Kannada News: ಲೇಟ್ ಆಗಿ ಬಂದರು, ಸುಂದರಿಯೊಂದಿಗೆ ಖಡಕ್ ಎಂಟ್ರಿ ಕೊಟ್ಟ ಕೋಮಲ್: ಹೊಸ ಚಿತ್ರಕ್ಕೆ ನಟಿ ಯಾರು ಅಂತೇ ಗೊತ್ತೇ?
Kannada News: ಚಂದನವನದ ಖ್ಯಾತ ಹಿರಿಯನಟ ಜಗ್ಗೇಶ್ ಅವರ ತಮ್ಮ ಕೋಮಲ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿಗೆ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಅವರು ನಂತರ ಹೀರೋ ಆಗಿಯೂ ನಟಿಸಿದ್ದಾರೆ. ಕೆಲವು ವರ್ಷಗಳು ಚಿತ್ರರಂಗದಿಂದ ದೂರ ಉಳಿದಿದ್ದ ಕೋಮಲ್ ಅವರು ಈಗ ಒಂದರ ನಂತರ ಒಂದರ ಹಾಗೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಇವರು ನಾಯಕನಾಗಿ ಅಭಿನಯಿಸಿರುವ ಕಾಲಾಯ ನಮಃ ಸಿನಿಮಾ ಚಿತ್ರೀಕರಣ ಮುಗಿದಿದೆ ಎನ್ನುವ ಸುದ್ದಿ ಕೇಳಿಬಂದಿತ್ತು.
ಇದೀಗ ಕೋಮಲ್ ಅವರ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ, ಈ ಸಿನಿಮಾಗೆ ರೋಲೆಕ್ಸ್ ಎಂದು ಹೆಸರಿಡಲಾಗಿದೆ. ಈ ಗುರುವಾರ ಸಿನಿಮಾದ ಮುಹೂರ್ತ ನಡೆದಿದ್ದು, ನಿನ್ನೆಯಿಂದ ಚಿತ್ರೀಕರಣ ಕೂಡ ಶುರುವಾಗಿದೆ. ಈ ಸಿನಿಮಾ ಮೇಲೆ ಕೋಮಲ್ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೆಸ್ಸಿ ಗಿಫ್ಟ್ ಅವರು ಸಂಗೀತ ನೀಡಿದ್ದು, ಸಿನಿಮಾ ಹಾಡುಗಳ ರೆಕಾರ್ಡಿಂಗ್ ಈಗಾಗಲೇ ಮುಗಿದಿದೆಯಂತೆ. ಶ್ರೀನಿವಾಸ್ ಮಂಡ್ಯ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು ಸೇರಿದಂತೆ ಇನ್ನು ಹಲವು ಕಲಾವಿದರು ಸಿನಿಮಾದಲ್ಲಿ ನಟಿಸಲಿದ್ದಾರೆ. ಇದನ್ನು ಓದಿ..Kannada News: ಸ್ನೇಹಿತನ ಮದುವೆಗೆ ದುಬಾರಿ ಉಡುಗೊರೆ ಕೊಟ್ಟ ಡಾಲಿ: ವಸಿಷ್ಠ ಮದುವೆಗೆ ಕೊಟ್ಟ ಉಡುಗೊರೆ ಏನು ಗೊತ್ತೇ??
ಫೀನಿಕ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇನ್ನು ಈ ಸಿನಿಮಾಗೆ ಸೂಪರ್ ಆಗಿರುವ ನಾಯಕಿಯರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ರೋಲೆಕ್ಸ್ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿರುವವರು ಮತ್ಯಾರು ಅಲ್ಲ, ನಟಿ ಸೋನಲ್ ಮೊಂಟೆರೋ ಅವರು. ಈಗಾಗಲೇ ಗರಡಿ, ಬುದ್ಧಿವಂತ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸೋನಲ್ ಅವರು ಈಗ ರೋಲೆಕ್ಸ್ ಸಿನಿಮಾ ಒಪ್ಪಿಕೊಂಡು, 25 ದಿನಗಳ ಕಾಲ ಡೇಟ್ಸ್ ನೀಡಿದ್ದಾರಂತೆ. ನಟ ಕೋಮಲ್ ಅವರು ಸಿನಿಮಾ ಬಗ್ಗೆ ಮಾತನಾಡಿ, ರೋಲೆಕ್ಸ್ ಎನ್ನುವುದು ಒಂದು ಬ್ರ್ಯಾಂಡ್, ಅದು ಹೇಗೆ ಶುರುವಾಯಿತು, ಏನೆಲ್ಲಾ ನಡೆಯಿತು ಎನ್ನುವುದೆ ಕಥೆ ಎಂದು ತಿಳಿಸಿದ್ದಾರೆ.. ಇದನ್ನು ಓದಿ..Kannada News: ಇರುವುದೆಲ್ಲವನ್ನು ತೋರಿಸಿದರೂ, ಏನೇ ಮಾಡಿದರೂ ಆಫರ್ ಬರುತ್ತಿಲ್ಲ ಎಂದು ಗಟ್ಟಿ ನಿರ್ಣಯ ಮಾಡಿ ಹೆಜ್ಜೆ ಇಟ್ಟ ಕೃತಿ: ಈ ವಯಸ್ಸಿಗೆ ಇವೆಲ್ಲ ಬೇಕಿತ್ತಾ??
Comments are closed.