Neer Dose Karnataka
Take a fresh look at your lifestyle.

Kannada News: ರಾಮಾಚಾರಿ ಭರ್ಜರಿ ಯಶಸ್ಸು ಕಂಡರೂ ಕೂಡ ನಂತರ ರವಿಚಂದ್ರನ್ ರವರ ಜೊತೆ ಮಾಲಾಶ್ರೀ ರವರು ನಟನೆ ಮಾಡಲಿಲ್ಲ ಯಾಕೆ ಗೊತ್ತೇ??

213

Kannada News: ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು ರಾಮಾಚಾರಿ (Ramachari). ಈ ಸಿನಿಮಾ ರವಿಚಂದ್ರನ್ (Ravichandran) ಅವರು ಬಹಳ ಕಷ್ಟದಲ್ಲಿದ್ದ ಸಮಯದಲ್ಲಿ ತೆರೆಕಂಡು ಕ್ರೇಜಿಸ್ಟಾರ್ ಅವರಿಗೆ ಬಿಗ್ ಸಕ್ಸಸ್ ತಂದುಕೊಟ್ಟ ಸಿನಿಮಾ. ಸಿನಿಮಾಗಳು ಸೋತು ರವಿಚಂದ್ರನ್ ಅವರು ಕಷ್ಟ ಮತ್ತು ಯಶಸ್ಸಿನ ಹುಡುಕಟದಲ್ಲಿದ್ದಾಗ, ಅವರಿಗೆ ಸಿಕ್ಕಿದ್ದು ತಮಿಳಿನ ಚಿನ್ನ ತಂಬಿ ಸಿನಿಮಾ, ಈ ಸಿನಿಮಾವನ್ನು ಕನ್ನಡದಲ್ಲಿ ಯಾರು ಮಾಡೋದು ಎಂದು ಚರ್ಚೆ ಬಂದಾಗ, ರವಿಚಂದ್ರನ್ ಅವರು ಚೆನ್ನೈಗೆ ಹೋಗಿ ಚಿನ್ನತಂಬಿ ರಿಮೇಕ್ ರೈಟ್ಸ್ ತಂದರು. ಈ ಸಿನಿಮಾಗೆ ಹೀರೋಯಿನ್ ಆಗಿ ಮಾಲಾಶ್ರೀ (Malashree) ಅವರನ್ನು ಆಯ್ಕೆ ಮಾಡಲಾಯಿತು.

ಮಾಲಾಶ್ರೀ ಅವರು ಆಗ ಪೀಕ್ ನಲ್ಲಿದ್ದ ಬಹಳ ಬ್ಯುಸಿ ಇದ್ದ ನಟಿ. ಮೂರ್ನಾಲ್ಕು ಶಿಫ್ಟ್ಸ್ ಗಳಲ್ಲಿ ಕೆಲಸ ಮಾಡುತ್ತಿದ್ದರು, ಇಡೀ ದಿನ ಕೆಲಸ ಮಾಡಿದರು ಕೂಡ ಮಾಲಾಶ್ರೀ ಅವರಿಗೆ ಸಮಯ ಸಾಕಾಗ್ತ ಇರಲಿಲ್ಲ ಎಂದೇ ಹೇಳಬಹುದು. ಅಷ್ಟು ಬ್ಯುಸಿ ಇದ್ದರು ಕೂಡ ರವಿಚಂದ್ರನ್ ಅವರು ಕೇಳಿದ್ದಕ್ಕೆ 10 ರಿಂದ 12 ದಿನಗಳ ಕಾಲ ಡೇಟ್ಸ್ ನೀಡಿ ಸಿನಿಮಾ ಮುಗಿಸಿಕೊಟ್ಟರು ಮಾಲಾಶ್ರೀ. ಬ್ಯುಸಿ ಇದ್ದರು ಈ ಸಿನಿಮಾ ಮಾಡಿದ್ದು, ರವಿಚಂದ್ರನ್ ಅವರ ಮೇಲೆ ಮಾಲಾಶ್ರೀ ಅವರು ಇಟ್ಟಿರುವ ಗೌರವವನ್ನು ತೋರಿಸುತ್ತದೆ. ಇನ್ನು ಈ ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗುವುದರ ಜೊತೆಗೆ, ರವಿಚಂದ್ರನ್ ಅವರಿಗೆ ಮತ್ತೊಮ್ಮೆ ಒಳ್ಳೆಯ ಹೆಸರು ತಂದುಕೊಟ್ಟಿತು. ಇದನ್ನು ಓದಿ.. Kannada News: ನೆನಪಿದ್ದಾರಾ ನಟ ಅಬ್ಬಾಸ್?? ಇವರ ಮಗಳು ಹೇಗಿದ್ದಾಳೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು. ನೋಡಿದರೇ ಪಕ್ಕ ಮನಸ್ಸು ಕೊಡ್ತೀರಾ.

ರಾಮಾಚಾರಿ ನಂತರ ಎಲ್ಲರೂ ಈ ಜೋಡಿಯನ್ನು ಮತ್ತೊಮ್ಮೆ ತೆರೆಮೇಲೆ ನೋಡಬೇಕು ಎಂದುಕೊಂಡರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಯಾಕೆಂದರೆ, ಒಂದು ಕಡೆ ಮಾಲಾಶ್ರೀ ಅವರು, ಕನ್ನಡ ಮತ್ತು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾ ಬಿಡುವಿಲ್ಲದ ಹಾಗೆ ಬ್ಯುಸಿ ಆದರೂ, ಇತ್ತ ರವಿಚಂದ್ರನ್ ಅವರು ತಮ್ಮ ಕನಸುಗಳ ಕಡೆಗೆ ಪಯಣ ಬೆಳೆಸಿದರು. ಜೊತೆಗೆ ನಂತರದ ವರ್ಷಗಳಲ್ಲಿ ಮಾಲಾಶ್ರೀ ಅವರು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದದ್ದು ಮತ್ತೊಂದು ಕಾರಣ. ಇದಷ್ಟೇ ಅಲ್ಲದೆ, ಇವರಿಬ್ಬರಿಗೂ ಸರಿ ಹೊಂದುವಂಥ ಸ್ಕ್ರಿಪ್ಟ್ ಗಳು ಸಹ ಬರಲಿಲ್ಲ. ಹಾಗಾಗಿ ರವಿಚಂದ್ರನ್ ಅವರು ಮತ್ತು ಮಾಲಾಶ್ರೀ ಅವರು ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಆದರೂ ಈ ಜೋಡಿ ಮತ್ತೊಮ್ಮೆ ನಟಿಸುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ನೆನಪಿದ್ದಾರಾ ನಟ ಅಬ್ಬಾಸ್?? ಇವರ ಮಗಳು ಹೇಗಿದ್ದಾಳೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು. ನೋಡಿದರೇ ಪಕ್ಕ ಮನಸ್ಸು ಕೊಡ್ತೀರಾ.

Leave A Reply

Your email address will not be published.