Neer Dose Karnataka
Take a fresh look at your lifestyle.

Kannada News: ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡುತ್ತದೆ ಎಂದು ಕೊಂಡಿದ್ದ ಕ್ರಾಂತಿ, ಆನ್ಲೈನ್ ಟಿಕೆಟ್ ಕಥೆ ಏನಾಗಿದೆ ಗೊತ್ತೇ??

5,245

Kannada News: ನಟ ದರ್ಶನ್ (Darshan) ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ (Kranti) ಗಣರಾಜ್ಯೋತ್ಸವದ ದಿನ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಕ್ರಾಂತಿ ಸಿನಿಮಾ ಮುಂಗಡ ಟಿಕೆಟ್ ಬುಕಿಂಗ್ ನಿನ್ನೆಯಷ್ಟೇ ಶುರುವಾಗಿದ್ದು, ಈಗಾಗಲೇ ಬುಕಿಂಗ್ ನಲ್ಲಿ ದಾಖಲೆ ಬರೆದಿದೆ ಕ್ರಾಂತಿ. ಈ ಕ್ರೇಜ್ ನೋಡುತ್ತಿದ್ದರೆ ಮೊದಲ ದಿನ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಗುವುದರಲ್ಲಿ ಸಂಶಯವಿಲ್ಲ. ಕ್ರಾಂತಿ ಅಡ್ವಾನ್ಸ್ ಬುಕಿಂಗ್ ಹೇಗಿದೆ? ಸಿನಿಮಾ ಮೇಲಿನ ಕ್ರೇಜ್ ಹೇಗಿದೆ ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಕ್ರಾಂತಿ ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗುತ್ತಿದ್ದ ಹಾಗೆಯೇ, ದರ್ಶನ್ ಅವರ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದ್ದಾರೆ, ಬುಕಿಂಗ್ ಶುರುವಾದ ಕೇವಲ 3 ಗಂಟೆಗಳಲ್ಲಿ ಬರೋಬ್ಬರಿ 25 ಸಾವಿರಕ್ಕಿಂತ ಹೆಚ್ಚು ಟಿಕೆಟ್ಸ್ ಬುಕ್ ಆಗಿದೆ. ಬಹುತೇಕ ಎಲ್ಲಾ ಕಡೆ, ಬೆಳಗ್ಗಿನ ಶೋಗಳು ಸೋಲ್ಡ್ ಔಟ್ ಆಗಿದೆ. ಕ್ರಾಂತಿ ಸಿನಿಮಾ ಪ್ರೀಮಿಯರ್ ಶೋ ಮಾಡಿಲ್ಲ, ಗುರುವಾರ ಡೈರೆಕ್ಟ್ ಆಗಿ ಥಿಯೇಟರ್ ನಲ್ಲೇ ಸಿನಿಮಾ ಬಿಡುಗಡೆ ಆಗುತ್ತಿದೆ. ಬಹಳಷ್ಟು ಶೋಗಳು ಈಗಾಗಲೇ ಫಾಸ್ಟ್ ಫಿಲ್ಲಿಂಗ್ ಇದ್ದು, ಬಿಡುಗಡೆಗಿಂತ ಮೊದಲೇ ಕ್ರಾಂತಿ ಸಿನಿಮಾ ಬ್ಲಾಕ್ ಬಸ್ಟರ್ ಎನ್ನಿಸಿಕೊಳ್ಳುವ ಎಲ್ಲಾ ಲಕ್ಷಣ ತೋರಿಸಿದೆ. ಬುಕಿಂಗ್ ಒಂದು ಕಡೆಯಾದರೆ ಮತ್ತೊಂದು ಕಡೆ ಅಭಿಮಾನಿಗಳು ಥಿಯೇಟರ್ ಮುಂದೆ ನಿಲ್ಲಿಸಲು ಭರ್ಜರಿಯಾದ ಕಟೌಟ್ ಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News:ಇಂದಿರಾ ಗಾಂಧಿ ಸಿನೆಮಾವನ್ನು ಪೂರ್ಣವಾಗಿ ತೆಗೆಯಲು ಆಸ್ತಿ ಅಡವಿಟ್ಟ ಕಂಗನಾ ರಾವತ್. ವಾಪಸ್ಸು ಬರುವುದೇ ಹಣ??

ಇನ್ನು ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡೋದಕ್ಕೆ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿಕೊಂಡು ಕಾದು ಕುಳಿತಿದ್ದಾರೆ. ಕ್ರಾಂತಿ ಸಿನಿಮಾ ಒಂದು ಒಳ್ಳೆಯ ಅಕ್ಷರ ಕ್ರಾಂತಿಯ ಸಂದೇಶದ ಜೊತೆಗೆ ತಯಾರಾಗಿರುವ ಮಾಸ್ ಕಮರ್ಷಿಯಲ್ ಸಿನಿಮಾ. ಇದರಲ್ಲಿ ದರ್ಶನ್ ಅವರು ಎನ್.ಆರ್.ಐ ಕ್ರಾಂತಿ ರಾಯಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ (Rachita Ram) ಅವರು ನಾಯಕಿಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ (Ravichandran), ಸುಮಲತಾ ಅಂಬರೀಶ್ (Sumalatha Ambareesh) ಅವರು, ರವಿಶಂಕರ್ (Ravishankar) ಅವರು, ಸಂಯುಕ್ತ ಹೊರನಾಡ್ (Samyukta Horanad) ಸೇರಿದಂತೆ ಕ್ರಾಂತಿ ಸಿನಿಮಾದಲ್ಲಿ ದೊಡ್ಡ ತಾರಾಗಣವಿದೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಕಾಂತಾರ 2 ಗೆ ಸಪ್ತಮಿ ಅಲ್ಲ, ಟಾಪ್ ನಟಿಯ ಮಗಳು ಹೀರೊಯಿನ್. ಯಾರು ಗೊತ್ತೇ?? ನೋಡಿದರೆ ಲವ್ ಆಗೋದು ಪಕ್ಕ.

Leave A Reply

Your email address will not be published.