Kannada News: ಬೆಲೆ ಇರುವ ಕನ್ನಡ ಬಿಟ್ಟು ತಮಿಳಿಗೆ ಹೋಗುತ್ತಿರುವ ರಕ್ಷಿತ್ ಶೆಟ್ಟಿ ಗೆ ಕೊಟ್ಟ ಪಾತ್ರ ಯಾವುದು ಗೊತ್ತೇ??
Kannada News: ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ಇಂದು ಬಹುಬೇಡಿಕೆಯ ನಟರಲ್ಲಿ ಒಬ್ಬರು. ಇವರು ನಟಿಸಿದ 777 ಚಾರ್ಲಿ (777 Charlie) ಸಿನಿಮಾ ಕಳೆದ ವರ್ಷ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿ, 150 ಕೋಟಿ ಹಣಗಳಿಕೆ ಮಾಡಿತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದ ಚಾರ್ಲಿ ರಕ್ಷಿತ್ ಅವರಿಗೆ ಹೆಸರು, ಹಣ, ಕೀರ್ತಿ ಎಲ್ಲವನ್ನು ತಂದುಕೊಟ್ಟಿದೆ. ಇದರಿಂದಾಗಿ ರಕ್ಷಿತ್ ಅವರಿಗೆ ಬಹಳಷ್ಟು ಅವಕಾಶಗಳು ಸಹ ಬರುತ್ತಿದೆ. ರಕ್ಷಿತ್ ಅವರು ಕನ್ನಡದಲ್ಲಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ, ಈ ಸಿನಿಮಾದಲ್ಲಿ ನಟನೆ, ಹಾಗೆಯೇ ರಿಚರ್ಡ್ ಆಂಟೋನಿ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.
ಕನ್ನಡದಲ್ಲಿ ಬ್ಯುಸಿ ಇರುವ ರಕ್ಷಿತ್ ಶೆಟ್ಟಿ ಅವರಿಗೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರ 67ನೇ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆಯಂತೆ. ವಿಜಯ್ ಅವರ 67ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನ ಮಾಡುತ್ತಿದ್ದು, ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿತ್ತು. ಲೋಕೇಶ್ ಅವರು ಇವ ಬಹುಬೇಡಿಕೆಯ ನಿರ್ದೇಶಕ, ಇವರು ನಿರ್ದೇಶನ ಮಾಡಿರುವ, ಖೈದಿ, ಮಾಸ್ಟರ್, ವಿಕ್ರಂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಯಶಸ್ಸಿನ ಬೆನ್ನಲ್ಲೇ ವಿಜಯ್ ಅವರ ಜೊತೆಗೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ಓದಿ.. Kannada News: ಕನ್ನಡದಲ್ಲಿ ಮಿಂಚಿ ಮರೆಯಾಗಿರುವ ವಸಿಷ್ಠ ರವರು ಕೊಟ್ಟರು ಸಿಹಿ ಸುದ್ದಿ: ಮದುವೆಗೆ ಮುನ್ನವೇ ಕುಲಾಯಿಸಿದ ಅದೃಷ್ಟ. ಏನಾಗಿದೆ ಗೊತ್ತೇ??
ವಿಜಯ್ ಅವರ ಈ ಸಿನಿಮಾದಲ್ಲಿ ನಟಿಸಲು ರಕ್ಷಿತ್ ಶೆಟ್ಟಿ ಅವರನ್ನು ಭೇಟಿ ಮಾಡಿ, ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆಯಂತೆ. ಚಿತ್ರತಂಡದಿಂದ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ, ಆದರೆ ರಕ್ಷಿತ್ ಶೆಟ್ಟಿ ಅವರು ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಇದರಲ್ಲಿ ರಕ್ಷಿತ್ ಅವರ ಪಾತ್ರ ಏನೆಂದು ನೋಡುವುದಾದರೆ, ನಾಯಕನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ರಕ್ಷಿತ್ ಶೆಟ್ಟಿ. ಈ ವಿಚಾರ ತಿಳಿದ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡದಲ್ಲಿ ನಾಯಕನಾಗಿ ಬಹಳ ಬೇಡಿಕೆಯ, ಬೆಲೆ ಇರುವ ನಟ ಆಗಿರುವಾಗ, ತಮಿಳಿಗೆ ಹೋಗಿ, ತಮ್ಮನ ಪಾತ್ರದಲ್ಲಿ ನಟಿಸಬೇಕಾ ಎಂದು ನೆಟ್ಟಿಗರು ಬೇಸರ ಹೊರಹಾಕುತ್ತಿದ್ದಾರೆ. ಇದನ್ನು ಓದಿ..Kannada News: ಗೆದ್ದ ತಕ್ಷಣ ಚಿಕ್ಕ ಹುಡುಗಿ ಎಂದು ಕೂಡ ನೋಡದೆ, ತೆಲುಗಿನ ಚಿತ್ರರಂಗ ಶ್ರೀ ಲೀಲಾ ರವರನ್ನು ಏನು ಮಾಡಲು ಹೊರಟಿದೆ ಗೊತ್ತೇ?? ಚಿಕ್ಕ ಹುಡುಗಿ ಅಂದ್ರು ಬಿಡುತ್ತಿಲ್ಲ
Comments are closed.