Neer Dose Karnataka
Take a fresh look at your lifestyle.

Kannada News: ಸೋತಿರೋದು ನೀವು ನಾನಲ್ಲ: ಮನೆ ಮಾರಿಕೊಂಡ, ಏನು ಗೊತ್ತಿಲ್ಲ ಎಂದವರಿಗೆ ರವಿಚಂದ್ರನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??

207

Kannada News: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಹಳ ಕಷ್ಟದಲ್ಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು, ರವಿಚಂದ್ರನ್ ಅವರು ತಮ್ಮ ತಂದೆಯ ಕನಸಿನ ಮನೆಯನ್ನು ಮಾರಿ ಬೇರೆ ಮನೆಗೆ ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಟಿವಿ ಚಾನೆಲ್ ಕಾರ್ಯಕ್ರಮ ಒಂದರಲ್ಲಿ ತಾವು ಮನೆಯಿಂದ ಹೊರಬಂದಿರುವ ಬಗ್ಗೆ ರವಿಚಂದ್ರನ್ ಅವರು ಹೇಳಿಕೊಂಡಿದ್ದರು. ಅದೇ ವಿಚಾರವಾಗಿ ಹಲವು ಸುದ್ದಿಗಳು ಸಹ ಕೇಳಿಬಂದಿದ್ದವು.

ರಾವಿಚಂದ್ರನ್ ಅವರಿಗೆ ಅವರಿವರು ಸಹಾಯ ಮಾಡಿದರು ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಅವರು ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿ ಅದೆಲ್ಲವೂ ಸುಳ್ಳು ಎಂದು ಹೇಳಿದ್ದರು. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ರವಿಚಂದ್ರನ್ ಅವರು, ಇತ್ತೀಚೆಗೆ ಒಂದು ಒಳ್ಳೆಯ ಸಾಮಾಜಿಕ ಕಾರ್ಯಕ್ರಮಕ್ಕೆ ಬಂದಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ಸೋತು ಹೋಗಿದ್ದಾರೆ, ಮನೆ ಮಾರಿಕೊಂಡಿದ್ದಾರೆ ಎಂದೆಲ್ಲಾ ಹೇಳಿದವರಿಗೆ ಸರಿಯಾದ ಉತ್ತರ ನೀಡಿದ್ದಾರೆ. ಇದನ್ನು ಓದಿ..Kannada News: ಪವಿತ್ರ ಲೋಕೇಶ್ ರವರು ದಿಡೀರ್ ಎಂದು ಸುಚೇಂದ್ರ ಪ್ರಸಾದ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? ಶಾಕ್ ಆದ ಜನತೆ.

ವೇದಿಕೆ ಮೇಲೆ ಮಾತನಾಡಿದ ರವಿಚಂದ್ರನ್ ಅವರು.. 40 ವರ್ಷದಿಂದ ನಾನು ಚಿತ್ರರಂಗದಲ್ಲಿ ಇದ್ದೀನಿ. ಈಗಿನ ನಿರ್ದೇಶಕರು ನಮಗೆ ಡೈಲಾಗ್ ಕೊಡ್ತಾರೆ, ಈ ಡೈಲಾಗ್ ಚೆನ್ನಾಗಿಲ್ಲ ರೀ ಅಂದ್ರೆ ನಿಮಗೆ ಗೊತ್ತಿಲ್ಲ ಸರ್, ಅದೇ ಡೈಲಾಗ್ ಹೇಳಿ ಅಂತಾರೆ.. 40 ವರ್ಷ ಚಿತ್ರರಂಗದಲ್ಲಿದ್ದು, ಈಗಿನ ಪೀಳಿಗೆಯವರಿಗೆ ಹೇಗಿದ್ರೆ ಇಷ್ಟ ಆಗುತ್ತೆ ಅಂತ ನನಗೆ ಗೊತ್ತಿಲ್ವ.. ಇಷ್ಟು ವರ್ಷ ನನಗೆ ಮಾಡೋಕೆ ಬರದೆ ಇದ್ದದ್ದು ಅಂದ್ರೆ ಅದು ವ್ಯವಹಾರ. ನನಗೆ ಹಣ ಅಂದ್ರೆ ಏನು ಅಂತ ಗೊತ್ತಿಲ್ಲ, ವ್ಯವಹಾರ ಅಂದ್ರೆ ಏನು ಅಂತ ಗೊತ್ತಿಲ್ಲ.. ನನಗೆ ಗೊತ್ತಿದ್ದಿದ್ದು ಒಂದೇ, ಅದು ಪ್ರೀತಿ.. ಕೆಲವರು ರವಿಚಂದ್ರನ್ ಸೋತು ಹೋದ ಅಂತ ಹೇಳ್ತಿದ್ದಾರೆ. ಸೋತಿರೋದು ನಾನಲ್ಲ ನೀವು. ನನಗೆ ಗೊತ್ತಿರೋದು ಒಂದೇ ಸಿನಿಮಾ ಮಾಡೋದು, ನಿಮ್ಮನ್ನೆಲ್ಲ ಸಂತೋಷ ಪಡಿಸೋದು.. ನಾನು ಗೆದ್ರೆ ಅದು ನಿಮ್ಮ ಗೆಲುವೆ.. ಎಂದು ಹೇಳಿದ್ದಾರೆ ನಟ ರವಿಚಂದ್ರನ್. ಇದನ್ನು ಓದಿ..Kannada News: ಬೇಡ ಬೇಡ ಎಂದು ಹೇಳಿದರು ಕೇಳದೆ ಗೆರೆ ದಾಟಿಯೇ ಬಿಟ್ಟ ಶ್ರುತಿ ಹಾಸನ್: ಶ್ರುತಿ ಮಾಡಿದ ಮಾಡಬಾರದ ಕೆಲಸ ಏನು ಗೊತ್ತೇ??

Leave A Reply

Your email address will not be published.