Neer Dose Karnataka
Take a fresh look at your lifestyle.

Kannada News: ದಿಡೀರ್ ಎಂದು ರೇಣುಕಾ ಎಲ್ಲಮ್ಮ ಧಾರವಾಹಿ ನಿಲ್ಲಿಸಲು ಕೇಳಿ ಬಂತು ಆಗ್ರಹ. ಯಾಕೆ ಅಂತೇ ಗೊತ್ತೆ??

Kannada News: ಇತ್ತೀಚೆಗೆ ಕನ್ನಡ ಕಿರಿತೆರೆಯಲ್ಲಿ ಯಲ್ಲಮ್ಮತಾಯಿಯ ಕಥೆಯಾದ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿ ಶುರುವಾಗಿದೆ. ಈ ಭಕ್ತಿಪೂರ್ವ ಧಾರವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ಈಗ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿಯನ್ನು ನಿಲ್ಲಿಸಬೇಕು ಎಂದು ಆಗ್ರಹಗಳು ಕೇಳಿಬರುತ್ತಿದೆ. ಅದಕ್ಕೆ ಒಂದು ಪ್ರಮುಖವಾದ ಕಾರಣ ಕೂಡ ನೀಡಲಾಗಿದೆ, ಈ ಧಾರವಾಹಿಯಲ್ಲಿ ಕಥೆಯನ್ನು ಬದಲಾಯಿಸಲಾಗಿದೆ, ಕ್ಷತ್ರಿಯ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರತಿಭಟನೆ ಕೂಡ ಮಾಡಲಾಗಿದೆ. ಕ್ಷತ್ರೀಯ ಸಮಾಜದ ಶ್ರೀ ಕಾರ್ತವೀರ ಸಹಸ್ರಾರ್ಜುನ ಮಹಾರಾಜ ಅವರನ್ನು ದಾನವರ ಹಾಗೆ ತೋರಿಸಲಾಗಿದೆಯಂತೆ, ಇದು ಆ ಸಮುದಾಯವರಿಗೆ ಅಪಮಾನ ಆಗಿದೆ. ಈ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ಲಾರಸಾ ಆರ್ ಕಾಟ್ವೆ ಅವರು ಮಾತನಾಡಿ, “ಈ ಧಾರಾವಾಹಿಯಲ್ಲಿ ನಮ್ಮ ಸಮಾಜದ ಕುಲಪುರುಷ ಆಗಿರುವ ಸಹಸ್ರಾರ್ಜುನ ಮಹಾರಾಜ ಅವರನ್ನು ರಾಕ್ಷಸನ ರೀತಿಯಲ್ಲಿ ತೋರಿಸಲಾಗಿದೆ. ಅವರು ರಾಕ್ಷಸನಲ್ಲ, ಸಪ್ತಚಕ್ರವರ್ತಿಗಳಲ್ಲಿ ಅವರು ಕೂಡ ಒಬ್ಬರಾಗಿದ್ದವರು. ನಮ್ಮ ಧರ್ಮದಲ್ಲಿರುವ 18 ಪುರಣಗಳಲ್ಲಿ 11 ಪುರಾಣಗಳಲ್ಲಿ ನಮ್ಮ ಮಹಾರಾಜರ ಬಗ್ಗೆ ಉಲ್ಲೇಖ ಇದೆ. ಮಹಾವಿಷ್ಣುವಿನ 24 ಅವತಾರಗಳಲ್ಲಿ, ಸುದರ್ಶನ ಚಕ್ರದ ಅಂಶ ಅವತಾರಿಯಾಗಿ ಜನಿಸಿದವರು. ಇದನ್ನು ಓದಿ..Kannada News: ಬೇಡ ಬೇಡ ಎಂದು ಹೇಳಿದರು ಕೇಳದೆ ಗೆರೆ ದಾಟಿಯೇ ಬಿಟ್ಟ ಶ್ರುತಿ ಹಾಸನ್: ಶ್ರುತಿ ಮಾಡಿದ ಮಾಡಬಾರದ ಕೆಲಸ ಏನು ಗೊತ್ತೇ??

ಸಹಸ್ರಾರ್ಜುನ ಮಹಾರಾಜ ಅವರು ಆ ಸಮಯದಲ್ಲಿ ಬ್ರಹ್ಮಾಂಡದಲ್ಲಿ ರಾಕ್ಷಸರ ತೊಂದರೆ ಇದ್ದಾಗ, ಋಷಿಗಳು, ಸಾದು ಸಂತರು, ಮಹಾತ್ಮರು, ದೀನ ದಲಿತರ ರಕ್ಷಣೆಗೆ, ಈ ಪ್ರಪಂಚದ ಶಾಂತಿಗಾಗಿ ದತ್ತಾತ್ರೇಯ ಗುರುಗಳು, ಹಾಗೂ ಶ್ರೀ ಜಗನ್ನಾಥ ಗುರುಗಳ ಆಶೀರ್ವಾದದಿಂದ ಅವರು ಜನಿಸಿದರು. ಆಗಿನಿಂದ ಈಗಿನವರೆಗು ಅವರು ಲೀನವಾದ ಶಿವಲಿಂಗದ ದೇವಸ್ಥಾನ ನೋಡಬಹುದು. ಅದೊಂದು ಪುಣ್ಯ ಸ್ಥಳ ಆಗಿದೆ. ಈ ದೇವಸ್ಥಾನವನ್ನು ಶ್ರೀ ರಾಜ ರಾಜೇಶ್ವರಿ ದೇವಸ್ಥಾನ ಎಂದು ಕರೆಯುತ್ತಾರೆ, ಇಲ್ಲಿ ಶುದ್ಧ ತುಪ್ಪದಿಂದ ಬರೋಬ್ಬರಿ 11 ದೀಪಗಳು ಹಲವು ಶತಮಾನಗಳಿಂದ ಉರಿಯುತ್ತಲೇ ಇದೆ. ಅವರು ನಮ್ಮ ಕುಲದೈವ ಎಂದು ಹೇಳೋದಕ್ಕೆ ನಮಗೆ ಹೆಮ್ಮ ಇದೆ ಅಂಥವರನ್ನು ದಾನವರ ಹಾಗೆ ತೋರಿಸಿರುವುದು ಒಳ್ಳೆಯದಲ್ಲ. ಈ ಧಾರವಾಹಿಯನ್ನು ನಿಲ್ಲಿಸಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Kannada News: ಸೋತಿರೋದು ನೀವು ನಾನಲ್ಲ: ಮನೆ ಮಾರಿಕೊಂಡ, ಏನು ಗೊತ್ತಿಲ್ಲ ಎಂದವರಿಗೆ ರವಿಚಂದ್ರನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??

Comments are closed.