Neer Dose Karnataka
Take a fresh look at your lifestyle.

Kannada News: ಇಂದು ಮಹಾರಾಣಿಯಂತೆ ನರೇಶ್ ಅರಮನೆಯ ಸಿಂಹಾಸನ ಏರಿರುವ ಪವಿತ್ರ, ಅಂದು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ ಮೇರು ನಟ ಯಾರು ಗೊತ್ತೇ??

Kannada News: ನಟಿ ಪವಿತ್ರಾ ಲೋಕೇಶ್ (Pavitra Lokesh) ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಪಾತ್ರಗಳಲ್ಲಿ ಮತ್ತು ಹಾಸ್ಯಪಾತ್ರಗಳಲ್ಲಿ ಮಿಂಚಿದ್ದ ನಟ ಮೈಸೂರು ಲೋಕೇಶ್ (Mysore Lokesh) ಅವರ ಮಗಳು. ಇವರ ತಮ್ಮ ಆದಿ ಲೋಕೇಶ್ (Adi Lokesh) ಸಹ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಪವಿತ್ರಾ ಲೋಕೇಶ್ ಅವರ ತಂದೆ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಆಗ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಪವಿತ್ರಾ ಲೋಕೇಶ್ ಅವರ ಮೇಲೆ ಬಿತ್ತು. ಆಗಿನ್ನು ಪದವಿ ಓದುತ್ತಿದ್ದರು ಪವಿತ್ರಾ. ತಮ್ಮನ ಜವಾಬ್ದಾರಿ ಮತ್ತು ಮನೆಯ ಜವಾಬ್ದಾರಿ ಚಿಕ್ಕ ವಯಸ್ಸಿನಲ್ಲಿಯೇ ಪವಿತ್ರಾ ಅವರ ಮೇಲೆ ಬಿತ್ತು.

ಹಾಗಾಗಿ ಪವಿತ್ರಾ ಲೋಕೇಶ್ ಅವರು ಮನೆಯ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಲೇಬೇಕಾದ ಅವಶ್ಯಕತೆ ಇತ್ತು. ಹಾಗಾಗಿ ಅವರು ತಂದೆ ಚಿತ್ರರಂಗದಲ್ಲಿದ್ದು ಕಾರಣ ಇಲ್ಲಿಯೇ ಜೀವನ ಕಟ್ಟಿಕೊಳ್ಳಬೇಕು ಎಂದು ನಿರ್ಧಾರ ಮಾಡಿ, ಅವಕಾಶ ಪಡೆಯುವ ಪ್ರಯತ್ನ ಮಾಡಿದರು, ಆದರೆ ಪವಿತ್ರಾ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ, ಕೆಲವರು ಅವರ ಜೊತೆ ಬೇರೆ ರೀಟಿಯಲ್ಲಿ ವರ್ತಿಸೋದಕ್ಕೆ ಶುರು ಮಾಡಿದರು, ಕೆಲಸ ಇಲ್ಲದೆ ಕಷ್ಟ ಪಡುತ್ತಿದ್ದ ಆ ಸಮಯದಲ್ಲಿ ಪವಿತ್ರಾ ಲೋಕೇಶ್ ಅವರ ಪರವಾಗಿ ನಿಂತಿದ್ದು ರೆಬೆಲ್ ಸ್ಟಾರ್ ಅಂಬರೀಶ್ (Ambarish) ಅವರು, ತಮ್ಮ ಮಿ.ಅಭಿಷೇಕ್ ಸಿನಿಮಾದಲ್ಲಿ ನಟಿಸಲು ಪವಿತ್ರಾ ಲೋಕೇಶ್ ಅವರಿಗೆ ಅವಕಾಶ ಕೊಟ್ಟು ಸಹಾಯ ಮಾಡಿದರು. ಆ ಸಿನಿಮಾ ತಕ್ಕಮಟ್ಟಕೆ ಓಡಿತು ಅಷ್ಟೇ. ಇದನ್ನು ಓದಿ..Biggboss Kannada: ಬಿಗ್ ನ್ಯೂಸ್: ಬಿಗ್ ಬಾಸ್ ನಲ್ಲಿ ನಡೆಯಿತೇ ಮಹಾಮೋಸ: ನಿಜಕ್ಕೂ ಗೆಲ್ಲಬೇಕಾದವರು ಯಾರು ಅಂತೇ ಗೊತ್ತೇ??

ಆದರೆ ಪವಿತ್ರಾ ಲೋಕೇಶ್ ಅವರನ್ನು ಜನರು ಗುರುತಿಸಿದರು. ಬಳಿಕ ಐದಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದರು ಕೂಡ, ಅವುಗಳು ಯಶಸ್ಸು ಕಾಣದೆ, ಚಿತ್ರರಂಗದಲ್ಲಿ ಅವಕಾಶ ಸಿಗದೆ, ಕಂಪನಿಯೊಂದರಲ್ಲಿ ಹೆಚ್.ಆರ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು. ಬಸ್ ನಲ್ಲಿ ಓಡಾಡಿಕೊಂಡು, ಒಂದು ವರ್ಷಗಳು ಈ ಕೆಲಸ ಮಾಡಿದ ನಂತರ ಪವಿತ್ರಾ ಲೋಕೇಶ್ ಅವರಿಗೆ ನಾಗಭರಣ ಅವರು ಜನುಮದ ಜೋಡಿ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು, ಅದರಿಂದ ಪವಿತ್ರಾ ಅವರು ಕಂಬ್ಯಾಕ್ ಮಾಡಿ, ಅವರಿಗೆ ಹೆಚ್ಚು ಅವಕಾಶಗಳು ಸಿಗುತ್ತಾ ಹೋದವು. ಇದನ್ನು ಓದಿ.. Kannada News: ಮದುವೆ ಸುದ್ದಿಯನ್ನು ಘೋಷಣೆ ಮಾಡಿರುವ ನರೇಶ್ ಹಾಗೂ ಪವಿತ್ರ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂದು ತಿಳಿದರೆ ಶಾಕ್ ಆಗಿ ಹೋಗ್ತೀರಾ.

Comments are closed.