Neer Dose Karnataka
Take a fresh look at your lifestyle.

Chanakya Neeti: ನೀವು ಜೀವನದಲ್ಲಿ ಉದ್ದಾರ ಹಾಗಬೇಕು ಎಂದರೆ ಈ ಮೂರು ವಿಷಯಗಳಲ್ಲಿ ನಾಚಿಕೆ ಬಿಡಬೇಕು. ಯಾವ್ಯಾವು ಗೊತ್ತೇ??

Chanakya Neeti: ಆಚಾರ್ಯ ಚಾಣಕ್ಯ ಅವರು ತಮ್ಮ ಬುದ್ಧಿಶಕ್ತಿ ಹಾಗು ಪಾಂಡಿತ್ಯದಲ್ಲಿದ್ದ ಶಕ್ತಿಯಿಂದ ನಮ್ಮ ಭವ್ಯ ಭಾರತದ ಇತಿಹಾಸವನ್ನು ಬದಲಾಯಿಸಿದ ಮಹಾನ್ ವ್ಯಕ್ತಿ. ಇವರು ತಮ್ಮ ಬಲದಿಂದ ಚಂದ್ರಗುಪ್ತರನ್ನು ನಮ್ಮ ದೇಶದ ಚಕ್ರವರ್ತಿಯಾಗಿ ಮಾಡಿದ್ದರು, ಅವರು ಅಖಂಡ ಭಾರತದ ನಿರ್ಮಾಣ ಮಾಡಿದರು.
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಮನುಷ್ಯರ ಜೀವನಕ್ಕೆ ಬೇಕಾದ ಹಲವು ವಿಚಾರಗಳನ್ನು ತಿಳಿಸಿದ್ದಾರೆ, ಅಕ್ಕಿಯನ್ನು ಅನುಸರಿಸಿದರೆ, ಮನುಷ್ಯರು ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬಹುದು. ಆಚಾರ್ಯ ಚಾಣಕ್ಯರು ತಮ್ಮ ಗ್ರಂಥದಲ್ಲಿ ಮೂರು ವಿಚಾರಕ್ಕೆ ನಾಚಿಕೆ ಪಡಬಾರದು ಎಂದು ಹೇಳಿದ್ದಾರೆ. ಅವರು ಹೇಳಿರುವ ಆ ಮೂರು ಮುಖ್ಯವಾದ ವಿಚಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಹಣಕಾಸಿನ ವಿಚಾರ :- ಆರ್ಥಿಕ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಒಬ್ಬರಿಂದ ಸಾಲ ಪಡೆಯಬೇಕಾದ ಸಮಯದಲ್ಲಿ ಹಣ ಕಳೆದುಕೊಳ್ಳುವ ಹಾಗೆ ಆಗಬಹುದು. ಹೀಗೆ ಸಂಕೋಚ ಇದ್ದರೆ, ಸಾಲ ಕೊಡುವ ವ್ಯಕ್ತಿಯ ಬಳಿಯಲ್ಲಿ ಹಣ ಪಡೆಯುವುದು ಅಥವಾ ಸಾಲ ಕೇಳುವುದು ಕೂಡ ಸಾಧ್ಯ ಆಗುವುದಿಲ್ಲ. ಆಗ ಹಣದ ನಷ್ಟವಾಗುತ್ತದೆ. ಹಾಗಾಗಿ ಈ ಕೆಲಸದಲ್ಲಿ ಸಂಕೋಚ ಪಡಬಾರದು. ಇದನ್ನು ಓದಿ..Kannada News: ಪ್ರೇಮಿಗಳ ಮಧ್ಯೆ ಬಂದ ವಿಲ್ಲನ್: ಪವಿತ್ರ – ನರೇಶ್ ನಡುವೆ ಅಡ್ಡಬಂದದ್ದು ಯಾರು ಗೊತ್ತೇ?? ಪ್ರೀತಿಸಿದವರು ಮದುವೆಯಾಗದೆ ಉಳಿದುಕೊಳ್ತಾರಾ??

ತಿನ್ನುವ ವಿಚಾರದಲ್ಲಿ :- ಕೆಲವರು ಊಟ ಮಾಡಲು ನಾಚಿಕೆ ಪಡುತ್ತಾರೆ. ಆ ವ್ಯಕ್ತಿ ಸಂಬಂಧಿಕರ ಮನೆಗೆ ಹೋದಾಗ, ಅವರಿಗೆ ಹಸಿವಾಗಿದ್ದರು ಕೂಡ, ಅವರ ಮನೆಯಲ್ಲಿ ತಿನ್ನುವ ಸಮಯದಲ್ಲಿ ಸಂಕೋಚ ಪಟ್ಟುಕೊಳ್ಳುತ್ತಾರೆ. ಆಗ ಹೊಟ್ಟೆ ತುಂಬುವ ಹಾಗೆ ತಿನ್ನುವುದಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ಅವರಿಗೆ ಹೊಟ್ಟೆ ತುಂಬದೆ ಹಸಿವಿನಲ್ಲೇ ಉಳಿಯುತ್ತಾರೆ. ಹಾಗಾಗಿ ಊಟ ಮಾಡಲು ನಾಚಿಕೆ ಪಡಬಾರದು.
ಗುರುಗಳಿಂದ ಜ್ಞಾನ ಪಡೆಯಲು :- ನಿಮ್ಮ ಬಳಿ ಇರುವ ಎಲ್ಲಾ ಸಂದೇಹಗಳಿಗೂ ಗುರುಗಳ ಬಳಿ ಕೇಳಿ ಉತ್ತರ ಪಡೆಯಬೇಕು, ಅಂಥವರೆ ಒಳ್ಳೆಯ ವಿದ್ಯಾರ್ಥಿ ಆಗುತ್ತಾರೆ. ಗುರುಗಳ ಬಳಿ ಕೇಳಲು ಸಂಕೋಚ ಪಡಬಾರದು, ಆ ರೀತಿ ಮಾಡಿದರೆ ಆತ ಅಜ್ಞಾನಿ ಆಗಬಹುದು. ಇದನ್ನು ಓದಿ.. Kannada News: ಅಂಗಡಿಗೆ ಬರುತ್ತಿದ್ದ ನವ ವಿವಾಹಿತೆಗೆ ಪ್ರೇಮ ಪಾತ್ರ ಬರೆದ ಅಂಗಡಿ ಯುವಕ: ಆಂಟಿ ಕೊಟ್ಟ ಟ್ವಿಸ್ಟ್ ಗೆ ಶಾಕ್.

Comments are closed.