Neer Dose Karnataka
Take a fresh look at your lifestyle.

Kannada Astrology: ಇಡೀ ವರ್ಷ ಪೂರ್ತಿ ಮೇಷ ರಾಶಿಯವರಿಗೆ ಹೇಗಿರಲಿದೆ ಗೊತ್ತೇ?? ಇಡೀ ವರ್ಷದ ಭವಿಷ್ಯ ಒಮ್ಮೆಲೇ ತಿಳಿದುಕೊಳ್ಳಿ.

Kannada Astrology: 2023ರ ಈ ಹೊಸ ವರ್ಷ ಮೇಷ ರಾಶಿಯವರಿಗೆ ಬಹಳ ಒಳ್ಳೆಯ ಫಲಗಳನ್ನು ನೀಡುತ್ತದೆ. ಈ ರಾಶಿಯವರಿಗೆ ಮಂಗಳಗ್ರಹ, ಗುರುಗ್ರಹ ಮತ್ತು ಶನಿಗ್ರಹ ಯೋಗಕಾರಕ ಗ್ರಹಗಳಾಗಿದೆ. ಜನವರಿ 17ರಂದು ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಲಾಭದ ದಿಕ್ಕಿನಲ್ಲಿ ಸಾಗುತ್ತಾನೆ. ಏಪ್ರಿಲ್ 22ರಂದು ಗುರುಗ್ರಹವು ಮೇಷ ರಾಶಿಯಲ್ಲಿ ಸಾಗಲಿದ್ದು, ನಿಮ್ಮ ಲಗ್ನದಲ್ಲಿ ಉಳಿಯುತ್ತಾನೆ, ಈ ವರ್ಷದ ಮುಂದಿನ ಸಮಯದಲ್ಲಿ ರಾಹು ಗ್ರಹವು ಮೀನ ರಾಶಿಯನ್ನು ಪ್ರವೇಷ ಮಾಡುತ್ತದೆ ಹಾಗೂ ಆಕ್ಟೊಬರ್ 30ರಂದು ಕೇತು ಗ್ರಹವು ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಈ ಎಲ್ಲಾ ಬದಲಾವಣೆ ಇಂದ ಮೇಷ ರಾಶಿಯವರಿಗೆ ಈ ವರ್ಷ ಶುಭವಾಗಿರುತ್ತದೆ. ಗ್ರಹಗಳ ಸ್ಥಾನ ಬದಲಾವಣೆ ಇಂದ ಒಳ್ಳೆಯ ಅವಕಾಶ ಸಿಗುತ್ತದೆ, ಅವುಗಳನ್ನು ನೀವು ಸರಿಯಾಗಿ ಬಳಸಿಕೊಂಡರೆ, ನೀವು ಎತ್ತರಕ್ಕೆ ಏರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಇಡೀ ವರ್ಷ ಮೇಷ ರಾಶಿಯವರಿಗೆ ಹೇಗಿರುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಜನವರಿ-ಫ್ರಬ್ರವರಿ :- 2023 ವರ್ಷದ ಆರಂಭದಲ್ಲಿ, ರಾಹು ಲಗ್ನದ ಮನೆಯಲ್ಲಿರುತ್ತಾನೆ, ಸೂರ್ಯದೇವನು ಅದೃಷ್ಟದ ಮನೆಯಲ್ಲಿರುತ್ತಾನೆ ಹಾಗು ಶನಿಯು ಹತ್ತನೇ ಮನೆಯಲ್ಲಿ ಇರುತ್ತಾನೆ. ವರ್ಷದ ಆರಂಭದಲ್ಲಿಯೇ ಅದೃಷ್ಟವು ನಿಮಗೆ ಒಲವು ತೋರಲಿದೆ. ಇದಲ್ಲದೆ, ನೀವು ಕೈಗೊಂಡ ಎಲ್ಲಾ ಕೆಲಸಗಳು ಯಶಸ್ಸು ಕಾಣುತ್ತದೆ, ಗುರು ಗ್ರಹದ ಅನುಗ್ರಹದಿಂದ, ಕೆಲಸದ ಮಾಡುವ ಸ್ಥಳದಲ್ಲಿ ಗೌರವವನ್ನು ಪಡೆಯುತ್ತೀರಿ, ಲಗ್ನದ ಮನೆಯಲ್ಲಿ ಇರುವ ರಾಹು ಕೂಡ ನಿಮ್ಮನ್ನು ಒಂದು ಹಂತದವರೆಗು ನಿಮಗೆ ದಾರಿ ಕಾಣದ ಹಾಗೆ ಮಾಡಬಹುದು, ಹಾಗಾಗಿ ಸ್ನೇಹಿತರು ಸಲಹೆ ನೀಡಿದರೆ ಚಿಂತನಶೀಲವಾಗಿ ವರ್ತಿಸುವುದು ಒಳ್ಳೆಯದು. ಜನವರಿ 17 ರ ನಂತರ, ಶನಿದೇವರು ಶುಭ ಸ್ಥಳದಲ್ಲಿರುತ್ತಾನೆ, ಈ ಸಂಚಾರ ರಾಜಕೀಯದಲ್ಲಿರುವ ಜನರಿಗೆ ಒಳ್ಳೆಯದಾಗುತ್ತದೆ. ಉನ್ನತ ಅಧಿಕಾರಿಗಳ ಬೆಂಬಲ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಇಷ್ಟು ವರ್ಷ ಕಷ್ಟನೇ ಆಯ್ತಾ? ಮುಂದಿನ ವರ್ಷ ನಿಮ್ಮದೇ ಆತ: ಈ ನಾಲ್ಕು ರಾಶಿಗಳಿಗೆ ದುಡ್ಡು, ಜೊತೆಗೆ ಟಚ್ ಮಾಡೋಕೆ ಕೂಡ ಆಗಲ್ಲ.

ಫೆಬ್ರವರಿ ತಿಂಗಳಿನಲ್ಲಿ ಮಂಗಳ ಮತ್ತು ಶುಕ್ರ ಗ್ರಹದ ಚಲನೆ ಮೇಷ ರಾಶಿಯವರಿಗೆ ಅನುಕೂಲ ನೀಡುತ್ತದೆ. ಮಾತಿನ ಮನೆಯಲ್ಲಿ ಮಂಗಳ ಗ್ರಹ ಮತ್ತು ಲಾಭದ ಮನೆಯಲ್ಲಿ ಶುಕ್ರಗ್ರಹ ಸಂತೋಷ ನೀಡುತ್ತಾರೆ. ಸಂಗಾತಿಯ ಜೊತೆಗೆ ರೋಮ್ಯಾಂಟಿಕ್ ಸಮಯ ಕಳೆಯುವಿರಿ, ಅವರೊಡನೆ ವಿಹಾರಕ್ಕೆ ಹೋಗಬಹುದು. ಈ ಸಮಯದಲ್ಲಿ ನೀವು ಗುರುದೇವರ ಬೆಂಬಲ ಪಡೆಯುತ್ತೀರಿ ಮತ್ತು ಪ್ರೀತಿಯ ಪ್ರಸ್ತಾಪವನ್ನು ನಿಮಗೆ ಬರುತ್ತದೆ. ಚಿಕ್ಕ ವಯಸ್ಸಿನವರು ತಮ್ಮ ಸಹಚರರೊಬ್ಬರ ಕಡೆಗೆ ಆಕರ್ಷಿತರಾದ ನಂತರ ಪ್ರೀತಿಯಲ್ಲಿ ಬೀಳುತ್ತಾರೆ. ಬರವಣಿಗೆ ಮತ್ತು ಕಲೆಗೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ಫ್ಯಾಷನ್ ಮತ್ತು ಗ್ಲಾಮರ್ ಕ್ಷೇತ್ರದಲ್ಲಿ ಕೆಲಸ ಮಾಡುವ ಹುಡುಗಿಯರು ಈ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ. ಈ ಸಮಯದಲ್ಲಿ, ಕೆಲಸ ಶುರು ಮಾಡಲು ಬಯಸುವ ಮಹಿಳೆಯರಿಗೆ ಕುಟುಂಬದ ಸಹಾಯ ಸಿಗುತ್ತದೆ.

ಮಾರ್ಚ್-ಏಪ್ರಿಲ್ :- ಮಾರ್ಚ್ ತಿಂಗಳಲ್ಲಿ, ಮಂಗಳಗ್ರಹ ಮಿಥುನ ರಾಶಿಯಲ್ಲಿ ಸಾಗುತ್ತದೆ, ಅದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳು ಬರುತ್ತವೆ. ಪ್ರಬಲ ಮನೆಯಲ್ಲಿ ಮಂಗಳ ಗ್ರಹದ ಸಂಚಾರದಿಂದ, ನಿಮ್ಮ ಸಹೋದರರ ಸಹಕಾರ ಮತ್ತು ಹೊಸ ಕೆಲಸ ಶುರುವಾಗುತ್ತದೆ. ನೀವು ಶುರು ಮಾಡುವ ಬ್ಯುಸಿನೆಸ್ ಯಶಸ್ವಿಯಾಗುತ್ತದೆ. ಈ ಸಮಯದಲ್ಲಿ, ಗುರುಗ್ರಹದ ದೃಷ್ಟಿ ನಾಲ್ಕನೇ ಮನೆಯ ಮೇಲೆ ಬರಲಿದೆ, ಇದರಿಂದ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಬಹುದು. ಏಪ್ರಿಲ್ ಅಂತ್ಯದಲ್ಲಿ, ಗುರುಗ್ರಹದ ಸಂಚಾರದಿಂದ, ನಿಮ್ಮ ವ್ಯಕ್ತಿತ್ವ ವಿಭಿನ್ನ ರೀತಿಯ ಹೊಳಪು ಪಡೆಯುತ್ತದೆ. ಮಕ್ಕಳಿಲ್ಲದ ದಂಪತಿಗಳು ಮಗುವನ್ನು ಪಡೆಯುತ್ತಾರೆ. ಶೇರ್ ಮಾರ್ಕೆಟ್ ನಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ಸರ್ಕಾರಿ ಕೆಲಸಕ್ಕೆ ತಯಾರಿ ಮಾಡುವವರು ಯಶಸ್ಸು ಗಳಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಸಂಪೂರ್ಣ ಸಂತೋಷವಾಗಿರುತ್ತೀರಿ. ಗುರುವಿನ ಪ್ರಭಾವದಿಂದ ನಿಮ್ಮ ಅದೃಷ್ಟ ಹೆಚ್ಚಾಗಬಹುದು. ನಿಮ್ಮ ತಂದೆ ಮತ್ತು ಗುರುಗಳ ಮೂಲಕ ಹೊಸ ಕೆಲಸ ಪಡೆಯಬಹುದು. ಇದನ್ನು ಓದಿ..Kannada Astrology: ಅಪ್ಪಿ ತಪ್ಪಿನೂ ಏನೆ ಬಂದರು ಈ ತಪ್ಪು ಮಾಡಬೇಡಿ, ಇರುವ ಹಣವೆಲ್ಲ ಕಳೆದುಕೊಂಡು ಬೀದಿಗೆ ಬರ್ತೀರಾ.

ಮೇ-ಜೂನ್ :- ಶುಕ್ರ ಮತ್ತು ಮಂಗಳ ಗ್ರಹದ ಪ್ರಭಾವದಿಂದ, ಮನಸ್ಸು ಆಸ್ತಿ ಖರೀದಿ ಕಡೆಗೆ ನೀವು ಗಮನ ಹರಿಸಬಹುದು. ಈ ಸಮಯದಲ್ಲಿ, ಆರ್ಥಿಕ ಪರಿಸ್ಥಿತಿಯನ್ನು ನೋಡಿದ ನಂತರ ಮುಂದಿನ ಹೆಜ್ಜೆ ಇಡುವುದು ಒಳ್ಳೆಯದು.ಲಗ್ನದ ಮನೆಯಲ್ಲಿ ರಾಹು ಮತ್ತು ಶನಿದೇವರು ಐದನೇ ಲಾಭದ ಮನೆಯಲ್ಲಿ ಕುಳಿತಿರುವುದು ಸ್ವಲ್ಪ ಹಠಮಾರಿ ವರ್ತನೆಗೆ ಕಾರಣವಾಗಬಹುದು. ಈ ಸಮಯದಲ್ಲಿ, ವಿರುದ್ಧ ಲಿಂಗದ ಕಡೆಗೆ ಆಕರ್ಷಣೆ ಇಂದ ನೀವು ತೊಂದರಿಗೆ ಒಳಗಾಗಬಹುದು. ಲಗ್ನದ ಉಚ್ಛ ಸ್ಥಾನದಲ್ಲಿ ಸೂರ್ಯದೇವರ ಸಂಚಾರವು ರಾಹುವಿನ ಜೊತೆಯಲ್ಲಿ ಗ್ರಹಣ ದೋಷವನ್ನು ಉಂಟುಮಾಡುತ್ತದೆ, ಇದರಿಂದಾಗಿ ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಹಾಗೆ ಕೆಲಸ ಮಾಡುತ್ತಿರುವ ಜನರು ತೊಂದರೆ ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ಅಹಂಕಾರ ಹೆಚ್ಚಾಗಬಹುದು.

ಜುಲೈ-ಆಗಸ್ಟ್ :- ಜುಲೈ ನಂತರ, ಸೂರ್ಯ ಬುಧ ಮತ್ತು ಗುರುಗ್ರಹದ ಕಾರಣ, ನೀವು ಪ್ರಮುಖ ಕೆಲಗಳಲ್ಲಿ ಯಶಸ್ಸು ಸಾಧಿಸುವಿರಿ. ವಿದೇಶಿ ಮನೆಯ ಅಧಿಪತಿ ಲಗ್ನದಲ್ಲಿರುತ್ತದೆ, ಆಗ ವರ್ಷದ ಮಧ್ಯದಲ್ಲಿ ನಿಮಗೆ ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. ಬ್ಯುಸಿನೆಸ್ ಮಾಡುವವರಿಗೆ ಈ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ, ಕೆಲವು ತಪ್ಪು ತಿಳುವಳಿಕೆಯಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಬಹುದು, ಹಾಗಾಗಿ ಜಾಗರೂಕವಾಗಿರಿ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಬಳಲುತ್ತಿದ್ದ ಈ ಐದು ರಾಶಿಗಳಿಗೆ ಶುಭ ಸಮಯ ಆರಂಭ ಆಯಿತು. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಸೆಪ್ಟೆಂಬರ್-ಆಕ್ಟೊಬರ್ :- ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ, ನಿಮ್ಮ ಜೀವನದಲ್ಲಿ ಭವಿಷ್ಯಕ್ಕಾಗಿ ಒಂದು ಚೌಕಟ್ಟನ್ನು ಸಿದ್ಧವಾಗುತ್ತದೆ. ರಾಹುಗ್ರಹದ ಸಂಚಾರ ನಿಮ್ಮ ಲಗ್ನದಿಂದ ದೂರವಾಗಿ 12 ನೇ ಮನೆಗೆ ಪ್ರವೇಶ ಮಾಡಲಿದೆ ಹಾಗೂ ನೀವು ಗುರು ಚಂಡಾಲ ಯೋಗದಿಂದ ಮುಕ್ತಿ ಪಡೆಯುತ್ತೀರಿ. ಇದರಿಂದ, ನಿಮ್ಮ ದಾಂಪತ್ಯ ಜೀವನದಲ್ಲಿ ಸಿಹಿಯಾದ ಸಮಯ ಶುರುವಾಗುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಈಗ ಒಳ್ಳೆಯ ರೀತಿಯ ಫಲಿತಾಂಶಗಳನ್ನು ಪಡೆಯುತ್ತಾರೆ. ಗುರುಗ್ರಹದ ದೃಷ್ಟ ನಿಮಗೆ ಹಣಕಾಸಿನ ವಿಷಯಗಳಲ್ಲಿ ಯಶಸ್ಸು ಸಿಗುತ್ತದೆ.

ಸೆಪ್ಟೆಂಬರ್-ಡಿಸೆಂಬರ್ :- ರಾಹುಗ್ರಹದ ಸಂಚಾರ ನಿಮಗೆ ವಿದೇಶದಿಂದ ಲಾಭ ನೀಡುತ್ತದೆ ಹಾಗು ವರ್ಷದ ಕೊನೆಯಲ್ಲಿ ವಿದೇಶಿ ಪ್ರಯಾಣದ ಸಂತೋಷವನ್ನು ನಿಮಗೆ ನೀಡುತ್ತದೆ. ಈ ಸಮಯದಲ್ಲಿ ನೀವು ಕೆಲಸದ ಬಗ್ಗೆ ಉತ್ತಮವಾಗಿ ಎಲ್ಲವನ್ನು ನಿರ್ವಹಿಸುವ ಹಾಗೆ ಆಗುತ್ತದೆ. ಹನ್ನೊಂದನೇ ಮನೆಯಲ್ಲಿ ಶನಿ, ಲಗ್ನದ ಮನೆಯಲ್ಲಿ ಗುರು ಮತ್ತು ಶುಕ್ರಗ್ರಹದ ಪ್ರಭಾವದಿಂದ ನೀವು ವಿಭಿನ್ನವಾದ ಆಧ್ಯಾತ್ಮಿಕ ಶಕ್ತಿಯ ಅನುಭವ ಪಡೆಯುತ್ತೀರಿ. ಕುಟುಂಬದಲ್ಲಿ ಶಾಂತಿ ಉಳಿಯುತ್ತದೆ, ಈ ವರ್ಷದ ದ್ವಿತೀಯಾರ್ಧ ಸಮಯ ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟವಾಗಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ, ವರ್ಷದ ಮೊದಲ 4 ತಿಂಗಳು ಜಾಗ್ರತೆಯಿಂದ ಇರುವುದು ಒಳ್ಳೆಯದು. ಲಗ್ನದ ಮನೆಗೆ ಗುರುವಿನ ಆಗಮನದಿಂದ ಭಾಗ್ಯ ವೃದ್ಧಿ ಹಾಗೂ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಒಟ್ಟಿನಲ್ಲಿ ಮೇಷ ರಾಶಿಯವರು ಈ ವರ್ಷ ತಮ್ಮ ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇದನ್ನು ಓದಿ..Kannada Astrology: ಅದೆಂತಹ ದೋಷವೇ ಇರಲಿ, ಈ ದಿಕ್ಕಿನಲ್ಲಿ ಇದೊಂದು ಗಿಡ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಹುಡುಕಿ ತಂದು ಇಡ್ತೀರಾ.

Comments are closed.