈ ಯುವಕರಲ್ಲಿ ಒಬ್ಬ ಮುಜಾಫರ್‌ ನಗರದ ರಜತ್ ಬುಚಾ ಬಸ್ತಿ ಶಕರ್‌ ಪುರ ನಿವಾಸಿ ಎಂದು ತಿಳಿದುಬಂದಿದೆ. ಆ ಯುವಕ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಲಿಬ್ಬರ್ಹೇರಿಯಲ್ಲಿರುವ ಉತ್ತಮ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ. ರಜತ್ ಅವರು ಅಲ್ಲಿಯೇ ಕೆಲಸ ಮಾಡುವ ಇನ್ನು ಇಬ್ಬರು, ನಿಶು ಮತ್ತು ಓಂ ಕುಮಾರ್ ಅವರ ಜೊತೆಗೆ ಬೈಕ್‌ ನಲ್ಲಿ ಬೆಳಗಿನ ಶಿಫ್ಟ್ ಗೆ ಕೆಲಸಕ್ಕೆ ಹೋಗುತ್ತಿದ್ದರು. ಆಗ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಅವರನ್ನು ಗುರುತಿಸಿದರು, ಇವರ ಜೊತೆಗೆ ಹರಿಯಾಣ ರೋಡ್‌ ವೇಸ್ ಬಸ್‌ ಡ್ರೈವರ್ ಮತ್ತು ಕಂಡಕ್ಟರ್ ರಿಷಬ್ ಅವರಿಗೆ ಸಹಾಯ ಮಾಡಿದರು.

ನಂತರ ರಿಷಭ್ ಅವರನ್ನು ಆಸ್ಪತ್ರೆಗೆ ಕರೆತರುವಾಗ ಇಬ್ಬರು ಯುವಕರು ಕೂಡ ಅಲ್ಲಿದ್ದರು ಎಂದು ಡಾ.ಸುಶೀಲ್ ನಾಗರ್ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ರಿಷಬ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಡಾಕ್ಟರ್ ತಿಳಿಸಿರುವ ಹಾಗೆ, ಆರಂಭದಲ್ಲಿ ರಿಷಬ್ ಪಂತ್ ಅವರ ಪರಿಸ್ಥಿತಿ ಬಹಳ ಗಂಭೀರವಾಗಿತ್ತು, ನಂತರ ಅವರು ಸುಧಾರಿಸಿದ್ದಾರೆ ಎಂದು ಹೇಳಿದ್ದಾರೆ. ನಂತರ ರಿಷಬ್ ಪಂತ್ ಅವರನ್ನು ಡೆಹ್ರಾಡುನ್‌ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ಆಸ್ಪತ್ರೆಯಲ್ಲಿ ರಿಷಬ್ ಪಂತ್ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುವುದು ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Kannada News: ಶುರುವಾಯಿತು ಬಹಿರಂಗ ವಾರ್: ಮತ್ತೊಂದು ಎಡವಟ್ಟು ಮಾಡಿಕೊಂಡ ಡಿ ಬಾಸ್: ಅಪ್ಪು ಫ್ಯಾನ್ಸ್ ಈ ಬಾರಿ ಕೊಟ್ಟ ಎಚ್ಚರಿಕೆ ಏನು ಗೊತ್ತೇ?

Leave A Reply

Your email address will not be published.