Neer Dose Karnataka
Take a fresh look at your lifestyle.

Kannada News: ಗಂಡ ಮಾಡಿದ ಅದೊಂದು ತಪ್ಪಿನಿಂದ ಈಗಲೂ ಬೇರೆ ವಿವಾಹಿತ ಪುರುಷರೊಂದಿಗೆ ಡಿಂಗ್ ಡಾಂಗ್ ಆಡುತ್ತಿರುವ ಹೆಂಡತಿ: ಯಾಕೆ ಈ ನಿರ್ಧಾರ ಗೊತ್ತೆ??

Kannada News: ದಾಂಪತ್ಯ ಬದುಕಿನಲ್ಲಿ ತಮ್ಮ ಬಾಳ ಸಂಗಾತಿಯಿಂದ ಮೋಸ ಹೋದಾಗ, ಜನರಿಗೆ ಅದನ್ನು ಸಹಿಸುವ ಶಕ್ತಿ ಇಲ್ಲದೆ ಸಂಬಂಧವನ್ನು ಮುರಿದುಕೊಳ್ಳುತ್ತಾರೆ. ಕೆಲವರು ಒಳ್ಳೆಯ ಮನಸ್ಸಿನಿಂದ ತಮ್ಮ ಸಂಗಾತಿಯನ್ನು ಕ್ಷಮಿಸಿ, ಅವರಿಗೆ ಇನ್ನೊಂದು ಅವಕಾಶ ನೀಡುತ್ತಾರೆ, ಆದರೆ ಇನ್ನೂ ಕೆಲವರು ಆ ರೀತಿ ಇರುವುದಿಲ್ಲ, ಅವರಿಗೆ ತಮಗಾದ ಮೋಸವನ್ನು ಮರೆಯಲು ಸಾಧ್ಯ ಆಗುವುದಿಲ್ಲ, ಆ ರೀತಿಯ ಮನಸ್ಥಿತಿ ಇರುವವರು ತಮ್ಮ ಸಂಗಾತಿಯಿಂದ ದೂರವಾಗುತ್ತಾರೆ. ತಮ್ಮ ಗಂಡನಿಂದ ಆಗುವ ದ್ರೋಹದಿಂದ ಹೊರಬರುವುದಕ್ಕೆ ಪ್ರತಿಯೊಬ್ಬ ಮಹಿಳೆಗೂ ಅವರದ್ದೇ ಆದ ಶೈಲಿ ಇರುತ್ತದೆ.

ಒಂದು ಪೋರ್ಟಲ್ ನಲ್ಲಿ ಮಹಿಳೆ ಒಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆ ಪೋರ್ಟಲ್ ನಲ್ಲಿ ಮಹಿಳೆ ಬರೆದುಕೊಂಡಿರುವುದು ಹೀಗೆ. “ನನ್ನ ಗಂಡ ತುಂಬಾ ಒಳ್ಳೆಯವರಾಗಿದ್ದರು, ನನ್ನ ಮೇಲೆ ಅವರಿಗೆ ತುಂಬಾ ಕಾಳಜಿ ಇತ್ತು, ನನ್ನ ದಾಂಪತ್ಯ ತುಂಬಾ ಅದ್ಭುತವಾಗಿದೆ, ನಮ್ಮ ನಡುವೆ ಯಾವುದೇ ರೀತಿಯ ತೊಂದರೆಗಳು ಇಲ್ಲ ಎಂದು ನಾನು ಅಂದುಕೊಂಡಿದ್ದೆ. ಆದರೆ ಪಕ್ಕ ಮನೆಯ ಹೆಂಗಸಿನ ಜೊತೆ ಒಂಟಿಯಾಗಿದ್ದಾಗ, ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ನನ್ನ ಮನಸ್ಸು ಅದರೊಳಗಿದ್ದ ಭ್ರಮೆ ಎಲ್ಲವು ಒಡೆದು ಹೋಯಿತು.

ಇಷ್ಟೆಲ್ಲಾ ಆಗಿದ್ದರು ಕೂಡ, ಅವರನ್ನು ಕ್ಷಮಿಸಿ, ಅವರೊಡನೆ ಮಗತೆ ಚೆನ್ನಾಗಿರಬೇಕು, ಈ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದೆ. ಆದರೆ ಆ ಎಲ್ಲಾ ಪ್ರಯತ್ನ ನಡೆದದ್ದು ಕೇವಲ 18 ದಿನಗಳವರೆಗು ಮಾತ್ರ. ಈಗ ನಮ್ಮ ನಡುವೆ ಇರುವ ಈ ಕೆಟ್ಟ ಸಂಬಂಧ, ನಮ್ಮ ಮಕ್ಕಳ ಭವಿಷ್ಯದ ಮೇಲೆ ಪರಿಹಾರ ಬೀರುವುದು ಬೇಡ ಎಂದು ನಾವು ಬೇರೆಯಾಗಬೇಕು ಎಂದು ನಿರ್ಧಾರ ಮಾಡಿದ್ದೇವೆ.” ಎಂದು ಬರೆದಿದ್ದಾರೆ. ಮತ್ತೆ ಮುಂದುವರೆಸಿ..”ಗಂಡನಿಂದ ದೂರಾದ ನಂತರ ಬೇರೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತೇನೆ ಎಂದು ಅಂದುಕೊಂಡೆ.

ಆದರೆ, ನನಗೆ ಯಾರ ಜೊತೆಯಲ್ಲೂ ಭಾವನಾತ್ಮಕವಗಿ ಕನೆಕ್ಟ್ ಆಗಲು, ಬಾಂಧವ್ಯ ಹೊಂದಲು ಸಾಧ್ಯವಾಗುತ್ತಿಲ್ಲ. ಹೊಸಬರ ಜೊತೆಗೆ ಭೇಟಿ ನಡೆಯುತ್ತಿತ್ತು, ಆದರೆ ಅದರಿಂದ ನನಗೆ ಸಂತೋಷ ಆಗುತ್ತಿರಲಿಲ್ಲ. ಒಂದು ದಿನ ನನಗೆ ಒಂದು ವೆಬ್ಸೈಟ್ ಬಗ್ಗೆ ಗೊತ್ತಾಯಿತು, ಆ ವೆಬ್ಸೈಟ್ ಮದುವೆ ಆದವರಿಗಾಗಿ ಮಾತ್ರ ಆಗಿತ್ತು. ಅಲ್ಲಿಂದ ನಾನು ಹಿಂದಿರುಗಿ ನೋಡಿಲ್ಲ..ಆ ವೆಬ್ಸೈಟ್ ನಲ್ಲಿ ನಾನು ಅಕೌಂಟ್ ಓಪನ್ ಮಾಡಿದ ನಂತರ ನನ್ನ ಬದುಕು ಬದಲಾಗಿದೆ, ಈಗ ನಾನು ಇಬ್ಬರು ಪುರುಷರನ್ನು ಡೇಟ್ ಮಾಡುತ್ತಿದ್ದೇನೆ.

ಈಗ ನನಗೆ ಸೀರಿಯಸ್ ರಿಲೇಶನ್ಷಿಪ್ ಗೆ ಹೋಗೋದಕ್ಕೆ ಇಷ್ಟವಿಲ್ಲ. ಈಗ ನನಗೆ ಫನ್ ಮಾಡೋದಕ್ಕೆ ಅವಕಾಶ ಇದೆ. ನನಗೆ ಇನ್ನುಮುಂದೆ ಜೀವನದಲ್ಲಿ ಹೆಚ್ಚಿನ ನಿರೀಕ್ಷೆ ಇಲ್ಲ, ಇಂಥಹ ಸಂಬಂಧಗಳಿಂದ ನಾನು ದೂರ ಸರಿಯೋದಿಲ್ಲ. ಈಗ ನಾನು ಸಂತೋಷವಾಗಿರುವ ಸಮಯವನ್ನು ಮಾತ್ರ ಬಯಸುತ್ತೇನೆ, ಅದಕ್ಕಾಗಿ ಮಾತ್ರ ಡೇಟ್ ಗೆ ಹೋಗುತ್ತೇನೆ.. ನಾನು ಅವರ ಜೊತೆಗೆ ಸಿನಿಮಾಗೆ ಹೋಗುತ್ತೇನೆ, ಲಂಚ್ ಡಿನ್ನರ್ ಗೆ ಹೋಗುತ್ತೇನೆ.. ಹೋಟೆಲ್ ಗಳಲ್ಲಿ ಉಳಿದುಕೊಳ್ಳುತ್ತೇನೆ..

ಅವರ ಜೊತೆಗೆ ದೈಹಿಕವಾಗಿ ಮುಂದುವರೆಯುತ್ತೇನೆ. ಇದರಿಂದ ಜೀವನ ಹೇಗೆ ನಡೆಸಬೇಕು ಎಂದು ನನಗೆ ಅರ್ಥವಾಗಿದೆ. ಹಣಕಾಸಿನ ವಿಚಾರದಲ್ಲಿ ನಾನು ಸ್ವಾತಂತ್ರ್ಯವಾಗಿದ್ದೇನೆ, ನನ್ನ ಸ್ವಂತ ಮಬೆ, ಕಾರ್ ಇದೆ. ನನಗೆ ಖರ್ಚು ಮಾಡುವುದಕ್ಕೆ ಗೆಳೆಯನ ಅವಶ್ಯಕತೆ ಇಲ್ಲ. ಇನ್ನುಮೇಲೆ ನಾನು ಮಾನಸಿಕವಾಗಿ ಯಾರ ಜೊತೆಗೂ ಕನೆಕ್ಟ್ ಆಗಲು ಬಯಸುವುದಿಲ್ಲ. ಒಂದು ಸಂಬಂಧದಲ್ಲಿದ್ದು, ಅವರ ಕರುಣೆಯ ಮೇಲೆ ಬದುಕುವುದಕ್ಕಿಂತ, ಈ ರೀತಿ ಇರುವುದು ನನಗೇ ಇಷ್ಟ. ಇದರಿಂದ ನನಗೆ ಧೈರ್ಯ ಬಂದಿದೆ..” ಎಂದು ಬರೆದುಕೊಂಡಿದ್ದಾರೆ.

Comments are closed.