Lakshana: ಇದಪ್ಪ ಟ್ವಿಸ್ಟ್ ಅಂದ್ರೆ: RJ ಸಖಿ ನಕ್ಷತ್ರ ಎಂದು ಗೊತ್ತಾಗಿಯೇ ಬಿಡ್ತು; ಇನ್ನು ಮುಂದೆ ಏನಾಗಲಿದೆ ಗೊತ್ತೇ?? ಬಾರಿ ಟ್ವಿಸ್ಟ್ ಕೊಟ್ಟ ಲಕ್ಷಣ.
Lakshana: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿಗಳಲ್ಲಿ ಒಂದು ಲಕ್ಷಣ. ಈ ಧಾರಾವಾಹಿಯಲ್ಲಿ ಈಗ ಬಿಗ್ ಟ್ವಿಸ್ಟ್ ನೀಡಲಾಗಿದೆ. ವೀಕ್ಷಕರಂತೂ ಈ ಟ್ವಿಸ್ಟ್ ನೋಡಿ ಫುಲ್ ಹ್ಯಾಪಿ ಆಗಿದ್ದಾರೆ ಎಂದೇ ಹೇಳಬಹುದು. ಧಾರವಾಹಿಯ ಆರಂಭದಲ್ಲಿ ನಕ್ಷತ್ರ ಗೆ ಆರ್.ಜೆ ಆಗಬೇಕು ಎಂದು ಕನಸಿರುತ್ತದೆ, ಆದರೆ ಮನೆಯವರಿಗೆ ಗೊತ್ತಾದರೆ, ತಂದೆಗೆ ಇದೆಲ್ಲ ಇಷ್ಟವಿಲ್ಲ ಎಂದು ನಕ್ಷತ್ರ ತಾನೇ ಆರ್.ಜೆ ಸಖಿ ಎನ್ನುವ ವಿಚಾರವನ್ನ ಯಾರಿಗೂ ಹೇಳಿರುವುದಿಲ್ಲ.
ಆರ್.ಜೆ ಸಖಿ ಮಾತನಾಡೋ ರೀತಿ, ಅವಳ ಶೋ ಅಂದ್ರೆ ಭೂಪತಿಗೆ ತುಂಬಾ ಇಷ್ಟ, ಆರ್.ಜೆ.ಸಖಿಯ ಫ್ಯಾನ್ ಆಗಿರುತ್ತಾನೆ ಭೂಪತಿ ಎಫ್.ಎಂ ಓನರ್ ಆಗಿದ್ದ ಶ್ವೇತಾ ಭೂಪತಿಯನ್ನು ಇಂಪ್ರೆಸ್ ಮಾಡುವ ಸಲುವಾಗಿ, ತಾನೇ ಆರ್.ಜೆ ಸಖಿ ಎಂದು ಹೇಳಿದ್ದಳು. ಆದರೆ ಈಗ ಅದು ಸುಳ್ಳು, ನಕ್ಷತ್ರ ನಿಜವಾದ ಆರ್.ಜೆ.ಸಖಿ ಎಂದು ಭೂಪತಿ ಮುಂದೆ ಬಯಲಾಗಿದೆ. ಈಗಾಗಲೇ ಶ್ವೇತಾ ಶಕುಂತಲಾ ದೇವಿಯ ಮುಂದೆ ಮರಿಯಾದೆ ಕಳೆದುಕೊಂಡಿದ್ದಳು, ನಕ್ಷತ್ರ ಮತ್ತು ಶ್ವೇತಾ ನಡುವೆ ಇಟ್ಟ ಕಾಂಪಿಟೇಶನ್ ನಲ್ಲಿ ಶ್ವೇತಾ ಸೋಲುತ್ತಾಳೆ. ಇದನ್ನು ಓದಿ..Kannada News: ಸ್ನೇಹಿತನ ಮದುವೆಗೆ ದುಬಾರಿ ಉಡುಗೊರೆ ಕೊಟ್ಟ ಡಾಲಿ: ವಸಿಷ್ಠ ಮದುವೆಗೆ ಕೊಟ್ಟ ಉಡುಗೊರೆ ಏನು ಗೊತ್ತೇ??
ಆಗ ಶಕುಂತಲಾದೇವಿ ನಕ್ಷತ್ರಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಭೂಪತಿ ಕೂಡ, ನಕ್ಷತ್ರ ಮಾಂಗಲ್ಯ ಕಳೆದುಹೋದಾಗ, ಮತ್ತೊಮ್ಮೆ ಮಾಂಗಲ್ಯ ಧಾರಣೆ ಮಾಡಿದ್ದಾನೆ. ನಕ್ಷತ್ರ ಗೆ ಎಲ್ಲವೂ ಒಳ್ಳೆಯದೇ ನಡೆಯುತ್ತಿದೆ. ಆರ್.ಜೆ ಸಖಿ ಶೋ ಅನ್ನು ಮತ್ತೆ ಶುರು ಮಾಡಬೇಕು ಜನರು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಭೂಪತಿ ಎಫ್.ಎಂ ಆಫೀಸ್ ಗೆ ಹೋಗಿ ಶೋ ಶುರು ಮಾಡುವಂತೆ ಶ್ವೇತಾಗೆ ಕೇಳಿಕೊಳ್ಳುತ್ತಾನೆ. ಆದರೆ ಶ್ವೇತಾ ಏನೇನೋ ಕಾರಣಗಳನ್ನು ಹೇಳುತ್ತಾ, ಕೊನೆಗೆ ತನಗೆ ಹುಷಾರಿಲ್ಲ ಎಂದು ಹೇಳುತ್ತಾಳೆ.
ಮಿಲಿ ಮತ್ತು ಶ್ವೇತಾ ಇಬ್ಬರು ಸೇರಿ, ಶ್ವೇತಾ ಇದ್ದಕ್ಕಿದ್ದ ಹಾಗೆ ಹುಷಾರು ತಪ್ಪಿದ್ದಾಳೆ, ನಡೆಯೋದಕ್ಕೂ ಆಗ್ತಾ ಇಲ್ಲ, ಸುಸ್ತಾಗಿದೆ ಎಂದೆಲ್ಲಾ ಸುಳ್ಳು ಹೇಳುತ್ತಾರೆ. ಇತ್ತ ನಕ್ಷತ್ರ ತಾನು ಆರ್.ಜೆ ಸಖಿ ಎನ್ನುವ ವಿಷಯ ಭೂಪತಿಗೆ ಗೊತ್ತಾಗಿ ತನ್ನನ್ನು ಮತ್ತೆ ಶೋ ಶುರು ಮಾಡುವುದಕ್ಕೆ ಕರೆದುಕೊಂಡು ಬಂದಿದ್ದಾನೆ ಎಂದುಕೊಳ್ಳುತ್ತಾಳೆ. ಶ್ವೇತಾ ಮಾತನ್ನು ನಂಬುವ ಭೂಪತಿ, ಶೋ ನಡೆಸಲು ಹೇಗೆ ಸಾಧ್ಯ, ಶ್ವೇತಾ ಗೆ ಹುಷಾರಿಲ್ಲ, ತುಂಬಾ ಸುಸ್ತಾಗಿದ್ದಾರೆ, ನಡೆಯೋದಕ್ಕೂ ಆಗ್ತಿಲ್ಲ ಎಂದು ಆಫೀಸ್ ಸಿಬ್ಬಂದಿಗಳ ಜೊತೆ ಮತ್ತು ನಕ್ಷತ್ರ ಎದುರು ಹೇಳುತ್ತಾನೆ. ಇದನ್ನು ಓದಿ..Kannada News: ಇರುವುದೆಲ್ಲವನ್ನು ತೋರಿಸಿದರೂ, ಏನೇ ಮಾಡಿದರೂ ಆಫರ್ ಬರುತ್ತಿಲ್ಲ ಎಂದು ಗಟ್ಟಿ ನಿರ್ಣಯ ಮಾಡಿ ಹೆಜ್ಜೆ ಇಟ್ಟ ಕೃತಿ: ಈ ವಯಸ್ಸಿಗೆ ಇವೆಲ್ಲ ಬೇಕಿತ್ತಾ??
ಆಫ ನಕ್ಷತ್ರ ಗೆ ಏನು ಅರ್ಥ ಆಗುವುದಿಲ್ಲ. ತನ್ನ ಪಾಡಿಗೆ ತಾನು ಹೋಗಿ ಶೋ ಸ್ಟಾರ್ಟ್ ಮಾಡುತ್ತಾಳೆ, ಆರ್.ಜೆ ಸಖಿ ಪ್ರೋಗ್ರಾಮ್ ನಡೆಸಿಕೊಡುತ್ತಿರುವ ಧ್ವನಿ ಕೇಳಿ ಭೂಪತಿಗೆ ಶಾಕ್ ಆಗುತ್ತದೆ. ಶ್ವೇತಾ ವಾಪಸ್ ಬಂದ್ರ ಎಂದು ಶಾಕ್ ಆಗಿ, ಲೈವ್ ಪ್ರೋಗ್ರಾಮ್ ನಡೆಸಿಕೊಡುತ್ತಿರುವ ಜಾಗಕ್ಕೆ ಹೋಗಿ ನೋಡಿ ಶಾಕ್ ಆಗುತ್ತಾನೆ. ಅಲ್ಲಿ ಪ್ರೋಗ್ರಾಮ್ ನಡೆಸಿಕೊಡುತ್ತಿರುವುದು ನಕ್ಷತ್ರ ಆಗಿರುತ್ತಾಳೆ. ಅದನ್ನು ನೋಡಿ ಭೂಪತಿ ಶಾಕ್ ಆಗಿದ್ದಾನೆ. ಇಷ್ಟು ದಿನ ತಾನು ಅಂದುಕೊಂಡಿದ್ದೆಲ್ಲ ಸುಳ್ಳು ಎಂದು ಭೂಪತಿಗೆ ಗೊತ್ತಾಗಿದೆ.
ಶೋ ನಲ್ಲಿ ಸಾಂಗ್ ಪ್ಲೇ ಮಾಡಿ ಹೊರಬಂದ ನಕ್ಷತ್ರಗೆ ಭೂಪತಿಗೆ ಥ್ಯಾಂಕ್ಸ್ ಹೇಳುತ್ತಾಳೆ. ಭೂಪತಿ ಸರ್ಪ್ರೈಸ್ ಆಗಿರುವುದು ನೋಡಿ, ನಕ್ಷತ್ರಗೆ ಯಾವುದು ಸರಿಯಾಗಿ ಅರ್ಥ ಆಗುವುದಿಲ್ಲ. ಅವಳು ಪ್ರೋಗ್ರಾಮ್ ನಡೆಸಿಕೊಡಲು ಹೋಗುತ್ತಾಳೆ. ಹೊರಗಡೆ ನಿಂತ ಭೂಪತಿ, ನಕ್ಷತ್ರ ಆರ್.ಜೆ ಸಖಿ ಅಂತ ಇಷ್ಟು ದಿನ ಈ ದಡ್ಡನಿಗೆ ಗೊತ್ತಾಗಲಿಲ್ವಾ ಎಂದುಕೊಂಡು ನಗುತ್ತಾನೆ. ಒಟ್ಟಿನಲ್ಲಿ ಈ ವಿಚಾರ ಭೂಪತಿ ರಿವೀಲ್ ಆಗಿ, ನಕ್ಷತ್ರ ಮೇಲೆ ಭೂಪತಿಗೆ ಪ್ರೀತಿ ಶುರುವಾಗಲಿದೆ. ಮುಂದಿನ ಸಂಚಿಕೆಗಳಲ್ಲಿ ಲವ್ ಸ್ಟೋರಿ ನಡೆಯುವುದು ಕನ್ಫರ್ಮ್. ವೀಕ್ಷಕರೆಲ್ಲರು ಈ ಹೊಸ ಲವ್ ಸ್ಟೋರಿ ನೋಡಲು ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಲೇಟ್ ಆಗಿ ಬಂದರು, ಸುಂದರಿಯೊಂದಿಗೆ ಖಡಕ್ ಎಂಟ್ರಿ ಕೊಟ್ಟ ಕೋಮಲ್: ಹೊಸ ಚಿತ್ರಕ್ಕೆ ನಟಿ ಯಾರು ಅಂತೇ ಗೊತ್ತೇ?
Comments are closed.