Neer Dose Karnataka
Take a fresh look at your lifestyle.

Kannada News: ದರ್ಶನ್ ಇದೊಂದು ಕೆಲಸ ಮಾಡಿದರೆ ಕ್ರಾಂತಿ ಸಿನೆಮಾಗೆ ಅಡ್ಡಗಾಲು ಹಾಕೋಕೆ ಯಾರು ಬರಲ್ಲ, ದರ್ಶನ್ ಈ ಚಿಕ್ಕ ಕೆಲಸ ಮಾಡಿ

Kannada News: ಚಂದನವನದಲ್ಲಿ ಈಗ ಬಹುನಿರೀಕ್ಷಿತ ಸಿನಿಮಗಳಲ್ಲಿ ಅಗ್ರಸ್ಥಾನದಲ್ಲಿ ಇರುವುದು ನಟ ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ. ಗಣ ರಾಜ್ಯೋತ್ಸವದ ದಿನ, ಜನವರಿ 26ರಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ದೇಶಾದ್ಯಂತ ತೆರೆಕಾಣಲಿದೆ ಕ್ರಾಂತಿ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ಮೂರನೇ ಸಾರಿ ನಾಯಕಿಯಾಗಿ ರಚಿತಾ ರಾಮ್ (Rachita Ram) ಅವರು ನಟಿಸಿದ್ದಾರೆ. ಸುಮಲತಾ ಅಂಬರೀಶ್ (Sumalatha Ambarish), ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರು ಸೇರಿದಂತೆ ದೊಡ್ಡ ಕಲಾವಿದರ ಬಳಗ ಕ್ರಾಂತಿ ಸಿನಿಮದಲ್ಲಿದೆ..

ಹೀಗೆ ಹಲವು ಕಾರಣಗಳಿಂದ ಕ್ರಾಂತಿ ಸಿನಿಮಾ ಸ್ಪೆಷಲ್ ಆಗಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ದಿನಗಣನೆ ಮಾಡುತ್ತಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರವನ್ನು ರಾಜ್ಯದ ಎಲ್ಲಾ ಊರುಗಳಿಗು ಹೋಗಿ ಮಾಡುತ್ತಿದ್ದಾರೆ ಡಿಬಾಸ್. ಸಿನಿಮಾದ ಮೂರು ಹಾಡುಗಳನ್ನು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಜನವರಿ 7ರಂದು ಮೊನ್ನೆಯಷ್ಟೇ ಸಿನಿಮಾ ಟ್ರೈಲರ್ (Kranthi Trailer) ಕೂಡ ಬಿಡುಗಡೆ ಆಗಿದೆ. ಕ್ರಾಂತಿ ಸಿನಿಮಾ ಟ್ರೈಲರ್ ಈಗಾಗಲೇ ಯೂಟ್ಯೂಬ್ ನಲ್ಲಿ 9.8 ಮಿಲಿಯನ್ ವೀಕ್ಷಣೆ ಪಡೆದಿದೆ. ಇದನ್ನು ಓದಿ..Biggboss Kannada: ಬಿಗ್ ಬಾಸ್ ನಲ್ಲಿ ಜನರ ಮನೆಗೆದ್ದಿದ್ದ ರಾಕೇಶ್ ರವರನ್ನು ಫ್ರೀ ಆಗಿ ಭೇಟಿಯಾಗುವುದು ಹೇಗೆ ಗೊತ್ತೇ?? ಇಲ್ಲಿದೆ ಸುವರ್ಣಾವಕಾಶ.

ಕ್ರಾಂತಿ ಸಿನಿಮಾ ಟ್ರೈಲರ್ ನಲ್ಲಿ ದರ್ಶನ್ ಅವರು ಕ್ಲಾಸ್ ಮತ್ತು ಮಾಸ್ ಎರಡು ಲುಕ್ ಗಳಲ್ಲಿ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಅವರು ಮುದ್ದಾಗಿ ಕಾಣಿಸಿಕೊಂಡಿದ್ದು, ಕನ್ನಡ ಶಾಲೆಯ ಉಳಿವಿಗಾಗಿ ಶ್ರೀಮಂತ ನಡೆಸುವ ಹೋರಾಟದ ಕಥೆ ಕ್ರಾಂತಿ. ಈ ಕಥೆಯು ಕನ್ನಡ ಸಿನಿಪ್ರಿಯರಿಗೆ ಬಹಳ ಇಷ್ಟವಾಗಿ, ಕನ್ನಡ ಚಿತ್ರರಂಗದ ಕಡೆಗೆ ಎಲ್ಲಾ ಭಾಷೆಯವರು ಮತ್ತೊಮ್ಮೆ ತಿರುಗಿ ನೋಡುವ ಹಾಗೆ ಮಾಡುವುದು ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ಕ್ರಾಂತಿ ಸಿನಿಮಾ ಪ್ರೊಮೋಷನ್ ಗಾಗಿ ದರ್ಶನ್ ಅವರು ಹಲವು ಸಂದರ್ಶನಗಳನ್ನು ಕೊಡುತ್ತಾ, ಬೇರೆ ಬೇರೆ ಊರುಗಳಲ್ಲಿ ಅಭಿಮಾನಿಗಳ ಜೊತೆಗೆ ಮಾತುಕತೆ ನಡೆಸುತ್ತಾ ಬ್ಯುಸಿ ಆಗಿದ್ದಾರೆ. ಆದರೆ ಕ್ರಾಂತಿ ಸಿನಿಮಾಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಹಾಡು ಬಿಡುಗಡೆ ಸಮಯದಲ್ಲಿ ಹೊಸಪೇಟೆಯಲ್ಲಿ ನಡೆದ ಘಟನೆ, ದೊಡ್ಡದಾಗಿಯೇ ವಿವಾದಕ್ಕೆ ಕಾರಣವಾಯಿತು, ಇದಕ್ಕೆ ದರ್ಶನ್ ಅವರ ಅಭಿಮಾನಿಗಳು ದೊಡ್ಮನೆ ಕುಟುಂಬ ಮತ್ತು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಕೆಟ್ಟದಾಗಿ ಮಾತನಾಡಿದ್ದರು.. ಇದನ್ನು ಓದಿ..Kannada News: ನೆನಪಿದ್ದಾರಾ ನಟ ಅಬ್ಬಾಸ್?? ಇವರ ಮಗಳು ಹೇಗಿದ್ದಾಳೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು. ನೋಡಿದರೇ ಪಕ್ಕ ಮನಸ್ಸು ಕೊಡ್ತೀರಾ.

ಪುನೀತ್ ಅವರ ಅಭಿಮಾನಿಗಳು ಏನೇ ಹೇಳಿದರೂ, ನಿಲ್ಲಿಸದ ಕಾರಣ ದೊಡ್ಮನೆ ಅಭಿಮಾನಿಗಳೆಲ್ಲರು ಸೇರಿ, ದರ್ಶನ್ ಅವರ ಅಭಿಮಾನಿಗಳ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದರು. ದರ್ಶನ್ ಅವರು ಇಂಟರ್ವ್ಯೂ ಒಂದರಲ್ಲಿ ನೀಡಿದ್ದ ಹೇಳಿಕೆ ಕೂಡ ವೈರಲ್ ಆಗಿತ್ತು. ಇಲ್ಲಿ ದರ್ಶನ್ ಅವರು ತಪ್ಪು ಮಾಡಿದ್ದಾರೆ ಅಥವಾ ಇಲ್ಲ ಎನ್ನುವುದು ಮುಖ್ಯವಲ್ಲ, ಅದು ಬೇರೆಯದೇ ವಿಷಯ ಆಗಿದೆ. ಆದರೆ, ಕ್ರಾಂತಿ ಸಿನಿಮಾಗೆ ಒಂದಲ್ಲ ಒಂದು ಕಷ್ಟಗಳು ಎದುರಾಗುತ್ತಾ ಇರುವುದಂತೂ ಸುಳ್ಳಲ್ಲ.

ಹಾಗಾಗಿ ದರ್ಶನ್ ಅವರು ಒಂದು ಕೆಲಸ ಮಾಡಿದರೆ, ಕ್ರಾಂತಿ ಸಿನಿಮಾಗೆ ಇರುವ ತೊಂದರೆ ಕಡಿಮೆ ಆಗುತ್ತದೆ. ಆ ಕೆಲಸ ಏನು ಎಂದರೆ, ದರ್ಶನ್ ಅವರು ಕ್ರಾಂತಿ ಸಿನಿಮಾ ಕಾರ್ಯಕ್ರಮಕ್ಕೆ ದೊಡ್ಮನೆಯವರನ್ನು ಆಹ್ವಾನಿಸಬೇಕು, ಶಿವಣ್ಣ (Shivanna) ಅವರನ್ನು ಅಥವಾ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರನ್ನು ಆಹ್ವಾನಿಸಿ, ಅವರು ಕಾರ್ಯಕ್ರಮಕ್ಕೆ ಬಂದರೆ, ಈ ವಿವಾದಗಳೆಲ್ಲವು ತಣ್ಣಗಾಗಿ, ಎಲ್ಲವೂ ಸರಿಹೋಗುತ್ತದೆ. ದರ್ಶನ್ ಅವರು ಈ ರೀತಿ ಮಾಡಿ, ಆಗಿರುವ ಎಲ್ಲವನ್ನು ಸರಿ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಅಂಬರೀಷ್ ಪ್ರಭಾಕರ್ ಒಟ್ಟಿಗೆ ನಟಿಸುತ್ತಿದ್ದ ಅತಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ, ಅರ್ಧಕ್ಕೆ ನಿಂತಿದ್ದು ಯಾಕೆ ಗೊತ್ತೇ??

Comments are closed.