Kannada News: ತೆಲುಗಿನಲ್ಲಿ ಭುಗಿಲೆದ್ದ ವಿವಾದ: ಬಾಲಯ್ಯಗೆ ತಲೆ ದಿಮ್ ಅನ್ನುವಂತೆ ಎದುರೇಟು ಕೊಟ್ಟ ನಾಗಾರ್ಜುನ. ನಾಲಿಗೆ ಹರಿಬಿಟ್ಟಿದ್ದ ಬಾಲಯ್ಯಗೆ ಬಿಗ್ ಶಾಕ್.
Kannada News: ಸೀನಿಯರ್ ಎನ್ಟಿಆರ್ (NTR) ಅವರ ಮಗ ಬಾಲಕೃಷ್ಣ (Balakrishna) ಅವರು ತೆಲುಗು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಬಾಲಯ್ಯ (Balayya) ಅವರು ಎಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೋ, ಅದೇ ರೀತಿ ಅವರು ಕೆಲವೊಮ್ಮೆ ಮಾತನಾಡುವ ಮಾತುಗಳಿಂದ ವಿವಾದಕ್ಕೂ ಸಿಲುಕಿಕೊಳ್ಳುತ್ತಾರೆ. ಇತ್ತೀಚೆಗೆ ಇವರು ಅಭಿನಯಿಸಿದ ವೀರಸಿಂಹ ರೆಡ್ಡಿ ಸಿನಿಮಾ ಬಿಡುಗಡೆಯಾಗಿ ಹಿಟ್ ಎನ್ನಿಸಿಕೊಂಡಿದ್ದು, ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಬಾಲಯ್ಯ ಅವರು ಮಾತನಾಡುವಾಗ, ಅಕ್ಕಿನೇನಿ ನಾಗೇಶ್ವರ್ ರಾವ್ (Akkineni Nageshwar Rao) ಅವರ ಬಗ್ಗೆ ಬಳಸಿದ ಒಂದೆರಡು ಪದಗಳು ಅಕ್ಕಿನೇನಿ ಕುಟುಂಬದ ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಬಾಲಯ್ಯ ಅವರು ಆ ರೀತಿ ಮಾತನಾಡಿದ್ದಕ್ಕೆ ನೆಟ್ಟಿಗರ ವಲಯದಲ್ಲಿ ಟೀಕೆಗೆ ಒಳಗಾಗಿದ್ದರು. ಅಕ್ಕಿನೇನಿ ಕುಟುಂಬದ ನಾಗಚೈತನ್ಯ (Nagachaitanya) ಮತ್ತು ಅಖಿಲ್ ಅಕ್ಕಿನೇನಿ (Akhil Akkineni) ಇಬ್ಬರು ಕೂಡ, ತೆಲುಗು ಚಿತ್ರರಂಗದ ಆಧಾರ್ ಸ್ಥಂಬವಾಗಿರುವ, ಬಹಳಷ್ಟು ಕೊಡುಗೆ ನೀಡಿರುವ ಎ.ಎನ್.ಆರ್ (ANR), ಎನ್ಟಿಆರ್ ಮತ್ತು ಎಸ್.ವಿ.ಆರ್ (SVR) ಈ ಮೂವರಿಗೆ ಅವಮಾನ ಆಗುವ ಹಾಗೆ ಮಾತನಾಡಿದರೆ, ಅದು ನಮಗೆ ನಾವೇ ಅವಮಾನ ಮಾಡಿಕೊಂಡ ಹಾಗೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ನಾಗಾರ್ಜುನ (Nagarjuna) ಅವರು ಈ ವಿಚಾರವಾಗಿ ಗಂಭೀರ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.. ಇದನ್ನು ಓದಿ..Kannada News: ರವಿಚಂದ್ರನ್ ಹೊಸ ಸಿನಿಮಾದಲ್ಲಿ ನಾಯಿಗೆ ಕೊಡುತ್ತಿರುವ ಸಂಭಾವನೆ ತಿಳಿದರೆ, ನೀವು ನಾಯಿ ತಂದು ಬೆಳೆಸಿ ಟ್ರೈನಿಂಗ್ ಕೊಡ್ತೀರಾ. ಎಷ್ಟು ಲಕ್ಷ ಗೊತ್ತೇ??
ನಾಗಾರ್ಜುನ ಅವರ ತಾಯಿಯ ಹೆಸರಿನಲ್ಲಿ ಕಟ್ಟಿಸಿರುವ ಅನ್ನಪೂರ್ಣ ಸ್ಟುಡಿಯೋಸ್ (Annapoorna Studios) ನಲ್ಲೇ ಬಾಲಯ್ಯ ಅವರ ಅನ್ ಸ್ಟಾಪೆಬಲ್ ಶೋ ಚಿತ್ರೀಕರಣ ಇಷ್ಟು ದಿನಗಳ ಕಾಲ ನಡೆಯುತ್ತಿತ್ತು, ಆದರೆ ಇನ್ನುಮುಂದೆ ಬಾಲಯ್ಯ ಅವರಿಗೆ ಅನ್ನಪೂರ್ಣ ಸ್ಟುಡಿಯೋಸ್ ಗೆ ಎಂಟ್ರಿ ಇಲ್ಲ ಎಂದು ಹೇಳಿದ್ದಾರಂತೆ ನಾಗಾರ್ಜುನ ಅವರು, ಬಾಲಯ್ಯ ಅವರು ಕ್ಷಮೆ ಕೇಳುವ ವರೆಗು ಅವರು ಅನ್ನಪೂರ್ಣ ಸ್ಟುಡಿಯೋಸ್ ಗೆ ಬರುವ ಹಾಗಿಲ್ಲ ಎಂದು ಹೇಳಿದ್ದಾರಂತೆ. ಈ ವಿಚಾರದ ಬಗ್ಗೆ ಅಲ್ಲು ಅರವಿಂದ್ ಅವರಿಗೂ ನಾಗಾರ್ಜುನ ಅವರು ತಿಳಿಸಿದ್ದು, ಬಾಲಯ್ಯ ಅವರು ಈ ವಿಚಾರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಶೇಕ್ ಮಾಡಿದ ಹಿರಿಯ ನಟ ಪ್ರಗತಿ: ಜೊತೆ ಮಲಗಿದರೆ ಚಾನ್ಸ್ ಕೊಡ್ತೇನೆ ಎಂದ ಹೀರೋ: ಈ ವಯಸಿನಲ್ಲಿ ನಟಿ ಹೇಳಿದ್ದೇನು ಗೊತ್ತೇ??
Comments are closed.