Neer Dose Karnataka
Take a fresh look at your lifestyle.

Kannada News: ಕನ್ನಡದಲ್ಲಿ ಮಿಂಚಿ ಮರೆಯಾಗಿರುವ ವಸಿಷ್ಠ ರವರು ಕೊಟ್ಟರು ಸಿಹಿ ಸುದ್ದಿ: ಮದುವೆಗೆ ಮುನ್ನವೇ ಕುಲಾಯಿಸಿದ ಅದೃಷ್ಟ. ಏನಾಗಿದೆ ಗೊತ್ತೇ??

Kannada News: ಕನ್ನಡದ ನಟ ವಸಿಷ್ಠ ಸಿಂಹ (Vasishta Simha) ತಮ್ಮ ಅಭಿನಯ ಮತ್ತು ಕಂಚಿನ ಕಂಠದಿಂದ ಎಲ್ಲರ ಗಮನ ಸೆಳೆದವರು. ರಾಜಾಹುಲಿ (Rajahuli), ಕೆಜಿಎಫ್ (KGF) ಇಂತಹ ದೊಡ್ಡ ಸಿನಿಮಾಗಳಲ್ಲಿ ವಿಲ್ಲನ್ ಆಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಇನ್ನು ಕೆಲವು ಸಿನಿಮಾಗಳಲ್ಲಿ ಹೀರೋ ಆಗಿ ಕೂಡ ನಟಿಸಿದ್ದಾರೆ. ವಸಿಷ್ಠ ಅವರು ಕೆಲವು ಹಾಡುಗಳನ್ನು ಸಹ ಹಾಡಿದ್ದಾರೆ. ಇನ್ನು ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡು, ಇದೇ ತಿಂಗಳು ಜನವರಿ 26ರಂದು ಮೈಸೂರಿನಲ್ಲಿ ನಟಿ ಹರಿಪ್ರಿಯಾ (Haripriya) ಅವರ ಕೈಹಿಡಿಯಲಿದ್ದಾರೆ ನಟ ವಸಿಷ್ಠ ಸಿಂಹ.

ಆದರೆ ಈಗ ಮದುವೆಗಿಂತ ಮೊದಲೇ ವಸಿಷ್ಠ ಸಿಂಹ ಅವರು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸಿರುವ ವಸಿಷ್ಠ ಸಿಂಹ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅದು ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಅವರ 60ನೇ ಸಿನಿಮಾ ವುಲ್ಫ್ (Wolf) ಮೂಲಕ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಿದೆ. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರು ನಟಿಸಿದ್ದು, ಸಿನಿಮಾದ ಟೈಟಲ್ ಪೋಸ್ಟರ್ ಈಗಷ್ಟೇ ಬಿಡುಗಡೆ ಆಗಿದೆ. ಇದನ್ನು ಓದಿ..Kannada News: ನೇರವಾಗಿ ಪವನ್ ಕಲ್ಯಾಣ್ ಸಿನೆಮಾವನ್ನೇ ರಿಜೆಕ್ಟ್ ಮಾಡಿದ ಯುವ ನಟಿ: ಈಕೆಯ ಅಂದಕ್ಕೆ ಆಫರ್ ಕೊಟ್ಟರು ಬೇಡ ಅಂದಿದ್ದು ಯಾಕೆ ಗೊತ್ತೆ?

ವುಲ್ಫ್ ಸಿನಿಮಾ ಸೈಕಲಾಜಕಲ್ ಡ್ರಾಮಾ ಆಗಿದ್ದು, ಈ ಸಿನಿಮಾವನ್ನು ವಿನು ವೆಂಕಟೇಶ್ ನಿರ್ದೇಶನ ಮಾಡಿದ್ದು, ಚಿತ್ರೀಕರಣ ಈಗಾಗಲೇ ಮುಗಿದಿದೆ, ಮಾರ್ಚ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ ಚಿತ್ರತಂಡ. ವುಲ್ಫ್ ಸಿನಿಮಾವನ್ನು ಎನ್.ಸಂದೇಶ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ, ಪ್ರಭುದೇವ, ವಸಿಷ್ಠ ಸಿಂಹ, ಅಂಜು ಕುರಿಯನ್ (Anju Kurian), ಅನಸೂಯ ಭಾರದ್ವಾಜ್ (Anasuya Bharadwaj), ಲಕ್ಷ್ಮಿ ರೈ (Rai Laxmi), ಶ್ರೀಗೋಪಿಕಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ವಸಿಷ್ಠ ಅವರು ಇಷ್ಟು ದಿನಗಳ ಕಾಲ ಈ ಸಿನಿಮಾ ಬಗ್ಗೆ ಮಾಹಿತಿ ನೀಡಿರಲಿಲ್ಲ, ಈಗ ಸೈಲೆಂಟ್ ಆಗಿಯೇ ಈ ವಿಚಾರ ಹೊರಬಂದಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಸಂತೋಷಪಟ್ಟಿದ್ದಾರೆ. ಇದನ್ನು ಓದಿ.. Kannada News: ಗೆದ್ದ ತಕ್ಷಣ ಚಿಕ್ಕ ಹುಡುಗಿ ಎಂದು ಕೂಡ ನೋಡದೆ, ತೆಲುಗಿನ ಚಿತ್ರರಂಗ ಶ್ರೀ ಲೀಲಾ ರವರನ್ನು ಏನು ಮಾಡಲು ಹೊರಟಿದೆ ಗೊತ್ತೇ?? ಚಿಕ್ಕ ಹುಡುಗಿ ಅಂದ್ರು ಬಿಡುತ್ತಿಲ್ಲ

Comments are closed.