Kannada News: ದಿಡೀರ್ ಎಂದು ಬದಲಾದ ನಕ್ಷತ್ರ: ಇದೇಗೆ ಸಾಧ್ಯ ಎಂದ ನೆಟ್ಟಿಗರು. ಆದರೂ ಇದು ಚೆನ್ನಾಗಿದೆ ಎಂದದ್ದು ಯಾಕೆ ಗೊತ್ತೇ??
Kannada News: ಕನ್ನಡ ಕಿರುತೆರೆಯಲ್ಲಿ ಒಂದು ರೀತಿಯ ವಿಭಿನ್ನವಾದ ಕಥೆ ಹೇಳುತ್ತಿರುವುದು ಲಕ್ಷಣ ಧಾರವಾಹಿ ಎಂದರೆ ತಪ್ಪಾಗುವುದಿಲ್ಲ. ಈ ಧಾರವಾಹಿಯಲ್ಲಿ ಬೆಳ್ಳಗಿರುವವರೆಲ್ಲ ಒಳ್ಳೆಯವರಲ್ಲ, ಅದೇ ರೀತಿ ಕಪ್ಪಾಗಿರಿವವರು ಕೆಟ್ಟವರಲ್ಲ ಎನ್ನುವ ನೀತಿಯನ್ನು ತಿಳಿಸಲಾಗುತ್ತಿದೆ. ಸಿನಿಮಾ ಅಥವಾ ಧಾರವಾಹಿ ಹೀರೋಯಿನ್ ಎಂದರೆ ತೆಳ್ಳಗೆ ಬೆಳ್ಳಗೆ ಇರಬೇಕು ಎನ್ನುವಾಗ, ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರ ಪಾತ್ರ ಕಪ್ಪಗೆ ಇತ್ತು,. ಕಥೆಯೇ ಆ ರೀತಿ ಇದೆ. ಈ ಕಥೆ ವೀಕ್ಷಕರಿಗೂ ಕೂಡ ಇಷ್ಟವಾಗಿದೆ. ಕಪ್ಪು ಇರುವ ಹುಡುಗಿಯರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದೆ ಎಂದರೆ ತಪ್ಪಲ್ಲ.
ಧಾರವಾಹಿ ಈಗ ಬಹಳ ಮುಖ್ಯವಾದ ಹಂತದಲ್ಲಿದೆ, ಶ್ವೇತಾಳ ಬಣ್ಣ ಈಗ ಎಲ್ಲರ ಎದುರು ಬಯಲಾಗುತ್ತಿದ್ದು, ಶಕುಂತಲಾದೇವಿ ನೀಡಿದ ಟಾಸ್ಕ್ ನಲ್ಲಿ ಸೋತು, ನಕ್ಷತ್ರಳನ್ನು ಮನೆಯ ಸೊಸೆ ಎಂದು ಒಪ್ಪಿಕೊಂಡಿದ್ದಾರೆ ಶಕುಂತಲಾ ದೇವಿ. ಇತ್ತ ಕಡೆ ತಾನು ತುಂಬಾ ಇಷ್ಟಪಡುತ್ತಿದ್ದ ಆರ್.ಜೆ ಸಖಿ ಶ್ವೇತಾ ಎಂದು ಭೂಪತಿ ಅಂದುಕೊಂಡಿದ್ದನು. ಆದರೆ ಅದು ಶ್ವೇತಾ ಅಲ್ಲ, ನಕ್ಷತ್ರ ಎಂದು ಭೂಪತಿಗೆ ಗೊತ್ತಾಗಿದೆ. ಈ ಘಟನೆ ನಡೆದಾಗಿನಿಂದ ಭೂಪತಿ ಶ್ವೇತಾಳನ್ನು ನೋಡುವ ರೀತಿಯೇ ಬದಲಾಗಿದೆ. ಭೂಪತಿಯಲ್ಲಿ ನಕ್ಷತ್ರ ಮೇಲೆ ಪ್ರೀತಿ ಶುರುವಾಗಿದೆ. ಇದನ್ನು ಓದಿ..Kannada News: ಸೋತಿರೋದು ನೀವು ನಾನಲ್ಲ: ಮನೆ ಮಾರಿಕೊಂಡ, ಏನು ಗೊತ್ತಿಲ್ಲ ಎಂದವರಿಗೆ ರವಿಚಂದ್ರನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??
ಈ ಸಮಯದಲ್ಲೂ ನಕ್ಷತ್ರ ಲುಕ್ಸ್ ಕೂಡ ಬದಲಾಗಿರುವುದನ್ನು ವೀಕ್ಷಕರು ಗಮನಿಸಿದ್ದಾರೆ. ಮೊದಲಿದ್ದ ಸ್ಕಿನ್ ಟೋನ್ ಹಾಗೂ ಈಗ ಕಾಣಿಸುತ್ತಿರುವ ಸ್ಕಿನ್ ಟೋನ್ ನಲ್ಲಿ ಭಾರಿ ಬದಲಾವಣೆ ಇದೆ, ಮೊದಲು ಡಲ್ ಆಗಿರುತ್ತಿದ್ದ ಸ್ಕಿನ್ ಟೋನ್ ಈಗ ಚಾಕೊಲೇಟ್ ಬಣ್ಣವಾಗಿ ಕಾಣುತ್ತಿದೆ ಎನ್ನುತ್ತಿದ್ದಾರೆ ಕಿರುತೆರೆ ವೀಕ್ಷಕರು. ಹಾಗೆಯೇ ನಕ್ಷತ್ರ ಅವರ ಈ ಹೊಸ ಲುಕ್ ಚೆನ್ನಾಗಿದೆ, ಇದೇ ಲುಕ್ ಮುಂದುವರೆಸಿ ಅವರಿಗೆ ಚೆನ್ನಾಗಿ ಕಾಣುತ್ತದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಧಾರವಾಹಿಯಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಯನ್ನು ಗುರುತಿಸುವ ವೀಕ್ಷಕರು ನಕ್ಷತ್ರ ಪಾತ್ರದ ಮೇಕಪ್ ಬದಲಾವಣೆಯನ್ನು ಇಷ್ಟಪಟ್ಟಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ರೇಣುಕಾ ಎಲ್ಲಮ್ಮ ಧಾರವಾಹಿ ನಿಲ್ಲಿಸಲು ಕೇಳಿ ಬಂತು ಆಗ್ರಹ. ಯಾಕೆ ಅಂತೇ ಗೊತ್ತೆ??
Comments are closed.