Neer Dose Karnataka
Take a fresh look at your lifestyle.

Shrirasthu Shubhamasthu: ಶ್ರೀರಸ್ತು ಶುಭಮಸ್ತು: ಭಾರಿ ನಗು ತರಿಸುವಂತೆ ನಟಿಸುತ್ತಿರುವ ವೆಂಕಟ್ ರಾವ್ ಪಾತ್ರದ ಬಗ್ಗೆ ಜನರ ಅಭಿಪ್ರಾಯವೇನು ಗೊತ್ತೇ?? ನಿಜವಾದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಗೊತ್ತೇ?

Shrirasthu Shubhamasthu: ಜೀಕನ್ನಡದಲ್ಲಿ (Zee Kannada) ಮೂರು ತಿಂಗಳ ಹಿಂದೆ ಶುರುವಾದ ಧಾರವಾಹಿ ಶ್ರೀರಸ್ತು ಶುಭಮಸ್ತು. ಈ ಧಾರವಾಹಿಯಲ್ಲಿ ಎಲ್ಲರೂ ಉತ್ತಮ ಕಲಾವಿದರೇ ನಟಿಸುತ್ತಿದ್ದಾರೆ. ಈ ಧಾರವಾಹಿಯಲ್ಲಿ ತುಳಸಿ ಪಾತ್ರ ಕಥಾನಾಯಕಿ, ಕುಟುಂಬವನ್ನು ಪ್ರೀತಿಯಿಂದ ನಡೆಸಿಕೊಂಡು ಹೋಗುತ್ತಿರುವ ಹೆಣ್ಣು, ಮನೆಯವರನ್ನು ನೋಡಿಕೊಳ್ಳುವುದರಲ್ಲಿ ತನಗೆ ಒಂದು ಜೀವನ ಇದೆ ಎನ್ನುವುದನ್ನು ಮರೆತಿರುವ ತುಳಸಿಯ ಜೀವನವನ್ನು ಬದಲಾಯಿಸಬೇಕು ಎಂದು ಸೊಸೆ ಸಿರಿ ಪ್ರಯತ್ನ ಮಾಡುತ್ತಿದ್ದಾಳೆ. ಅತ್ತೆ ಸೊಸೆಯ ಸಂಬಂಧವನ್ನು ಈ ರೀತಿ ನೋಡಲು ವೀಕ್ಷಕರಿಗೂ ಬಹಳ ಇಷ್ಟವಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಎಲ್ಲರಿಗೂ ಬಹಳ ಇಷ್ಟ ಆಗಿರುವುದು ತಾತ ದತ್ತಾತ್ರೇಯ ಅವರ ಪಾತ್ರ ಎಂದರೆ ತಪ್ಪಲ್ಲ..

ತಾತನ ಸ್ವಭಾವ ನಿಜ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಎನ್ನಿಸಿದರು ಕೂಡ, ಧಾರವಾಹಿಯಲ್ಲಿ ನೋಡಲು ಜನರಿಗೆ ಬಹಳ ಇಷ್ಟವಾಗುತ್ತಿದೆ. ತಾತ ಮಾತನಾಡುವ ರೀತಿಯನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಮೊಮ್ಮಗನನ್ನು ದಂಡಪಿಂಡ ಎಂದು ಕರೆಯುವುದು, ಮೊಮ್ಮಗನ ಹೆಂಡತಿಗೆ ಸೋಗಲಾಡಿ ಎಂದು ಕರೆಯುವುದು, ಓಡಿಹೋಗಿ ಮದುವೆಯಾದ ಮೊಮ್ಮಗಳಿಗೆ ಓಡಿ ಹೋದಳು ಎನ್ನುವುದು, ಆಗಾಗ ಸೊಸೆಗೆ ಕುರುಕಲು ತಿಂಡಿ ವಿಚಾರಕ್ಕೆ ಪೀಡಿಸುವುದು. ಮೊಮ್ಮಗನನ್ನು ಗೋಳು ಹಾಕಿಕೊಳ್ಳುವುದು, ಮನೆಯಲ್ಲಿ ತನ್ನದೇ ಆಧಿಕಾರ ನಡೆಯಬೇಕು ಎನ್ನುವುದು ಇದೆಲ್ಲವನ್ನು ಜನರು ಬಹಳ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ದೇಶವನ್ನೇ ಅಲ್ಲಾಡಿಸಿದ್ದ ನರೇಶ್-ಪವಿತ್ರ ಪ್ರಕರಣಕ್ಕೆ ಟ್ವಿಸ್ಟ್: ಅಭಿಮಾನಿಗಳಿಗೆ ಬಾರಿ ನಿರಾಸೆ. ನರೇಶ್ ಗೆ ಶಾಕ್. ಪವಿತ್ರ ಫುಲ್ ಕುಶ್. ಯಾಕೆ ಗೊತ್ತೇ??

ಸೋಷಿಯಲ್ ಮೀಡಿಯಾದಲ್ಲಿ ಕೂಡ ದತ್ತ ಪಾತ್ರಕ್ಕೆ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ, ತಾತ ಸೂಪರ್, ಅವರಿಗಾಗಿಯೇ ಧಾರವಾಹಿ ನೋಡ್ತೀವಿ ಎಂದು ಜನರು ಕಮೆಂಟ್ಸ್ ಬರೆಯುತ್ತಿದ್ದಾರೆ. ದತ್ತ ಪಾತ್ರದಲ್ಲಿ ನಟಿಸುತ್ತಿರುವ ಇವರ ಬಗ್ಗೆ ತಿಳಿಯಲು ಅನೇಕರಿಗೆ ಕುತೂಹಲ ಇದೆ, ಇವರ ನಿಜವಾದ ಹೆಸರು ವೆಂಕಟ್ ರಾವ್, ಇವರು ಮೊದಲಿಗೆ ನಟಿಸಿದ್ದು 1959 ರಲ್ಲಿ, ಆರೇಳು ದಶಕದಿಂದ ಇವರು ನಟನೆ ಮಾಡುತ್ತಲೇ ಬಂದಿದ್ದಾರೆ. ಮಾಯಾಮೃಗ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ, ಇತ್ತೀಚಿನ ತೋತಾಪುರಿ ಸಿನಿಮಾದಲ್ಲಿ ನಟಿಸಿದ್ದರು. ಈಗ ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಇದನ್ನು ಓದಿ..Kannada News: ನಾನು ತುಟಿಗೆ ತುಟಿ ಕೊಟ್ಟು ಮುತ್ತು ಕೊಡುವುದೇನೋ ಕೊಟ್ಟಿ ಬಿಟ್ಟೆ: ಆದರೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದೆ ಎಂದ ನಟಿ ಅಂಜಲಿ. ಆಮೇಲೆ ಏನಾಯ್ತು ಅಂತೇ ಗೊತ್ತೇ??

Comments are closed.