Neer Dose Karnataka
Take a fresh look at your lifestyle.

Cricket News: ಕೊಹ್ಲಿ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಶುಭ್ಮಂ ಗಿಲ್, ಈತನ ಕಂಡು ಕೊಹ್ಲಿ ಗೆ ಶಾಕ್. ಏನಾಗಿದೆ ಗೊತ್ತೇ??

Cricket News: ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ ಅವರು ಈಗ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ತಮಗೆ ಸಿಗುವ ಎಲ್ಲಾ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳುತ್ತಿರುವ ಶುಭಮನ್ ಗಿಲ್ ಅವರು ಪ್ರತಿಯೊಂದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬರುತ್ತಿದ್ದಾರೆ. ಇಂಡಿಯಾ ವರ್ಸಸ್ ಶ್ರೀಲಂಕಾ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದ ಶುಭಮನ್ ಗಿಲ್ ಅವರು ಈಗ ದ್ವಿಶತಕ ಭಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಏಕದಿನ ಸರಣಿ ಪಂದ್ಯಗಳು ಭಾರತದಲ್ಲಿ ನಡೆಯುತ್ತಿದೆ. ಹೈದರಾಬಾದ್ ನಲ್ಲಿ ನಡೆದ ಈ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ದ್ವಿಶತಕ ಭಾರಿಸಿ ಹೊಸ ದಾಖಲೆ ಬರೆದಿದ್ದಾರೆ, ಇದು ವಿರಾಟ್ ಕೊಹ್ಲಿ ಅವರ ದಾಖಲೆಯನ್ನೇ ಮುರಿದಿದೆ ಎನ್ನುವುದು ಅದ್ಭುತವಾದ ವಿಚಾರ ಆಗಿದೆ. ಶುಭಮನ್ ಅವರು 149 ಎಸೆತಗಳಲ್ಲಿ ಬರೋಬ್ಬರಿ 208 ರನ್ಸ್ ಗಳಿಸಿದ್ದಾರೆ. ಶತಕ ಸಿಡಿಸಲು 87 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಗಿಲ್, 208 ರನ್ಸ್ ಗಳಲ್ಲಿ 19 ಬೌಂಡರಿಗಳು ಸೇರಿದೆ. ಇದನ್ನು ಓದಿ..Cricket News: ರೋಹಿತ್ ಅನ್ನು ಮೀರಿಸುವ ಮಹಾ ನಾಯಕ ರಾಹುಲ್: ಮೊದಲನೇ ಪಂದ್ಯ ಗೆಲ್ಲಿಸಿಕೊಟ್ಟ ಕುಲದೀಪ್ ಅನ್ನು ಹೊರಹಾಕಿದಕ್ಕೆ ನೀಡಿದ ಕಾರಣ ಏನು ಗೊತ್ತೇ?

ಶುಬ್ಮನ್ ಗಿಲ್ ಅವರು ಈ ದ್ವಿಶತಕದ ಮೂಲಕ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 1000 ರನ್ಸ್ ಪೂರ್ತಿ ಮಾಡಿದ್ದಾರೆ, ಅತ್ಯಂತ ವೇಗವಾಗಿ ಏಕದಿನ ಕ್ರಿಕೆಟ್ ನಲ್ಲಿ 1000 ರನ್ಸ್ ಪೂರ್ತಿ ಮಾಡಿದ ಭಾರತದ ಆಟಗಾರ ಆಗಿದ್ದಾರೆ ಶುಭಮನ್ ಗಿಲ್. ಇಷ್ಟು ದಿನಗಳ ಕಾಲ ಈ ದಾಖಲೆ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ಹೆಸರಲ್ಲಿತ್ತು. ವಿರಾಟ್ ಅವರು 24 ಇನ್ನಿಂಗ್ಸ್ ಗಳಲ್ಲಿ 1000 ರನ್ಸ್ ಪೂರ್ತಿ ಮಾಡಿದ್ದರು, ಆದರೆ ಗಿಲ್ ಅವರು 19 ಇನ್ನಿಂಗ್ಸ್ ಗಳಲ್ಲಿ 1000 ಪೂರ್ತಿ ಮಾಡಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಅತ್ಯಂತ ವೇಗವಾಗಿ 1000 ರನ್ಸ್ ಗಳಿಸಿದ ಆಟಗಾರ ಆಗಿದ್ದಾರೆ ಶುಬ್ಮನ್ ಗಿಲ್. ಇದನ್ನು ಓದಿ..Cricket News: ಕೈಲಾಗದೆ ಪರದಾಡುತ್ತಿರುವ ರಾಹುಲ್ ಬದಲು ಮತ್ಯಾರು ಆರಂಭಿಕ ಆಗಬೇಕಂತೆ ಗೊತ್ತೇ? ಆಸ್ಟ್ರೇಲಿಯಾ ಲೆಜೆಂಡ್ ಹೇಳಿದ್ದೇನು ಗೊತ್ತೇ??

Comments are closed.