Neer Dose Karnataka
Take a fresh look at your lifestyle.

Health Tips: ಹೃದಯದ ಸಮಸ್ಯೆಗಳು ಬರಬರಾದು ಎಂದರೆ, ಅಡುಗೆ ಎಣ್ಣೆಯಲ್ಲಿ ಬದಲಾವಣೆ ಮಾಡಿ. ಈ ಎಣ್ಣೆಯನ್ನು ಬಳಸಿದರೆ ಹೃದಯದ ಸಮಸ್ಯೆ ಬರಲ್ಲ.

Health Tips: ಪ್ರತಿದಿನ ಅಡುಗೆ ಮಾಡಲು ಎಣ್ಣೆ ಬೇಕೇ ಬೇಕು. ಸಾಮಾನ್ಯವಾಗಿ ಮನೆಗಳಲ್ಲಿ ಸಾಸಿವೆ ಎಣ್ಣೆ, ಬಿಳಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಹೀಗೆ ಹಲವು ರೀತಿಯ ಎಣ್ಣೆಗಳನ್ನು ಬಳಸುತ್ತೇವೆ. ಆಲಿವ್ ಆಯ್ಲ್ ಅನ್ನು ಯುರೋಪಿಯನ್ ಅಡುಗೆಗಳಲ್ಲಿ ಹೆಚ್ಚು ಬಳಸುತ್ತಾರೆ. ಬೇಕಿಂಗ್, ಫ್ರೈಯಿಂಗ್, ಸಲಾಡ್ ಇದಕ್ಕೆಲ್ಲ ಆಲಿವ್ ಆಯ್ಲ್ ಬೇಕಾಗುತ್ತದೆ. ವರ್ಜಿನ್ ಆಲಿವ್ ಆಯ್ಲ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತಡ್ ಎಂದು ಹೇಳುತ್ತಾರೆ. ಅದರಲ್ಲಿ ಉತ್ಕರ್ಶಣ ನಿರೋಧಕ ಶಕ್ತಿ ಇದೆ, ಕೊಲೆಸ್ಟ್ರಾಲ್ ಇರುವವರ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.

ಆಲಿವ್ ಆಯ್ಲ್ ಅನ್ನು ಬಳಸುವುದರಿಂದ ದೇಹದಲ್ಲಿ ಬೊಜ್ಜು ಮತ್ತು ಟೈಪ್ 2 ಡೈಯಾಬಿಟಿಸ್ ತಡೆಗಟ್ಟಬಹುದು. ಮತ್ತೊಂದು ಅವೊಕಾಡೊ ಎಣ್ಣೆ, ಇದಕ್ಕೆ ಅದರದ್ದೇ ಆದ ರುಚಿ ಇಲ್ಲ, ಇದು ಆಲಿವ್ ಆಯ್ಲ್ ನ ಮತ್ತೊಂದು ರೂಪ ಎಂದು ಹೇಳಲಾಗುತ್ತದೆ. ಈ ಎಣ್ಣೆಯ ಹೆಚ್ಚಿನ ಬ್ಲಡ್ ಪ್ರೆಶರ್ ಅನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ಕೆಟ್ಟ ಕೊಲೆಸ್ಟ್ರಾಲ್ ಮತ್ತು LDL ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ. ಹಾಗೆಯೇ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಹೆಚ್.ಡಿ.ಎಲ್ ಉತ್ಪಾದನೆ ಹೆಚ್ಚಿಸುತ್ತದೆ. ಮತ್ತೊಂದು ಎಳ್ಳೆಣ್ಣೆ, ಇದನ್ನು ಹೆಚ್ಚಾಗಿ ಬಳಸುತ್ತಾರೆ, ಇದರಲ್ಲಿ ಬಾದಾಮಿ ವಾಸನೆ ಗಮನಿಸಬಹುದು. ಈ ಎಣ್ಣೆ ದೇಹದಲ್ಲಿನ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಡುತ್ತದೆ. ಹಾಗೆಯೇ ಹೃದಯದ ಆರೋಗ್ಯವನ್ನು ಚೆನ್ನಾಗಿರಿಸುತ್ತದೆ. ಇದನ್ನು ಓದಿ..Health Tips: ಕೂದಲು ಉದುರುವುದು ನಿಲ್ಲಬೇಕು, ಬೋಳು ತಲೆಯಲ್ಲಿಯೂ ಹೋದ ಕೂಡ ಹುಟ್ಟಬೇಕು ಎರಡಕ್ಕೂ ಕರ್ಪೂರವೇ ಮದ್ದು. ಏನು ಮಾಡ್ಬೇಕು ಗೊತ್ತೇ??

ಮತ್ತೊಂದು ಕಡಲೆಕಾಯಿ ಎಣ್ಣೆ, ಇದರ ಬೆಲೆ ಕಡಿಮೆ ಈ ಎಣ್ಣೆಯಿಂದ ಪೌಷ್ಟಿಕಾಂಶ ಹೆಚ್ಚಾಗುತ್ತದೆ. ತರಕಾರಿ ಬೇಯಿಸುವುದಕ್ಕೆ ಈ ಎಣ್ಣೆ ಹೆಚ್ಚು ಉಪಯುಕ್ತ. ಆದರೆ ಕಡಲೆಕಾಯಿ ಎಣ್ಣೆ ಹೆಚ್ಚು ದಿನಗಳು ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಈ ಎಣ್ಣೆಯಲ್ಲಿ ಹೈಡ್ರೋಜಿನ್ ಸೇರಿಸಿರುತ್ತಾರೆ. ಹಾಗಾಗಿ, ಎಣ್ಣೆಯಲ್ಲಿ ಅನಾರೋಗ್ಯಕರ ಟ್ರಾನ್ಸ್ ಕೊಬ್ಬು ಹೆಚ್ಚಾಗುತ್ತದೆ. ಸೋಯಾಬೀನ್ ಎಣ್ಣೆಯಲ್ಲಿ ಒಮೆಗಾ2 ಫ್ಯಾಟ್ ಇರುತ್ತದೆ, ಇದನ್ನು ಬೇಕಿಂಗ್ ಸಾಸ್ ತಯಾರಿಸಲು, ಸಲಾಡ್ ಗಳಿಗೆ ಬಳಸುತ್ತಾರೆ. ಇದರಲ್ಲಿರುವ ಅಂಶಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಸೋಯಾಬೀನ್ ಎಣ್ಣೆ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯ ಚೆನ್ನಾಗಿರುವ ಹಾಗೆ ಮಾಡುತ್ತದೆ. ಇದನ್ನು ಓದಿ..Health Tips: ಯಪ್ಪಾ ನೀವು ಯಾವಾಗಲು ಲಟಕ್ ಲಟಕ್ ಅಂತ ನಟ್ಟಿಗೆ ತೆಗೆಯುತ್ತೀರಾ? ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತೇ??

Comments are closed.