Neer Dose Karnataka
Take a fresh look at your lifestyle.

Kannada News: ಜೀವನ ಪೂರ್ತಿ ಜೊತೆಗಿರುತ್ತಾನೆ ಎಂದು ಕೊಂಡ ಗಂಡ, ದಿಡೀರ್ ಎಂದು ತೀರಿಕೊಂಡ ಒಂದು ತಿಂಗಳ ನಂತರ.

140

Kannada News: ಈ ಹುಡುಗಿಯ ಹೆಸರು ಶಕುನ್, ಈಕೆಯ ಗಂಡ ತೀರಿಕೊಳ್ಳುತ್ತಾನೆ. ಗಂಡ ತೀರಿಹೋದ ಒಂದು ತಿಂಗಳ ನಂತರ, ಮನೆಯ ಜವಾಬ್ದಾರಿ ಅವಳ ನೆಲೆ ಬೀಳುತ್ತದೆ. ಅತ್ತೆ ಮತ್ತು ಮಕ್ಕಳ ಭವಿಷ್ಯವನ್ನು ನೆನಪು ಮಾಡಿಕೊಂಡು, ಕೆಲಸಕ್ಕೆ ಹೋಗೋದಕ್ಕೆ ಶುರು ಮಾಡುತ್ತಾಳೆ. ಜಡೆ ಹಾಕಿಕೊಳ್ಳಲು ಕನ್ನಡಿಯ ಮುಂದೆ ನಿಂತಾಗ, ಬಿಳಿ ಸೀರೆ ಉಟ್ಟುಕೊಂಡು, ಹಣೆಯಲ್ಲಿ ಬೊಟ್ಟು ಇಲ್ಲದೆ, ತನ್ನನ್ನೇ ತಾನು ನೋಡಿಕೊಂಡು ನೋವು ಪಟ್ಟುಕೊಂಡು, ಕಣ್ಣೀರು ಹಾಕಿದಳು. ಆಕೆಯ ಗಂಡ ಶಶಾಂಕ್ ಗೆ ಅವಳ ಸೌಂದರ್ಯ ಕಂಡರೆ ತುಂಬಾ ಇಷ್ಟಪಡುತ್ತಿದ್ದ, ಬಣ್ಣಬಣ್ಣದ ಪ್ರಿಂಟ್ ಇರುವ ಸೀರೆಗಳನ್ನು ಧರಿಸಿ ಅದಕ್ಕೆ ಸರಿಹೊಂದುಗ ಬಳೆ ಬಿಂದಿ ಇಟ್ಟುಕೊಳ್ಳುತ್ತಿದ್ದಳು, 18 ವರ್ಷಗಳು ಇಷ್ಟೇ ವೇಗವಾಗಿ ಕಳೆದುಹೋದವು.

ಗಂಡನ ಅಗಲಿಕೆ ಇಂದ ಬದುಕು ಇದ್ದಕ್ಕಿದ್ದ ಹಾಗೆ ಬಣ್ಣವಿಲ್ಲದ ಹಾಗೆ ಆಯಿತು. ಆ ಸಮಯದಲ್ಲಿ ಅವಳ ಅತ್ತೆ ಒಳಗೆ ಬಂದರು, ಶಕುನ್ ನೋಡಿ ಅವರಿಗೂ ಕಣ್ಣಲ್ಲಿ ನೀರು ಬಂದಿತು. ಆಕೆಯ ಅತ್ತೆ ಬಂದು, ಬೀರು ತೆಗೆದು, ಶಶಾಂಕ್ ಗೆ ಇಷ್ಟವಾದ ಸೀರೆಯನ್ನು ಶಕುನ್ ಗೆ ಕೊಟ್ಟು, ನನ್ನ ಮಗ ಹೋಗಿದ್ದಾಗಿದೆ, ನೀನು ಬಿಳಿ ಸೀರೆ ಉಟ್ಟಿದ್ದನ್ನು ನೋಡಿದರೆ, ನನ್ನ ಮಗ ಇಲ್ಲ ಎಂದು ಜಾಸ್ತಿ ಅನ್ನಿಸುತ್ತದೆ. ನಾನು ಅದಕ್ಕೆ ಇಲ್ಲಿಗೆ ಬಂದಿದ್ದೀನಿ, ನೀನು ಮೊದಲಿನ ಹಾಗೆ ರೆಡಿ ಆಗು, ಹೇಗಿದ್ದೆ ಹಾಗೆ ಇರು, ನಿನ್ನನ್ನು ಹಾಗೆ ನೋಡಿದರೆ, ನನ್ನ ಮಗ ಇನ್ನು ಇದ್ದಾನೆ ಎಂದು ಅನ್ನಿಸುತ್ತದೆ ಎಂದು ಹೇಳುತ್ತಾರೆ.. ಇದನ್ನು ಓದಿ..Kannada News: ಪ್ರತಿ ಪಾಕಿಸ್ತಾನಿ ಹುಡುಗಿಯರು ಕೂಡ ಭಾರತದವರನ್ನು ಮದುವೆಯಾಗಲು ಬಯಸುತ್ತಾರೆ. ಯಾಕೆ ಗೊತ್ತೇ? ಅಸಲಿ ಕಾರಣವೇನು ಗೊತ್ತೇ?

ನಂತರ ಡ್ರೆಸ್ಸಿಂಗ್ ಟೇಬಲ್ ಮೇಲಿದ್ದ ಬಿಂದಿಯನ್ನು ತೆಗೆದು ಶಕುನ್ ಗೆ ಹಚ್ಚಿದರು. ಅವರಿಬ್ಬರ ಕಣ್ಣಲ್ಲಿ ನೀರು ಹರಿಯಿತು, ಆದರೆ ಮನಸ್ಸಿನಲ್ಲಿ ತೃಪ್ತಿ ಇತ್ತು. ಶಶಾಂಕ್ ಜೊತೆಯಲ್ಲೇ ಇರುವ ಹಾಗೆ ಭಾವನೆ ಮೂಡಿತು. ಆಕೆಯ ಬದುಕು ಬಣ್ಣವನ್ನು ಕಳೆದುಕೊಂಡಿಲ್ಲ, ಶಶಾಂಕ್ ನೆನಪಿನ ಜೊತೆಗೆ, ಬಣ್ಣಗಳು ಇನ್ನು ಇದೆ ಎಂದು ಅನ್ನಿಸಲು ಶುರುವಾಯಿತು. ಆಗ ದುಃಖ ತಡೆಯಲಾಗದೆ ತನ್ನ ಅತ್ತೆಯನ್ನು ಅಪ್ಪಿಕೊಂಡಳು. ಆಕೆಯ ಅತ್ತೆಯ ಜೀವನ ಕೂಡ ಚಿಕ್ಕ ವಯಸ್ಸಿನಲ್ಲೇ ಬಿಳಿ ಬಣ್ಣ ಆಗಿತ್ತು, ಆದರೆ ಸೊಸೆಯ ಜೀವನ ಬಣ್ಣಗಳನ್ನು ಕಳೆದುಕೊಳ್ಳಲು ಅತ್ತೆ ಬಿಡಲಿಲ್ಲ. ಇದನ್ನು ಓದಿ.. Kannada News: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾವನಾಗಿ ಅದ್ಭುತ ನಟನೆ ಮಾಡಿರುವ ಮಾಧವ ಪಾತ್ರದಾರಿ ಬ್ಯಾಕ್ ಗ್ರೌಂಡ್ ಏನು ಗೊತ್ತೇ? ನಿಜಕ್ಕೂ ಇವರು ಯಾರು ಗೊತ್ತೇ?

Leave A Reply

Your email address will not be published.