Neer Dose Karnataka
Take a fresh look at your lifestyle.

Kannada News: ಬಂಗಾರದಂತಹ ಭವಿಷ್ಯ ತನ್ನ ಕೈಯಾರೆ ಈ ಹುಡುಗಿ ಏನು ಮಾಡಿಕೊಂಡಿದ್ದಾಳೆ ಗೊತ್ತೇ?? ಯಾರಾದ್ರೂ ಈ ರೀತಿ ಮಾಡ್ತಾರಾ??

Kannada News: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯವರನ್ನು ಕಾಡುತ್ತಿರುವ ಒಂದು ಸಮಸ್ಯೆ ಅಂದ್ರೆ ಸ್ಟ್ರೆಸ್ ಮತ್ತು ಮಾನಸಿಕ ಖಿನ್ನತೆ ಎಂದೇ ಹೇಳಬಹುದು. ಇದಕ್ಕೆ ಸಿಲುಕಿದ ಹಲವರು ತಮ್ಮ ಉಸಿರನ್ನು ನಿಲ್ಲಿಸಿಕೊಳ್ಳುವವರೆಗು ಹೋಗುತ್ತಿದ್ದಾರೆ. ಈ ರೀತಿಯ ನಿರ್ಧಾರ ಮಾಡಲು ಕಾರಣಗಳು ಹಲವು, ಬಾಯ್ ಫ್ರೆಂಡ್ ಇಂದ ಆದ ಸಮಸ್ಯೆ, ಮನೆಯಲ್ಲಿ ಅಪ್ಪ ಅಮ್ಮ ಬೈದರು ಎಂದು, ಎಕ್ಸಾಂ ನಲ್ಲಿ ಕಡಿಮೆ ಮಾರ್ಕ್ಸ್ ಬಂತು ಎಂದು, ಹೀಗೆ ಹಲವು ಕಾರಣಕ್ಕೆ ಯುವಕ ಯುವತಿಯರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇಂಥದ್ದೇ ಒಂದ್ ಘಟನೆ ಇತ್ತೀಚೆಗೆ ನಡೆದಿದ್ದು, ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳುವಂಥದ್ದು ಈ ಹುಡುಗಿಗೆಗೆ ಏನಾಯಿತು ಎಂದು ತಿಳಿಸುತ್ತೇವೆ ನೋಡಿ..

ವಾರಂಗಲ್ ಜಿಲ್ಲೆಯ ಸೂರಾರಂ ಎನ್ನುವ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ಗ್ರಾಮದಲ್ಲಿ ವಾಸ ಮಾಡುವ ರಮೇಶ್ ಮತ್ತು ಮಮತಾ ದಂಪತಿಗೆ ಮದುವೆಯಾದ ಕೆಲವು ವರ್ಷಗಳಲ್ಲಿ ಮಕ್ಕಳು ಜನಿಸಿದರು. ಇವರ ಮಗಳ ಹೆಸರು ಹಾಸಿನಿ, 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಚೆನ್ನಾಗಿಯೇ ಓದುತ್ತಿದ್ದ ಈ ಹುಡುಗಿ, ಇತ್ತೀಚೆಗೆ ಶಾಲೆಯಲಿ ಟೀಚರ್ ಕೊಟ್ಟ ಟೆಸ್ಟ್ ನಲ್ಲಿ ಕಡಿಮೆ ಮಾರ್ಕ್ಸ್ ತೆಗೆದುಕೊಂಡ ಕಾರಣಕ್ಕೆ ಮಾನಸಿಕವಾಗಿ ಕುಗ್ಗಿದ್ದಳು. ಸಂಕ್ರಾಂತಿ ಹಬ್ಬಕ್ಕಾಗಿ ಹಾಸಿನಿ ಮನೆಗೆ ಬಂದು, ಹಬ್ಬ ಆಚರಿಸಿ ನಂತರ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಳು. ಆಗ ಹಾಸಿನಿ ತಂದೆ ತಾಯಿ ಸ್ವಲ್ಪ ಗದರಿ ಶಾಲೆಗೆ ಹೋಗುವಂತೆ ಹೇಳಿದ್ದಾರೆ. ಅದಕ್ಕೆ ಮನನೊಂದ ಹಾಸಿನಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ರೀತಿ ಮಾಡಿಕೊಂಡಿದ್ದಾಳೆ. ಇದನ್ನು ಓದಿ..Kannada News: ದೇಶವನ್ನೇ ಶೇಕ್ ಶೇಕ್ ಮಾಡುವಂತೆ ಹಾಡು ಹೇಳುವ ಮಂಗಲಿ, ಒಂದು ಹಾಡಿಗೆ ಪಡೆಯುವ ಸಂಭಾವನೆ ಕೇಳಿದರೆ, ನೀವೇ ಶೇಕ್ ಆಗ್ತೀರಾ.

ಆಕೆಯನ್ನು ನೋಡಿದ ತಕ್ಷಣವೇ ತಂದೆ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹಾಸಿನಿಯನ್ನು ನೋಡಿದ ವೈದ್ಯರು ಆಕೆ ಅದಾಗಲೇ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿಸಿದ್ದಾರೆ. ಹಾಸಿನಿಯ ತಂದೆ ತಾಯಿ ಮಗಳು ಈ ರೀತಿ ಮಾಡಿಕೊಂಡಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಪೊಲೀಸರು ಈ ಘಟನೆ ಬಗ್ಗೆ ಪರಿಶೀಲನೆ ನಡೆಸಿ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಹೇಳಿ, ಬೇರೆ ರೀತಿಯಲ್ಲಿ ಸಹ ತನಿಖೆ ನಡೆಸುತ್ತಿದ್ದಾರೆ. ಅವರ ಗ್ರಾಮದಲ್ಲಿ ಈಗ ಈ ವಿಚಾರ ಎಲ್ಲರಿಗೂ ಬಹಳ ನೋವು ತಂದಿದೆ.. ಇದನ್ನು ಓದಿ..Kannada News: ಒಂಟಿ ಕಾಲಲ್ಲಿಯೇ ದೊಣ್ಣೆ ಏಟಿಗೂ ಅಲುಗಾಡದ ರಾಮಾಚಾರಿ; ಸೀರಿಯಲ್ ನೋಡಿದ ಪ್ರತಿಯೊಬ್ಬರೂ ಹೇಳಿದ್ದೇನು ಗೊತ್ತೇ?

Comments are closed.