Neer Dose Karnataka
Take a fresh look at your lifestyle.

Kannada Astrology: ಅದೃಷ್ಟ ಕೊಡಲು ಆರಂಭಿಸಿದ ರಾಹು ದೇವ: ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ. ಮೂರು ರಾಶಿಗಳಿಗೆ ಹಿಂದೆಂದೂ ಕಾಣದ ಧನಲಾಭ. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳು ರಾಶಿಗೆ ಮತ್ತು ನಕ್ಷತ್ರಕ್ಕೆ ಸ್ಥಾನ ಬದಲಾವಣೆ ಮಾಡುವುದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗೆ ಶುಭಫಲ ಇನ್ನು ಕೆಲವು ರಾಶಿಗಳಿಗೆ ಅಶುಭಫಲ ಸಿಗುತ್ತದೆ. ಫೆಬ್ರವರಿ 9ರಂದು ರಾಹು ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ ಮಾಡಲಿದೆ, ನಕ್ಷತ್ರದ ಅಧಿಪತಿ ಕೇತು ಆಗಿದ್ದು, ಇದು ಒಳ್ಳೆಯ ಸ್ಥಿತಿ ಆಗಿದೆ. ಮತ್ತೊಂದು ಕಡೆ ಶನಿದೇವರ ಮೂರನೇ ದೃಷ್ಟಿ ರಾಹು ಗ್ರಹದ ಮೇಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ಮೂರು ರಾಶಿಗಳಿಗೆ ವಿಶೇಷವಾದ ಧನಲಾಭ ಹಾಗೂ ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ. ಹಾಗಿದ್ದಲ್ಲಿ ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ರಾಹು ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಿರುವುದು ನಿಮಗೆ ಶುಭ ನೀಡುತ್ತದೆ. ನಿಮ್ಮ ರಾಶಿಯ ಆದಾಯದ ಮನೆಯಲ್ಲಿ ರಾಹುವಿನ ಸಂಚಾರವಾಗಲಿದೆ. ಇದರಿಂದ ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಬೇರೆ ಬೇರೆ ಮೂಲಗಳಿಂದ ಹಣ ಗಳಿಸುತ್ತೀರಿ. ರಾಜಕೀಯದಲ್ಲಿ ಇರುವವರಿಗೆ ಪ್ರತಿಷ್ಠೆ ಸಿಗುತ್ತದೆ. ರಾಹು ಗ್ರಹದ ದೃಷ್ಟಿ ನಿಮ್ಮ ಮೇಲಿದ್ದು, ಸರ್ಕಾರದ ಗುತ್ತಿಗೆ ಕೆಲಸ ಅಥವಾ ಆಡಳಿತದ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಶೇರ್ ಮಾರ್ಕೆಟ್, ಬೆಟ್ಟಿಂಗ್ ಹಾಗೂ ಲಾಟರಿ ತೆಗೆದುಕೊಳ್ಳುವವರಿಗೆ ಲಾಭವಾಗುತ್ತದೆ. ಸಹೋದರರ ಜೊತೆಗೆ ಹೊಂದಾಣಿಕೆ ಚೆನ್ನಾಗಿರುತ್ತದೆ. ಇದನ್ನು ಓದಿ..Kannada Astrology: ಮಕರ ರಾಶಿಯಲ್ಲಿ ಸೃಷ್ಟಿಯಾಗುತ್ತಿದೆ ಬಲಿಷ್ಠ ರಾಜಯೋಗ: ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ? ಏನೇ ಮಾಡಿದರು ನೀವೇ ಕಿಂಗ್.

ಕರ್ಕಾಟಕ ರಾಶಿ :- ರಾಹು ಗ್ರಹದ ಅಶ್ವಿನಿ ನಕ್ಷತ್ರ ಪ್ರವೇಶ ನಿಮಗೆ ಒಳ್ಳೆಯದನ್ನು ಮಾಡುತ್ತದೆ, ಈ ರಾಶಿಯ 10ನೇ ಭಾವದಲ್ಲಿ ರಾಹುವಿನ ಸಂಚಾರ ನಡೆಯಲಿದೆ. ಈ ಸಮಯದಲ್ಲಿ ನಿಮಗೆ ಹೊಸ ಕೆಲಸಕ್ಕೆ ಅವಕಾಶ ಸಿಗಬಹುದು. ಹಾಗೆಯೇ ದೊಡ್ಡ ಜನರ ಸಂಪರ್ಕ ಸಿಗಬಹುದು. ತಂದೆಯ ಜೊತೆಗೆ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ. ಉದ್ಯಮಿಗಳಿಗೆ ಲಾಭ ಹೆಚ್ಚಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಜೊತೆಗೆ ಇನ್ಕ್ರಿಮೆಂಟ್ ಸಹ ಸಿಗುತ್ತದೆ. ಆಸ್ತಿ ವ್ಯವಹಾರದಲ್ಲಿ ನಿಮಗೆ ಲಾಭ ಸಿಗುತ್ತದೆ.

ಕನ್ಯಾ ರಾಶಿ :- ರಾಹು ಗ್ರಹವು ನಕ್ಷತ್ರದ ಸ್ಥಾನ ಬದಲಾವಣೆ ಮಾಡಿರುವುದರಿಂದ, ಈ ರಾಶಿಯವರಿಗೆ ಲಾಭವಾಗುತ್ತದೆ. ಕನ್ಯಾ ರಾಶಿಯ ಷಷ್ಟಮ ಮನೆಯಲ್ಲಿ ರಾಹು ಸಂಕ್ರಮಣ ನಡೆಯಲಿದೆ. ಹಾಗಾಗಿ ಈ ಸಮಯದಲ್ಲಿ ನಿಮಗೆ ಮನೆ ಮತ್ತು ಭೂಮಿ ವಿಚಾರದಲ್ಲಿ ಲಾಭವಾಗಬಹುದು. ಮದುವೆ ಆಗದೆ ಇರುವವರಿಗೆ ಕಂಕಣಬಲ ಕೂಡಿಬರಬಹುದು. ಪೂರ್ವಿಕರ ಆಸ್ತಿ ವಿಷಯದಲ್ಲಿ ಲಾಭ ಪಡೆಯುತ್ತೀರಿ. ವಿದೇಶಕ್ಕೆ ಹೋಗಬೇಕು ಎಂದುಕೊಂಡಿರುವವರ ಆಸೆ ನೆರವೇರುತ್ತದೆ. ಈ ಸಮಯದಲ್ಲಿ ಬ್ಯುಸಿನೆಸ್ ಮತ್ತು ಬೇರೆ ಕೆಲಸಕ್ಕೆ ಸಾಲ ತೆಗೆದುಕೊಳ್ಳಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ. ಈ ವೇಳೆ ನೀವು ಶೇರ್ ಮಾರ್ಕೆಟ್, ಬೆಟ್ಟಿಂಗ್, ಲಾಟರಿ ಇವುಗಳಲ್ಲಿ ಹಣ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಫೆಬ್ರವರಿ ತಿಂಗಳಿನಲ್ಲಿ ಈ ರಾಶಿಯವರು ಆಡಿದ್ದೇ ಆಟ; ಸೋಲುವ ಮತ್ತೆ ಇಲ್ಲ. ಪ್ರತಿ ಕೆಲಸದಲ್ಲಿಯೂ ಯಶಸ್ಸು ಖಂಡಿತಾ. ಯಾವ ರಾಶಿಗಳಿಗೆ ಗೊತ್ತೇ??

Comments are closed.