Neer Dose Karnataka
Take a fresh look at your lifestyle.

Kannada News: ಅಂಬಾನಿ ಸಂಸ್ಥೆಯೇ ಕೊಡುತ್ತದೆ ವಿದ್ಯಾರ್ಥಿ ವೇತನ; ಬರೋಬ್ಬರಿ 2 ಲಕ್ಷದ ವರೆಗೂ ವಿದ್ಯಾರ್ಥಿ ವೇತನ ಪಡೆಯುವುದು ಹೇಗೆ ಗೊತ್ತೇ??

Kannada News: ಪ್ರತಿಭೆ ಇದ್ದು ಹಣಕಾಸಿನ ವಿಚಾರದಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯ ಆಗದೆ ಇರುವ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ಸ್ ಸಂಸ್ಥೆ ಸ್ಕಾಲರ್ಶಿಪ್ ನೀಡಲಿದೆ. ಈ ಸಂಸ್ಥೆ ಪದವಿ ಪೂರ್ವ ಸ್ಕಾಲರ್ಶಿಪ್ ಕಾರ್ಯಕ್ರಮದಲ್ಲಿ ಸುಮಾರು 5000 ಪ್ರತಿಭೆ ಇರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಘೋಷಿಸಿದೆ. ಇದು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸ್ಕಾಲರ್ಶಿಪ್. ಇದಕ್ಕಾಗಿ ಅರ್ಜಿ ಆಹ್ವಾನ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿ ಹಾಕಲು ಕೊನೆಯ ದಿಮ 2023ರ ಫೆಬ್ರವರಿ 14. ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು, ಬೇಕಾಗುವ ಅರ್ಹತೆ ಮತ್ತು ಬೇರೆ ಇವರಗಳನ್ನು ತಿಳಿಸುತ್ತೇವೆ ನೋಡಿ..

ಅಂಡರ್ ಗ್ರಾಜುಯೆಟ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕುವ ವಿದ್ಯಾರ್ಥಿಯ ಮನೆಯವರ ವಾರ್ಷಿಕ ಆದಾಯ 15 ಲಕ್ಷಕ್ಕಿಂತ ಕಡಿಮೆ ಇರಬೇಕು. ಹಾಗೆಯೇ ಯಾವುದೇ ಒಂದು ಸ್ಟ್ರೀಮ್ ನಲ್ಲಿ ಪದವಿ ಪೂರ್ವ ಕೋರ್ಸ್ ಓದುತ್ತಿರಬೇಕು. ಪದವಿ ಮೊದಲ ವರ್ಷದಲ್ಲಿ ಓದುತ್ತಿರುವವರು ಕೂಡ ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬಹುದು, ಇವರು 12ನೇ ತರಗತಿಯಲ್ಲಿ ಮಿನಿಮಂ 60% ಸ್ಕೋರ್ ಮಾಡಿರಬೇಕು. ಇವರು ರೆಗ್ಯುಲರ್ ಆಗಿ ಕೋರ್ಸ್ ಮಾಡುತ್ತಿರಬೇಕು, ಇದಕ್ಕೆ ಭಾರತೀಯ ವಿದ್ಯಾರ್ಥಿಗಳು ಮಾತ್ರ ಅರ್ಹರಾಗುತ್ತಾರೆ. ಹೆಣ್ಣುಮಕ್ಕಳಿಗೆ ಮತ್ತು ಅಂಗವಿಕಲರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದನ್ನು ಓದಿ..LIC Policy: ಒಂದು ದಿನಕ್ಕೆ 40 ರೂಪಾಯಿ ಕಟ್ಟಿದರೆ, LIC ಕೊಡುತ್ತಿದೆ 25 ಲಕ್ಷದ ಪಾಲಿಸಿ: ಇಂದೇ ಮಾಡಿಸಿ. ಹೇಗೆ ಗೊತ್ತೇ??

ಇದಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳ ಕೋರ್ಸ್ ಮುಗಿಯುವವರೆಗು 2 ಲಕ್ಷ ಸ್ಕಾಲರ್ಶಿಪ್ ಪಡೆಯುತ್ತಾರೆ.
ಇದರಲ್ಲಿ ನಿಮ್ಮ ಈಗಿನ ಕೋರ್ಸ್ ಗೆ ಸ್ಕಾಲರ್ಶಿಪ್ ಮಾತ್ರವಲ್ಲದೆ, ಉನ್ನತ ಶಿಕ್ಷಣ ಮುಂದುವರೆಸಲು ಬಯಸಿದರೆ, ಅದಕ್ಕೂ ನಿಮಗೆ ಸಪೋರ್ಟ್ ಸಿಗುತ್ತದೆ. ದೇಶಾದ್ಯಂತ ಇರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಈ ಸ್ಕಾಲರ್ಶಿಪ್ ನೀಡುತ್ತಿದೆ ರಿಲಯನ್ಸ್ ಸಂಸ್ಥೆ. ತಾವು ಅಯ್ಕೆ ಮಾಡಿರುವ ಸ್ಟ್ರೀಮ್ ನಲ್ಲಿ ಮೊದಲ ವರ್ಷದ ಪದವಿ ಓದುತ್ತಿರವವರು ಮಾತ್ರ ಈ ಸ್ಕಾಲರ್ಶಿಪ್ ಗೆ ಅರ್ಹರಾಗುತ್ತಾರೆ. ಈಗಾಗಲೇ 5000 ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಹರಾಗಿದ್ದಾರೆ. ಇಡೀ ಪದವಿ ಓದಿ ಮುಗಿಸಲು ಸ್ಕಾಲರ್ಶಿಪ್ ಇರುತ್ತದೆ.

ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು,
https://scholarships.reliancefoundation.org/UG_Scholarship.aspx ವೆಬ್ದೈಟ್ ವಿಸಿಟ್ ಮಾಡಿ. ಇಲ್ಲಿ ಎಲ್ಲಾ ವಿವರಗಳನ್ನು ಓದಿರ ಬಳಿಕ, ಅಪ್ಲೈ ಮಾಡಲು ಕ್ಲಿಕ್ ಮಾಡಿ. ನಿಮ್ಮ ಹೆಸರು ಶೈಕ್ಷಣಿಕ ಅರ್ಹತೆ ಮತ್ತು ಎಲ್ಲಾ ನಿಯಮಗಳು ಹಾಗೂ ಬೇಕಿರುವ ದಾಖಲೆಗಳನ್ನು ನೀಡಿ. ಇಲ್ಲಿ ಆಯ್ಕೆ ಪ್ರಕ್ರಿಯೆ ಆಪ್ಟಿಟ್ಯೂಡ್ ಟೆಸ್ಟ್, ಫಸ್ಟ್ ಲೆವೆಲ್ ಸೆಲೆಕ್ಷನ್, ಫೈನಲ್ ಲೆವೆಲ್ ಸೆಲೆಕ್ಷನ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಪ್ಟಿಟ್ಯೂಡ್ ಟೆಸ್ಟ್ ಆನ್ಲೈನ್ ನಡೆಯುತ್ತದೆ, 60 ಪ್ರಶ್ನೆ 60 ನಿಮಿಷಗಳು. ಇದರಲ್ಲಿ ವರ್ಬಲ್ ಎಬಿಲಿಟಿ, ಅನಾಲಿಟಿಕಲ್, ಲಾಜಿಕಲ್, ನ್ಯೂಮರಿಕಲ್ ಎಬಿಲಿಟಿ ಇವುಗಳ ಬಗ್ಗೆ ಪ್ರಶ್ನೆ ಇರುತ್ತದೆ. ಶಾರ್ಟ್ ಲಿಸ್ಟ್ ಅನ್ನು 2023ರ ಮಾರ್ಚ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. 5000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಇದನ್ನು ಓದಿ..Health Tips: ಹೃದಯದ ಸಮಸ್ಯೆಗಳು ಬರಬರಾದು ಎಂದರೆ, ಅಡುಗೆ ಎಣ್ಣೆಯಲ್ಲಿ ಬದಲಾವಣೆ ಮಾಡಿ. ಈ ಎಣ್ಣೆಯನ್ನು ಬಳಸಿದರೆ ಹೃದಯದ ಸಮಸ್ಯೆ ಬರಲ್ಲ.

Comments are closed.